ಕರ್ನಾಟಕ

karnataka

ETV Bharat / state

ಆತ್ಮಗೌರವ, ಸ್ವಾಭಿಮಾನ ಎಲ್ಲರಿಗೂ ಇರುತ್ತೆ ಮರೆಯಬೇಡಿ.. ಸಿಬ್ಬಂದಿಗೆ ಭಾಸ್ಕರ್ ರಾವ್ ಪಾಠ! - Bhaskar Rao

ನನ್ನ ಸಿಬ್ಬಂದಿ ವರ್ಗವೂ ನನ್ನ ಜತೆ ಅಗೌರವದಿಂದ ನಡೆದುಕೊಳ್ಳಬಾರದು ಎಂದು ಜನತೆ ಪರವಾಗಿ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಫೇಸ್​ಬುಕ್​ನಲ್ಲಿ​  ಪೋಸ್ಟ್ ಮಾಡಿದ್ದಾರೆ.

ಪೊಲೀಸ್ ಆಯುಕ್ತ ಭಾಸ್ಕರ್ ರಾವ್

By

Published : Oct 11, 2019, 10:08 PM IST

ಬೆಂಗಳೂರು: ನಾನು ನನ್ನ ಸಿಬ್ಬಂದಿ ವರ್ಗವನ್ನು ಗೌರವವಾಗಿ ನೋಡುತ್ತೇನೆ. ಅವರನ್ನ ನಾನು ಎಂದೂ ಅಗೌರವದಿಂದ ನೋಡುವುದಿಲ್ಲ.‌ ಕಾರಣ ಪ್ರತಿಯೊಬ್ಬರಿಗೂ ಅವರದ್ದೇ ಆದ ಸ್ವಾಭಿಮಾನ, ಆತ್ಮಗೌರವವಿರುತ್ತೆ. ಅದೇ ರೀತಿ ನನ್ನ ಸಿಬ್ಬಂದಿ ವರ್ಗವೂ ನನ್ನ ಜನತೆಯೊಂದಿಗೆ ಅಗೌರವದಿಂದ ನಡೆದುಕೊಳ್ಳಬಾರದು ಎಂದು ಜನತೆ ಪರವಾಗಿ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಫೇಸ್​ಬುಕ್​ನಲ್ಲಿ​ ಪೋಸ್ಟ್ ಮಾಡಿದ್ದಾರೆ.

ಟ್ರಾಫಿಕ್ ಪೊಲೀಸರ ಮೇಲೆ ಸಾರ್ವಜನಿಕರ ಆಕ್ರೋಶ ವಿಚಾರಕ್ಕೆ ವಿಚಾರಕ್ಕೆ ಪ್ರತಿಕ್ರಯಿಸಿದ್ದ ಭಾಸ್ಕರ್​ ರಾವ್​, ಟ್ರಾಫಿಕ್ ಪೊಲೀಸರಿಗೆ ಅವರದ್ದೇ ಆದ ಟೆನ್ಷನ್​ಗಳಿರುತ್ತವೆ. ಹೀಗಾಗಿ ಕೋಪಗೊಂಡು ಸಾರ್ವಜನಿಕರಿಗೆ ನಿಯಮ ಪಾಲಿಸಲು ತಿಳಿಸಿರುತ್ತಾರೆ. ಹೀಗಾಗಿ ಟ್ರಾಫಿಕ್ ಪೊಲೀಸರಿಗೆ ಸಹಕರಿಸಿ ಎಂದು ಸಮರ್ಥಿಸಿಕೊಂಡಿದ್ದರು.

ಈ ಕುರಿತು ಖುದ್ದು ಆಯುಕ್ತರಿಗೆ ಹಲವು ದಾಖಲೆ ಸಮೇತದ ವಿಡಿಯೋಗಳು ಬಂದಿದ್ದವು. ಎಲ್ಲೆಲ್ಲಿ ಪೊಲೀಸರು ಸಾರ್ವಜನಿಕರ ಮೇಲೆ ದರ್ಪ ತೋರಿಸಿದ್ದಾರೆ ಎಂಬುದರ ಕುರಿತು ವಿಡಿಯೋ ಕಳಿಸಿದ್ದರು. ಈ ಹಿನ್ನೆಲೆ ನಾಗರಿಕರೊಂದಿಗೆ ಅಗೌರವದಿಂದ ನಡೆದುಕೊಳ್ಳಬೇಡಿ ಎಂದು ಭಾಸ್ಕರ್​ ರಾವ್​ ಫೇಸ್​ಬುಕ್​ನಲ್ಲಿ ಪೋಸ್ಟ್​ ಮಾಡಿದ್ದರು.

ABOUT THE AUTHOR

...view details