ಕರ್ನಾಟಕ

karnataka

ETV Bharat / state

ಬಸ್​ಗಳ ಮೇಲೆ ಕಲ್ಲು ತೂರಾಟ ಮಾಡಿದರೆ ನೇರ ಜೈಲಿಗೆ: ಕಮಲ್‌ ಪಂತ್ ಖಡಕ್ ವಾರ್ನಿಂಗ್ - Ksrtc strike news

ಇದುವರೆಗೂ ಪ್ರತಿಭಟನೆಗೆ ಅನುಮತಿ ಕೇಳಿಲ್ಲ. ಒಂದು ವೇಳೆ‌ ಪ್ರತಿಭಟನೆ ಮಾಡಿದರೂ ಮುಲಾಜಿಲ್ಲದೇ ಬಂಧಿಸಲಾಗುವುದು. ಈಗಾಗಲೇ ನಗರದಲ್ಲಿ ಸೂಕ್ತ ಪೊಲೀಸ್ ಬಂದೋಬಸ್ತ್ ಮಾಡಲು ಸಿದ್ಧತೆ ಕೈಗೊಂಡಿದ್ದೇವೆ. ಕರ್ತವ್ಯಕ್ಕೆ ಹಾಜರಾಗುವವರಿಗೆ ಆರ್ಮ್ ಎಸ್ಕಾರ್ಟ್​ನಲ್ಲಿ ಭದ್ರತೆ ಕೊಡುತ್ತೇವೆ ಎಂದು ನಗರ ಪೊಲೀಸ್ ಆಯುಕ್ತ ಕಮಲ್‌ ಪಂತ್ ಹೇಳಿದ್ದಾರೆ.

ಪೊಲೀಸ್ ಆಯುಕ್ತ ಕಮಲ್‌ ಪಂತ್ ಖಡಕ್ ವಾರ್ನಿಂಗ್
ಪೊಲೀಸ್ ಆಯುಕ್ತ ಕಮಲ್‌ ಪಂತ್ ಖಡಕ್ ವಾರ್ನಿಂಗ್

By

Published : Apr 6, 2021, 3:30 PM IST

Updated : Apr 7, 2021, 3:42 PM IST

ಬೆಂಗಳೂರು:ಆರನೇ ವೇತನ ಆಯೋಗ ಜಾರಿ ಸೇರಿ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ನಾಳೆಯಿಂದ ಸಾರಿಗೆ ನೌಕರರ ಸಂಘಟನೆ ಕರೆ ನೀಡಿರುವ ಸಾರಿಗೆ ಮುಷ್ಕರಕ್ಕೆ ಬ್ರೇಕ್ ಹಾಕಲು ನಗರ ಪೊಲೀಸ್ ಇಲಾಖೆ ಮುಂದಾಗಿದ್ದು, ಕೋವಿಡ್ ಶಿಷ್ಟಾಚಾರದಂತೆ ನಾಳೆಯಿಂದ‌ ಏ.21 ರ ವರೆಗೆ ನಿಷೇದಾಜ್ಞೆ ಜಾರಿಗೊಳಿಸಿ ಆದೇಶಿದೆ.

ಕಮಲ್‌ ಪಂತ್ ಖಡಕ್ ವಾರ್ನಿಂಗ್

ಈ ಕುರಿತು ಮಾತನಾಡಿದ ನಗರ ಪೊಲೀಸ್ ಆಯುಕ್ತ ಕಮಲ್‌ ಪಂತ್, ಕೊರೊನಾ ಸೋಂಕು ನಿಯಂತ್ರಿಸಲು ಈಗಾಗಲೇ ಹೊರಡಿಸಿರುವ ಕೋವಿಡ್ ಶಿಷ್ಟಾಚಾರ ಜಾರಿಯಲ್ಲಿದೆ. ಇದಕ್ಕೆ‌‌ ಪೂರಕವಾಗಿ ಏ.21 ರ ವರೆಗೆ ನಗರದಲ್ಲಿ 144 ಸೆಕ್ಷನ್ ಜಾರಿಗೊಳಿಸಲಾಗಿದೆ. ಇದರಂತೆ ಯಾರೂ ಸಹ ಪ್ರತಿಭಟನೆ, ಮುಷ್ಕರ ಮಾಡುವಂತಿಲ್ಲ. ಇದುವರೆಗೂ ಪ್ರತಿಭಟನೆಗೆ ಅನುಮತಿ ಕೇಳಿಲ್ಲ. ಒಂದು ವೇಳೆ‌ ಪ್ರತಿಭಟನೆ ಮಾಡಿದರೂ ಮುಲಾಜಿಲ್ಲದೇ ಬಂಧಿಸಲಾಗುವುದು ಎಂದು ಎಚ್ಚರಿಸಿದ್ದಾರೆ.

ಇದನ್ನೂ ಓದಿ:ಮುಷ್ಕರಕ್ಕೆ ಮೂಗುದಾರ! ಸಾರಿಗೆ ನೌಕರರ ರಜೆ ರದ್ದುಗೊಳಿಸಿ ಕೆಎಸ್ಆರ್​ಟಿಸಿ ಆದೇಶ

ಕರ್ತವ್ಯಕ್ಕೆ ಹಾಜರಾಗುವವರಿಗೆ ಆರ್ಮ್ ಎಸ್ಕಾರ್ಟ್​ನಲ್ಲಿ ಭದ್ರತೆ: ಅಹಿತಕರ ಘಟನೆಗೆ ಆಸ್ಪದ ನೀಡಿದರೆ ಅಂತಹವರನ್ನು ಬಂಧಿಸುವ ಕೆಲಸ ಮಾಡಲಿದ್ದೇವೆ. ಈಗಾಗಲೇ ನಗರದಲ್ಲಿ ಸೂಕ್ತ ಪೊಲೀಸ್ ಬಂದೋಬಸ್ತ್ ಮಾಡಲು ಸಿದ್ಧತೆ ಕೈಗೊಂಡಿದ್ದೇವೆ. ಕರ್ತವ್ಯಕ್ಕೆ ಹಾಜರಾಗುವವರಿಗೆ ಆರ್ಮ್ ಎಸ್ಕಾರ್ಟ್​ನಲ್ಲಿ ಭದ್ರತೆ ಕೊಡುತ್ತೇವೆ. ಸಾರಿಗೆ ನೌಕರರು ಕೆಲಸಕ್ಕೆ ಬರೋದು ಬಿಡೋದು ಅವರಿಗೆ ಸಂಬಂಧಿಸಿದ್ದು. ಆದರೆ, ರಸ್ತೆಗಿಳಿದು ಕಲ್ಲು ತೂರಾಟ ಮಾಡಿ, ರಸ್ತೆ ತಡೆ ಮಾಡಿದರೆ ತಕ್ಕ ಶಾಸ್ತಿ ಮಾಡುತ್ತೇವೆ ಎಂದು ಪೊಲೀಸ್​ ಆಯುಕ್ತರು ವಾರ್ನಿಂಗ್ ಕೊಟ್ಟಿದ್ದಾರೆ.

ಖಾಸಗಿಯವರು ಸಹಕಾರ ನೀಡಿದರೆ ತೊಂದರೆ ಆಗದಂತೆ ನೋಡಿಕೊಳುತ್ತೇವೆ: ಏ.21 ರ ವರೆಗೆ ಕೋವಿಡ್ ಪ್ರೋಟೋಕಾಲ್ ಜಾರಿಯಲ್ಲಿದೆ. ಈಗಾಗಲೇ ಸಂಬಂಧಪಟ್ಟ ಅಧಿಕಾರಿಗಳ ಜೊತೆ ಮಾತುಕತೆ ನಡೆದಿದೆ. ನಾಳೆ ಬಸ್ ಇಲ್ಲದಿದ್ದರೆ ಖಾಸಗಿಯವರು ಸಹಕಾರ ನೀಡಿದರೆ ಅವರಿಗೆ ಯಾವುದೇ ತೊಂದರೆ ಆಗದಂತೆ ನೋಡಿಕೊಳುತ್ತೇವೆ ಎಂದು ತಿಳಿಸಿದ್ದಾರೆ.

Last Updated : Apr 7, 2021, 3:42 PM IST

ABOUT THE AUTHOR

...view details