ಕರ್ನಾಟಕ

karnataka

ETV Bharat / state

ಲಾಠಿ ಬಿಟ್ಟು ಕೆಲಸ ಮಾಡ್ತಿದ್ದೀವಿ, ನಮ್ಮನ್ನ ಅರ್ಥ ಮಾಡಿಕೊಳ್ಳಿ: ನಗರ ಪೊಲೀಸ್​ ಆಯುಕ್ತ - corona news

ಅಗತ್ಯ ಅನಿವಾರ್ಯ ಕಾರಣಕ್ಕೆ ಓಡಾಡುವುದಕ್ಕೆ ಪಾಸ್​​ಗಳನ್ನ ನೀಡಲಾಗಿತ್ತು. ಆದರೆ , ಮಾಧ್ಯಮದವರ ಹೆಸರನ್ನ ಹೇಳಿಕೊಂಡು ಕೆಲವರು ವಿನಾಕಾರಣ ಓಡಾಟ ಮಾಡ್ತಿದ್ದಾರೆ. ನಾವು ಮಾಧ್ಯಮದವರಿಗೆ ಐಡಿ ಕಾರ್ಡ್ ಸಾಕು ಎಂದಿದ್ದೇವೆ. ಆದ್ರೆ, ಅದನ್ನ ಮಿಸ್ ಯೂಸ್ ಮಾಡ್ಕೊತಿದ್ದಾರೆ ನಾವು ಲಾಠಿನೂ ಕೂಡ ಉಪಯೋಗಿಸ್ತಿಲ್ಲ, ತುಂಬಾ ತಾಳ್ಮೆಯಿಂದ ಕೆಲಸ ಮಾಡ್ತಿದ್ದೇವೆ . ಹೀಗಾಗಿ ನಮ್ಮ ತಾಳ್ಮೆಗೂ ಒಂದು ಮಿತಿ ಇದೆ ಎಂದು ಬಾಸ್ಕರ್​ ರಾವ್​ ಬೇಸರ ವ್ಯಕ್ತಪಡಿಸಿದರು.

ಭಾಸ್ಕರ್ ರಾವ್
ಭಾಸ್ಕರ್ ರಾವ್

By

Published : Apr 1, 2020, 2:38 PM IST

ಬೆಂಗಳೂರು: ಲಾಕ್​ಡೌನ್ ವೇಳೆಯಲ್ಲಿ ಜನರಿಗೆ ಹಾಗೂ ಅಗತ್ಯ ಸೇವೆ ಪೂರೈಕೆ ಮಾಡುವವರಿಗೆ ಡಿಸಿಪಿ ಕಚೇರಿಗಳಲ್ಲಿ ನೀಡಲಾಗುತಿದ್ದ ಸಾಮಾನ್ಯ ಪಾಸ್​ಗಳು ಸದ್ಯ ದುರ್ಬಳಕೆಯಾಗ್ತಿದೆ ಎಂದು ನಗರ ಆಯುಕ್ತ ಭಾಸ್ಕರ್ ರಾವ್ ಬೇಸರ‌ ಹೊರಹಾಕಿದ್ದಾರೆ.

ಅಗತ್ಯ ಅನಿವಾರ್ಯ ಕಾರಣಕ್ಕೆ ಓಡಾಡುವುದಕ್ಕೆ ಪಾಸ್​​ಗಳನ್ನ ನೀಡಲಾಗಿತ್ತು. ಆದರೆ, ಮಾಧ್ಯಮದವರ ಹೆಸರನ್ನ ಹೇಳಿಕೊಂಡು ಕೆಲವರು ವಿನಾಃ‌ಕಾರಣ ಓಡಾಟ ಮಾಡ್ತಿದ್ದಾರೆ. ನಾವು ಮಾಧ್ಯಮದವರಿಗೆ ಐಡಿ ಕಾರ್ಡ್ ಸಾಕು ಎಂದಿದ್ದೇವೆ. ಆದ್ರೆ, ಅದನ್ನ ಮಿಸ್ ಯೂಸ್ ಮಾಡ್ಕೊತಿದ್ದಾರೆ ನಾವು ಲಾಠಿನೂ ಕೂಡ ಉಪಯೋಗಿಸ್ತಿಲ್ಲ, ತುಂಬಾ ತಾಳ್ಮೆಯಿಂದ ಕೆಲಸ ಮಾಡ್ತಿದ್ದೇವೆ . ಹೀಗಾಗಿ ನಮ್ಮ ತಾಳ್ಮೆಗೂ ಒಂದು ಮಿತಿ ಇದೆ ಎಂದರು.

ಅನವಶ್ಯಕವಾಗಿ ತೆರಳುತ್ತಿರುವವರ ವಾಹನಗಳನ್ನ ವಶಕ್ಕೆ ಪಡೆಯಲು ನಿರ್ಧಾರ ಮಾಡಿದ್ದು, ಸದ್ಯ 5,371 ವಾಹನಗಳನ್ನ ವಶಕ್ಕೆ ಪಡೆದಿದ್ದೇವೆ. ಈಗಾಗಲೆ ಏಳು ದಿನ ಲಾಕ್​ಡೌನ್​ ಆಗಿದೆ. ಲಾಠಿ ಬಿಟ್ಟು ಕೆಲಸ ಮಾಡುತ್ತಿದ್ದೇವೆ. ನಮ್ಮ ಸಿಚುವೇಷನ್ ಅರ್ಥ ಮಾಡಿಕೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.

ದೆಹಲಿಯ‌ ಜಮಾತ್​ಗೆ ಹೋಗಿ ಬಂದವರ ಕುರಿತು ಮಾತನಾಡಿ, ಈಗಾಗಲೇ ಸಿಲಿಕಾನ್ ಸಿಟಿಯಲ್ಲಿರುವವರ ಬಗ್ಗೆ ಲಿಸ್ಟ್ ಮಾಡಿ ಆಯಾ ವಿಭಾಗ ಪೊಲಿಸರು ಅವರ ಬಳಿ ಹೋಗಿ ಹೋಂ ಕ್ವಾರಂಟೈನ್​ ಅಥವಾ ಸರ್ಕಾರಿ ಕ್ವಾರಂಟೈನ್​ನಲ್ಲಿ ಇರಲು ಹೇಳಿದ್ದಾರೆ. ಜಮಾತ್​ಗೆ ಹೋದವರನ್ನ ಯಾರನ್ನೂ ಬಂಧಿಸಲ್ಲ‌. ನಾವೇನು ಮನೆಗೆ ಹೆದರಿಸೋಕೆ ಹೋಗ್ತಿಲ್ಲ, ಕೇಸು ಹಾಕೋದಿಲ್ಲ ಎಂದರು.

ABOUT THE AUTHOR

...view details