ಕರ್ನಾಟಕ

karnataka

ETV Bharat / state

ಕೊರೊನಾಗೆ ಬಲಿಯಾದ ವಾರಿಯರ್ಸ್​ಗಳಿಗೆ 30 ಲಕ್ಷ ಪರಿಹಾರ ಘೋಷಣೆ: ಗವರ್ನರ್​​ ಭಾಷಣಕ್ಕೆ ಕಾಂಗ್ರೆಸ್​ ವಿರೋಧ

ರಾಜ್ಯಪಾಲರ ಭಾಷಣಕ್ಕೆ ಕಾಂಗ್ರೆಸ್‌ನಿಂದ ವಿರೋಧ ವ್ಯಕ್ತವಾಗಿದೆ. ವಿಧಾನಸಭೆಯಲ್ಲಿ ಭಿತ್ತಿಪತ್ರ ಪ್ರದರ್ಶಿಸಿ ಪ್ರತಿಭಟನೆ ಕೈಗೊಂಡಿದ್ದಾರೆ. ಕಾಂಗ್ರೆಸ್ ವಿರೋಧದ ನಡುವೆ ರಾಜ್ಯಪಾಲರ ಭಾಷಣ ಮಾಡಿದರು.

ರಾಜ್ಯಪಾಲರ ಆಗಮನಕ್ಕೆ ವಿಧಾನಸೌಧ ಸಜ್ಜು
Preparation going in Vidhana soudha for Governor visits

By

Published : Jan 28, 2021, 10:57 AM IST

Updated : Jan 28, 2021, 1:37 PM IST

ಬೆಂಗಳೂರು:ವಿಧಾನಮಂಡಲದಜಂಟಿ ಅಧಿವೇಶನ ಉದ್ದೇಶಿಸಿ ರಾಜ್ಯಪಾಲ ವಾಜುಭಾಯ್​ ವಾಲಾ ಮಾತನಾಡಿದರು. ವಿಧಾನಸಭೆ ಹಾಗೂ ವಿಧಾನ ಪರಿಷತ್ ಸದಸ್ಯರನ್ನು ಉದ್ದೇಶಿಸಿ ಭಾಷಣ ಶುರು ಮಾಡಿದ ರಾಜ್ಯಪಾಲರು, ಕೊರೊನಾ ವಿರುದ್ಧ ಹೋರಾಡುವಲ್ಲಿ ಸರ್ಕಾರ ಯಶ್ವಸಿಯಾಗಿದೆ. ಸರ್ಕಾರದ ನಿಯಮಗಳನ್ನು ಅಚ್ಚುಕಟ್ಟಾಗಿ ಜನತೆ ಪಾಲನೆ ಮಾಡಿದೆ. ಇದಕ್ಕೆ ಕೊರೊನಾ ವಾರಿಯರ್ಸ್​ಗಳ ಸೇವೆ ಮುಖ್ಯವಾಗಿದೆ ಎಂದು ಹೇಳುವ ಮೂಲಕ ಅವರಿಗೆ ಧನ್ಯವಾದ ಅರ್ಪಿಸಿದರು.

ರಾಜ್ಯಪಾಲ ವಜುಭಾಯಿ ವಾಲಾ

ಕೊರೊನಾ ವಾರಿಯರ್​ಗಳಿಗೆ ಪರಿಹಾರ ಘೋಷಣೆ:

ಇದೆ ವೇಳೆ, ಕೊರೊನಾಗೆ ಬಲಿಯಾದ ವಾರಿಯರ್ಸ್​ಗಳಿಗೆ ಸರ್ಕಾರದಿಂದ 30 ಲಕ್ಷ ರೂ. ಪರಿಹಾರ ಘೋಷಣೆ ಮಾಡಿದರು. ಕೊರೊನಾ ಸಂದರ್ಭದಲ್ಲಿ ವೈದ್ಯರು, ನರ್ಸ್​ಗಳು ಹೋರಾಟ ನಡೆಸಿದ್ದಾರೆ. ಕರ್ನಾಟಕ ವೈದ್ಯಕೀಯ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿದೆ ಎಂದು ಸರ್ಕಾರದ ಬೆನ್ನು ತಟ್ಟಿದರು.

