ಬೆಂಗಳೂರು :ಸಾಲ ವಸೂಲಿಗೆ ಮುಂದಾಗಿದ್ದ ಸಂಬಂಧಿಕನನ್ನೇ ಚಾಕುವಿನಿಂದ ಹತ್ಯೆ ಮಾಡಿರುವ ಘಟನೆ ಕೆಂಪೇಗೌಡನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಹಾಲಿನ ವ್ಯಾಪಾರ ಮಾಡುತ್ತಿದ್ದ ಚಿಕ್ಕಪೇಟೆ ನಿವಾಸಿ ವಿನೋದ್ ಕುಮಾರ್ ಹತ್ಯೆಯಾಗಿದ್ದು, ಈ ಸಂಬಂಧ ಅರುಣ್ ಎಂಬಾತನನ್ನು ವಶಕ್ಕೆ ಪಡೆದು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.
ಮೃತ ವಿನೋದ್ ಹಾಗೂ ಅರುಣ್ ಕುಮಾರ್ ಸಂಬಂಧಿಕರಾಗಿದ್ದು, ಕಳೆದೊಂದು ವರ್ಷದ ಹಿಂದೆ ಅರುಣ್ ಕುಮಾರ್ಗೆ ಮೃತ ವಿನೋದ್ 6 ಲಕ್ಷ ರೂ.ಸಾಲ ನೀಡಿದ್ದನಂತೆ. ವರ್ಷವಾದರೂ ಸಾಲ ವಾಪಸ್ ನೀಡಿರಲಿಲ್ಲ. ಇದರ ಜೊತೆಗೆ ಕಳೆದ 15 ದಿನಗಳ ಹಿಂದಷ್ಟೇ ವಿನೋದ್ಗೆ ನಿಶ್ವಿತಾರ್ಥ ಆಗಿತ್ತು.
ಕೆಲವೇ ತಿಂಗಳಲ್ಲಿ ಮದುವೆ ಮಾಡಲು ಮೃತನ ಪೋಷಕರು ಸಿದ್ಧತೆ ನಡೆಸುತ್ತಿದ್ದರು. ಹಣಕಾಸು ಕೊರತೆ ಹಿನ್ನೆಲೆ ವಿನೋದ್ ಚಾಮರಾಜಪೇಟೆಯಲ್ಲಿರುವ ಅರುಣ್ ಮನೆಗೆ ಸಾಲ ವಸೂಲಿಗೆ ಬಂದಿದ್ದನು.
ಹಣ ಕೊಡುವಂತೆ ಮನೆಗೆ ಹೋಗಿ ಅವಾಚ್ಯ ಶಬ್ಧಗಳಿಂದ ವಿನೋದ್ ನಿಂದಿಸಿದ್ದನಂತೆ. ಮನೆಯಲ್ಲಿ ಯಾರುೂ ಇಲ್ಲದಿರುವುದನ್ನು ಕಂಡು ಬಾಗಿಲು ಲಾಕ್ ಮಾಡಿ ಅರುಣ್‌ಗೆ ಹಣ ಕೊಡುವಂತೆ ಒತ್ತಾಯಿಸಿದ್ದ. ಇದೇ ವಿಚಾರಕ್ಕೆ ಇಬ್ಬರ ನಡುವೆ ಜಗಳವಾಗಿದೆ.
ಇದರಿಂದ ಕೋಪಗೊಂಡು ಮನೆಯಲ್ಲಿದ್ದ ಚಾಕು ತೆಗೆದುಕೊಂಡು ವಿನೋದ್ ಎದೆಗೆ ಅರುಣ್ ತಿವಿದಿದ್ದಾನೆ. ತೀವ್ರ ರಕ್ತಸ್ರಾವದಿಂದ ಸ್ಥಳದಲ್ಲೇ ವಿನೋದ್ ಸಾವನ್ನಪ್ಪಿದ್ದಾನೆ ಎನ್ನಲಾಗುತ್ತಿದೆ. ಮಾಹಿತಿ ಆಧರಿಸಿ ಕೆಜೆನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿ ಅರುಣ್ನನ್ನ ವಶಕ್ಕೆ ಪಡೆದು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ.