ಬೆಂಗಳೂರು:ಪ್ಲಾಸ್ಟರ್ ಆಫ್ ಪ್ಯಾರಿಸ್ ಗಣೇಶ ಬೆಂಗಳೂರಿಗೆ ನೋ ಎಂಟ್ರಿ ಅಂದವರ ಕಣ್ಣಿಗೆ, ಈ ಪಿಓಪಿ ಗಣೇಶ ಮೂರ್ತಿಗಳನ್ನು ಎಲ್ಲೆಂದರಲ್ಲಿ ಬಿಸಾಡಿರುವುದು ಕಂಡುಬಂದಿದೆ. ಈ ಕುರಿತ ವಿಡಿಯೋವೊಂದು ವೈರಲ್ ಆಗಿದೆ.
ಪಾಲಿಕೆಯಿಂದ ಪಿಓಪಿ ಗಣೇಶನಿಗೆ ನೋ ಎಂಟ್ರಿ: ಕಸಕ್ಕೆ ಬಿಸಾಡಿದ ಜನ!
ಬೆಂಗಳೂರಿನಲ್ಲಿ BBMP ಪಿಓಪಿ ಗಣೇಶನನ್ನು ನಿಷೇಧಿಸಿದ್ದರೂ, ಜನ ತಲೆಕೆಡಿಸಿಕೊಳ್ಳದೆ ಪಿಒಪಿ ಗಣಪನನ್ನು ಹಬ್ಬಕ್ಕೆ ಪೂಜಿಸಿ ಬಳಿಕ ನಿಮಜ್ಜನೆಯನ್ನು ಕೆರೆಗಳಲ್ಲಿ ಮಾಡುತ್ತಿದ್ದಾರೆ. ಆದರೆ, ನೀರಿನಲ್ಲಿ ಕರಗಲಿಲ್ಲ ಎಂದು ಕಸಕ್ಕೆ ಹಾಕಿರುವ ಘಟನೆಗಳು ಬೆಳಕಿಗೆ ಬರುತ್ತಿವೆ.
ಲಾಲ್ ಬಾಗ್, ಮಾವಳ್ಳಿ, ಹಲಸೂರು, ಹೀಗೆ ಹಲವೆಡೆ ಪಿಓಪಿ ಗಣೇಶ ಮೂರ್ತಿಗಳನ್ನಿಟ್ಟು ಪೂಜೆ ಮಾಡಿದ್ದಾರೆ. ನಂತ್ರ ಗಣಪನನ್ನ ನೀರಿಗೆ ಹಾಕಿದಾಗ ಕರಗಲಿಲ್ಲ ಎಂದು ಕಸಕ್ಕೆ ಹಾಕಿ ಹೋಗುತ್ತಿದ್ದಾರೆ. ಪಿಓಪಿ ಮೂರ್ತಿಗಳಿಗೆ ನಿಷೇಧ ಹೇರಿ, ಮಣ್ಣಿನ ಗಣಪಗಳಿಗೆ ಮಾತ್ರ ಪಾಲಿಕೆ ಗ್ರೀನ್ ಸಿಗ್ನಲ್ ಕೊಟ್ಟಿತ್ತು. ಅಲ್ಲದೆ, ಪಾಲಿಕೆ ಅಧಿಕಾರಿಗಳು ಹಲವೆಡೆ ದಾಳಿ ನಡೆಸಿ ಪರಿಶೀಲನೆ ಕೂಡ ನಡೆಸಿದ್ರು. ಇದಾದ ಬಳಿಕವೂ ಹಲವೆಡೆ ಮಾರಾಟ ಮುಂದುವರೆದಿತ್ತು. ಮಾವಳ್ಳಿ, ಲಾಲ್ ಬಾಗ್, ಹಲಸೂರು ಭಾಗದ ಕೆರೆಗಳಲ್ಲಿ ಹಾಗೂ ಪಾತ್ರೆಗಳಲ್ಲಿ ಗಣೇಶನ ಮೂರ್ತಿಗಳನ್ನು ನಿಮಜ್ಜನ ಮಾಡಿದ್ದಾರೆ.
ಮೂರ್ತಿಗಳು ಕರಗದೆ ಹಾಗೆ ಉಳಿದಿದ್ದು ಇದರಿಂದ ಜಲಚರಗಳು, ಪ್ರಾಣಿ, ಪಕ್ಷಿಗಳಿಗೆ ಹಾನಿಯಾಗಿದೆ. ಸದ್ಯ ಬಿಬಿಎಂಪಿ ಹಾಗೂ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳು ಇದನ್ನ ಗಮನಿಸಿಲ್ಲವೆಂಬ ಆರೋಪ ಕೇಳಿಬಂದಿದೆ.