ಲಾಕ್​ಡೌನ್ ಸಮಯದಲ್ಲಿ ಸರ್ಕಾರ ಜನರಿಗೆ ಸಾಕಷ್ಟು ವ್ಯವಸ್ಥೆ ಮಾಡಿದೆ. ಜನರಿಗೆ ಯಾವುದೇ ಸಮಸ್ಯೆ ಆಗದಂತೆ ನೋಡಿಕೊಂಡಿದೆ. ಜನರಿಗೆ ಸಮಸ್ಯೆಯಾಗದಂತೆ ಸರ್ಕಾರ ಎಚ್ಚರ ವಹಿಸಿದೆ ಎಂದರು.

ರಾಜ್ಯ ಸರ್ಕಾರ ರೈತರ ಕಲ್ಯಾಣಕ್ಕೆ ಕ್ರಮ ಕೈಗೊಂಡಿದೆ. ವಿದ್ಯುತ್​ ಉತ್ಪಾದನೆ ಕರ್ನಾಟಕ ಸಾಕಷ್ಟು ಅಭಿವೃದ್ದಿಯಾಗಿದೆ. ಪಸಲ್​ ಭಿಮಾ ಯೋಜನೆಯಿಂದ ರೈತರಿಗೆ ಅನುಕೂಲಾಗಿದೆ. ಭಿಮಾ ಯೋಜನೆ ಯಶ್ವಸಿಯಾಗಿ ಅನುಷ್ಠಾಗೊಂಡಿದೆ. ರಾಜ್ಯದಲ್ಲಿ ಫಸಲಿನ ಪ್ರಮಾಣ ಹೆಚ್ಚಾಗಿದೆ. ಕೃಷಿ ಕ್ಷೇತ್ರದಲ್ಲಿಯಲ್ಲಿ ಸರ್ಕಾರ ಮುಂಜೂಣಿಯಲ್ಲಿದೆ. ರಾಜ್ಯದಲ್ಲಿ ಉದ್ಯೋಗ ಸೃಷ್ಟಿಯಾಗಿದೆ ಎಂದರು.

ಓದಿ: ಖಾಸಗಿ ಶಾಲೆಗಳ ಶುಲ್ಕ ನಿಗದಿಗೆ ಒತ್ತಾಯ: ಶಿಕ್ಷಣ ಸಚಿವರ ವಿರುದ್ಧ ಪೋಷಕರ ಆಕ್ರೋಶ

ಭಾಷಣಕ್ಕೆ ಕಾಂಗ್ರೆಸ್​ ವಿರೋಧ: ಬಿತ್ತಿ ಪತ್ರ ಪ್ರದರ್ಶನ

ರಾಜ್ಯಪಾಲರ ಭಾಷಣಕ್ಕೆ ಕಾಂಗ್ರೆಸ್‌ನಿಂದ ವಿರೋಧ ವ್ಯಕ್ತವಾಗಿದೆ. ವಿಧಾನಸಭೆಯಲ್ಲಿ ಭಿತ್ತಿಪತ್ರ ಪ್ರದರ್ಶಿಸಿ ಪ್ರತಿಭಟನೆ ಕೈಗೊಂಡಿದ್ದಾರೆ
ಕಾಂಗ್ರೆಸ್ ವಿರೋಧದ ನಡುವೆ ರಾಜ್ಯಪಾಲರ ಭಾಷಣ ಮಾಡುತ್ತಿದ್ದಾರೆ. ಕೊರೊನಾ ವಿರುದ್ಧ ರಾಜ್ಯದ ಜನರು ಹೋರಾಡಿದ್ದಾರೆ. ಕೊರೊನಾ ವಿರುದ್ಧದ ಹೋರಾಟದಲ್ಲಿ ಸರ್ಕಾರ ಯಶಸ್ವಿ ಕಂಡಿದೆ. ಸರ್ಕಾರದ ನಿಯಮಗಳನ್ನ ಜನ ಅಚ್ಚುಕಟ್ಟಾಗಿ ಪಾಲಿಸಿದ್ದಾರೆ ಎಂದರು.

80 ಲಕ್ಷಕ್ಕಿಂತ ಹೆಚ್ಚು RTPCR ಟೆಸ್ಟ್ :

80 ಲಕ್ಷಕ್ಕಿಂತ ಹೆಚ್ಚು RTPCR ಟೆಸ್ಟ್ ನಡೆಸಲಾಗಿದೆ. ದೇಶದಲ್ಲಿಯೇ ಅತಿ ಹೆಚ್ಚು ಕೊವಿಡ್ ಟೆಸ್ಟ್ ಮಾಡಲಾಗಿದೆ. 1.36 ಲಕ್ಷ ಕೊರೊನಾ ಸೋಂಕಿತರಿಗೆ ಉಚಿತ ಚಿಕಿತ್ಸೆ ನೀಡಲಾಗಿದೆ. 248 ಕೋಟಿ ರೂಪಾಯಿ ವೆಚ್ಚದಲ್ಲಿ ಉಚಿತ ಚಿಕಿತ್ಸೆ ನೀಡಲಾಗಿದೆ. ದಾಸೋಹ ಯೋಜನೆಯಡಿ ಉಚಿತವಾಗಿ ಪಡಿತರ ವಿತರಣೆ ಮಾಡಲಾಗಿದೆ. 8,919 ಕುಟಂಬಗಳಿಗೆ ಉಚಿತವಾಗಿ 10 ಕೆಜಿ ಅಕ್ಕಿ, 5 ಕೆಜಿ ಗೋಧಿ ವಿತರಣೆ ಮಾಡಲಾಗಿದೆ ಎಂದು ಸರ್ಕಾರದ ಸಾಧನೆಯನ್ನು ಅಂಕಿ ಅಂಶ ಸಮೇತ ರಾಜ್ಯಪಾಲರು ಸದನಕ್ಕೆ ತಿಳಿಸಿದರು.

2ಲಕ್ಷ ರೈತರಿಗೆ ಮಳೆ ಕೊಯ್ಲು ಯೋಜನೆಯಿಂದ ಲಾಭ:

378 ಮಳೆ ನೀರು ಕೊಯ್ಲು ನಿರ್ಮಿಸಲಾಗಿದೆ. ಪ್ರಧಾನಿ ಕೃಷಿ ಸಿಂಚಾಯಿ ಯೋಜನೆಯಡಿ ನಿರ್ಮಾಣ ಮಾಡಲಾಗಿದೆ. ಮಳೆಯಾಶ್ರಿತ ಪ್ರದೇಶದ 2.76 ಲಕ್ಷ ರೈತರಿಗೆ ಅನುಕೂಲ ಮಾಡಿಕೊಟ್ಟಿದೆ. 2.10 ಕೋಟಿ ಜಮೀನುಗಳ ಬೆಳೆ ಸಮೀಕ್ಷೆ ಮಾಡಿದ್ದು, ಇದರಲ್ಲಿ 80 ಲಕ್ಷ ರೈತರೇ ಖುದ್ದು ಸಮೀಕ್ಷೆ ಮಾಡಿದ್ದಾರೆ. 32,878 ಹೆಕ್ಟೇರ್ ಪ್ರದೇಶಕ್ಕೆ ಹನಿ ನೀರಾವರಿ ಯೋಜನೆ ಮಾಡಲಾಗಿದೆ ಎಂದು ರಾಜ್ಯಪಾಲರು ಹೇಳಿದರು. ರಾಮನಗರ, ಚಿಕ್ಕಬಳ್ಳಾಪುರ, ಬೆಂಗಳೂರು, ಮಂಡ್ಯ, ಕೊಪ್ಪಳ, ಬೆಳಗಾವಿ, ಉಡುಪಿ ಜಿಲ್ಲೆಗಳ ಕೆರೆಗಳಿಗೆ ಸಂಸ್ಕರಿಸಿದ ನೀರು ತುಂಬುವುದಕ್ಕೆ ಯೋಜನೆ ಹಮ್ಮಿಕೊಳ್ಳಲಾಗಿದೆ ಎಂದು ಇದೇ ವೇಳೆ ವಾಜುಭಾಯಿ ವಾಲಾ ಘೋಷಣೆ ಮಾಡಿದರು.

ಆಟೋ ಚಾಲಕರು ಸೇರಿ ಇತರರಿಗೆ 5,372 ಕೋಟಿ ರೂ ನೆರವು:

ಆಟೋ ಚಾಲಕರು, ಮಡಿವಾಳರಿಗೆ ಹಣಕಾಸು ನೆರವು ನೀಡಲಾಗಿದೆ. 63,59,000 ಫಲಾನುಭವಿಗಳಿಗೆ ಹಣಕಾಸು ನೆರವು ಹಾಗೂ 5,372 ಕೋಟಿ ರೂಪಾಯಿ ನೀಡಲಾಗಿದೆ. 16.45 ಲಕ್ಷ ಕಾರ್ಮಿಕರಿಗೆ 824 ಕೋಟಿ ರೂ. ಹಣ ಅವರವರ ಖಾತೆಗೆ ಹಾಕಲಾಗಿದೆ. 11,770 ಚರ್ಮ ಕುಶಲ ಕರ್ಮಿಗಳಿಗೆ ತಲಾ 5 ಸಾವಿರ ರೂ. ಧನ ಸಹಾಯ ಮಾಡಲಾಗಿದೆ. ಕಿಸಾನ್ ಸಮ್ಮಾನ್ ಯೋಜನೆಯಡಿ 51 ಲಕ್ಷ ರೈತರಿಗೆ ತಲಾ 2,000 ಹೆಚ್ಚುವರಿ ಹಣ ನೀಡಿದ್ದೇವೆ. ಇದಕ್ಕಾಗಿ ಒಟ್ಟು 1,020 ಕೋಟಿ ರೂಪಾಯಿ ಖರ್ಚು ಮಾಡಲಾಗಿದೆ. ರಾಜ್ಯ ಸರ್ಕಾರ ಕನಿಷ್ಠ ಬೆಂಬಲ ನೀಡಿ 61,379 ಮೆಟ್ರಿಕ್ ಟನ್ ಭತ್ತ, 1.93 ಮೆಟ್ರಿಕ್ ಟನ್ ರಾಗಿ ಹಾಗೂ 9,256 ಮೆಟ್ರಿಕ್ ಟನ್ ಜೋಳ ಖರೀದಿ ಮಾಡಲಾಗಿದೆ ಎಂದು ಸರ್ಕಾರ ಇದುವರೆಗೂ ಮಾಡಿದ ಕೆಲಸವನ್ನ ಅಂಕಿ- ಅಂಶಗಳ ಸಮೇತ ರಾಜ್ಯಪಾಲರು ಸದನಕ್ಕೆ ವಿವರಿಸಿದರು.

ರಾಜ್ಯಪಾಲ ವಜುಬಾಯಿ ವಾಲಾ ಭಾಷಣದ ಹೈಲೈಟ್ಸ್

  • ವಿದ್ಯುತ್ ಗ್ರಾಹಕರಿಗೆ, ಉದ್ದಿಮೆಗಳಿಗೆ ಪ್ರೋತ್ಸಾಹ ನೀಡಲಾಗ್ತಿದೆ
  • ಲಾಕ್​ಡೌನ್ ವೇಳೆ ಸಿಲುಕಿಕೊಂಡಿದ್ದ 6780 ವಿದೇಶಿ ಪ್ರವಾಸಿಗರ ರಕ್ಷಣೆ
  • ಸ್ವದೇಶಕ್ಕೆ ಹೋಗಲು ಸಹಾಯ ಮಾಡಲಾಗಿದೆ
  • ಬೆಳೆ ಸಮೀಕ್ಷೆಯ ಡಿಜಟಲೀಕರಣ ಶ್ಲಾಘನೀಯ
  • ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಗೆ ಆದ್ಯತೆ
  • 1194 ಮಾನವ ದಿನಗಳ ಸೃಜಿಸಲಾಗಿದೆ
  • ಇದಕ್ಕೆ 4540 ಕೋಟಿ ಹಣಕಾಸು ನೆರವು ನೀಡಲಾಗಿದೆ
  • 300 ಕೋಟಿ ವೆಚ್ಚದಲ್ಲಿ ಏತ ನೀರಾವರಿ ಯೋಜನೆಗೆ ಅನುಮೋದನೆ.
  • ರಾಮನಗರ, ಚಿಕ್ಕಬಳ್ಳಾಪುರ, ಮಂಡ್ಯ ಸೇರಿ ವಿವಿಧ ಜಿಲ್ಲೆಗಳ ಕೆರೆಗಳಿಗೆ ಸಂಸ್ಕರಿಸಿದ ನೀರು.
  • 14320 ಕುಟುಂಬಳಿಗೆ ವಿದ್ಯುತ್ ಸೌಲಭ್ಯ ಕಲ್ಪಿಸಲಾಗಿದೆ
  • ನನ್ನ ಶಾಲೆ ನನ್ನ ಕೊಡುಗೆ ಕಾರ್ಯಕ್ರಮ ಪ್ರಾರಂಭ
  • 80 ಲಕ್ಷಕ್ಕೂ ಹೆಚ್ಚು ಆರ್ ಟಿಪಿಸಿಆರ್ ಟೆಸ್ಟ್ ಮಾಡಲಾಗಿದೆ
  • 248 ಕೋಟಿ ವೆಚ್ಚದಲ್ಲಿ‌1.36 ಲಕ್ಷ ಕೋವಿಡ್ ರೋಗಿಗಳಿಗೆ ಉಚಿತ ಚಿಕಿತ್ಸೆ ನೀಡಲಾಗಿದೆ
  • ಬಡ ವರ್ಗದ ಜನರಿಗೆ 5372 ಕೋಟಿ ಆರ್ಥಿಕ ನೆರವು ನೀಡಿದೆ
  • ನೇಕಾರರು, ಅಸಂಘಟಿತ ಕಾರ್ಮಿಕರಿಗೆ, ಮಡಿವಾಳರು, ಆಟೋ ಚಾಲಕರು, ಸವಿತಾ ಸಮಾಜಕ್ಕೆ ಅನುಕೂಲ
  • ಸುಮಾರು 63,59,000 ಫಲಾನುಭವಿಗಳಿಗೆ ಹಣ ಸಹಾಯ ಮಾಡಲಾಗಿದೆ
  • ಕಿಸಾನ್ ಸಮ್ಮಾನ್ ಯೋಜನೆಯಡಿ 51 ಲಕ್ಷ ರೈತರಿಗೆ ತಲಾ 2 ಸಾವಿರ ರೂ
  • ಇದಕ್ಕೆ 1020 ಕೋಟಿ ಹೆಚ್ಚುವರಿ ಹಣ ಮಂಜೂರು ಸರ್ಕಾರ ಮಾಡಿದೆ
  • ಬೆಂಗಳೂರಿನಲ್ಲಿ ಟ್ರಾಫಿಕ್ ನಿಯಂತ್ರಣಕ್ಕೆ ಆದ್ಯತೆ
  • 15,767 ಕೋಟಿ ವೆಚ್ವದಲ್ಲಿ ಬೆಂ.ಉಪನಗರ ರೈಲ್ವೇ ಯೋಜನೆಗೆ ಅನುಮೋದನೆ
  • ರಾಜ್ಯ ಸರ್ಕಾರದಿಂದ ಮಾಹಿತಿ ತಂತ್ರಜ್ಞಾನ ನೀತಿ 2020-25 ಘೋಷಣೆ
  • ವರ್ಚುವಲ್ ಮೂಲಕ ಬೆಂಗಳೂರು ಟೆಕ್ ಶೃಂಗ ಸಭೆ ಯಶಸ್ವಿಯಾಗಿದೆ
  • ಜನ ಸೇವಕ, ಗ್ರಾಮ ಒನ್ ಮೂಲಕ ಸರ್ಕಾರಿ ಸೇವೆಗಳು ಮನೆಬಾಗಿಲಿದೆ
  • ಹೊಸ ಕೈಗಾರಿಕಾ ನೀತಿ 2020-25 ಜಾರಿ
  • ಐದು ಲಕ್ಷ ಕೋಟಿ ಹೂಡಿಕೆ ಗುರಿ ಇದೆ
  • ಇಪ್ಪತ್ತು ಲಕ್ಷ ಉದ್ಯೋಗ ಸೃಷ್ಟಿ ಗುರಿ ಹೊಂದಲಾಗಿದೆ
  • ಬೆಂಗಳೂರು ಮಿಷನ್ 2022 ಪ್ರಾರಂಭ
  • 8015 ಕೋಟಿ ವೆಚ್ಚದಲ್ಲಿ ಬಿಬಿಎಂಪಿ ವ್ಯಾಪ್ತಿಯಲ್ಲಿ ಮೂಲಸೌಕರ್ಯ ವ್ಯವಸ್ಥೆಗೆ ಅನುಮೋದನೆ ನೀಡಲಾಗಿದೆ
  • ಹೊಸದಾಗಿ ಸೇರಿದ 110 ಹಳ್ಳಿಗಳಿಗೆ ಚರಂಡಿ ವ್ಯವಸ್ಥೆ
  • ಇದಕ್ಕೆ ಒಂದು ಸಾವಿರ ಕೋಟಿ ಅನುದಾನ.
  • 35 ವಸತಿ ಯೋಜನೆಗಳನ್ನ ಕೈಗೆತ್ತಿಕೊಳ್ಳಲಾಗಿದೆ
  • 256 ಎಕರೆ ಪ್ರದೇಶದಲ್ಲಿ 14,909 ವಸತಿ ಘಟಕ ನಿರ್ಮಾಣ ಗುರಿ
  • ರೇರಾ ಅನುಸಾರವಾಗಿ ನಾಡಪ್ರಭು ಕೆಂಪೇಗೌಡ ಲೇಔಟ್ ಅಭಿವೃದ್ದಿ
  • ಸ್ವಚ್ಚ ಭಾರತ್ ಅಡಿ 3.15 ಲಕ್ಷ ಗೃಹ ಶೌಚಾಲಯ ನಿರ್ಮಾಣ
  • ಸ್ಮಾರ್ಟ್ ಸಿಟಿ ಯೋಜನೆಯಡಿ 7 ಸ್ಮಾರ್ಟ್ ಸಿಟಿ ಅಭಿವೃದ್ದಿ
  • 6233 ಕೋಟಿ ವೆಚ್ಚದಲ್ಲಿ 345 ಯೋಜನೆಗಳು ಪ್ರಗತಿಯಲ್ಲಿವೆ
  • ಮೆಟ್ರೋ ಎರಡನೇ ಹಂತ ಹಾಗೂ ಎರಡನೇ ಎ ಹಂತ ಪ್ರಗತಿಯಲ್ಲಿದೆ
  • 2022 ರೊಳಗೆ 75 ಕಿ.ಮೀ. ಮೆಟ್ರೋ ಮಾರ್ಗ ನಿರ್ಮಾಣ ಗುರಿ.
  • ಸರ್ಕಾರ ಮಾದಕ ವಸ್ತುಗಳ ವಿರುದ್ಧ ಯುದ್ಧ ಘೋಷಿಸಿದೆ
Last Updated : Jan 28, 2021, 1:37 PM IST

ABOUT THE AUTHOR

...view details