ಬೆಂಗಳೂರು: ಕೊರೊನಾ ಅಟ್ಟಹಾಸವನ್ನ ತಡೆಯಲು ರಾಜ್ಯ ಸರ್ಕಾರ 14 ದಿನಗಳ ಕಾಲ ರಾಜ್ಯಾದ್ಯಂತ ಲಾಕ್‌ಡೌನ್ ಘೋಷಿಸಿದೆ. ಈ ಲಾಕ್‌ಡೌನ್‌ನಲ್ಲಿ ದಿನ ನಿತ್ಯ ಬಳಕೆಯ ವಸ್ತುಗಳನ್ನ ಖರೀದಿಸಲು ಸರ್ಕಾರ ಬೆಳಗ್ಗೆ 6ರಿಂದ 10ಗಂಟೆಯ ವರೆಗೆ ಕಾಲವಧಿ ನೀಡಿದ್ದು, ಈ ಕಾಲಾವಧಿ ಇನ್ನೂ ಕೆಲವು ಗಂಟೆಗಳಿಗೆ ವಿಸ್ತರಿಸಬೇಕು ಎಂದು ಎಫ್‌ಕೆಸಿಸಿಐ ಅಧ್ಯಕ್ಷ ಸುಂದರ್ ಪೆರಿಕಲ್ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಮನವಿ ಮಾಡಿದ್ದಾರೆ.
ಅಗತ್ಯ ವಸ್ತುಗಳನ್ನ ಖರೀದಿಗೆ ಸಮಯ ವಿಸ್ತರಿಸಿ :ಪೆರಿಕಲ್ ಎಂ ಸುಂದರ್
ಅಗತ್ಯ ವಸ್ತುಗಳ ಅಂಗಡಿಗಳಾದ ದಿನಸಿ, ತರಕಾರಿ, ಬೇಕರಿ ಅಂಗಡಿಗಳು ಮುಂಜಾನೆ 6-10 ವರೆಗೆ ಮಾತ್ರ ತೆರೆದಿರುತ್ತೆ. ಇದು ಸಾಲುವುದಿಲ್ಲ ಹೀಗಾಗಿ ಬೆಳಗ್ಗೆ 6 ರಿಂದ ಮಧ್ಯಹ್ನ 2 ವಿಸ್ತರಿಸಬೇಕೆಂದು ಪೆರಿಕಲ್ ಎಂ ಸುಂದರ್ ಮನವಿ ಮಾಡಿದ್ದಾರೆ.
ಅಗತ್ಯ ವಸ್ತುಗಳ ಅಂಗಡಿಗಳಾದ ದಿನಸಿ, ತರಕಾರಿ, ಬೇಕರಿ ಅಂಗಡಿಗಳು ಮುಂಜಾನೆ 6-10 ವರೆಗೆ ಮಾತ್ರ ತೆರೆದಿರುತ್ತೆ ಅಂದ್ರೆ ಸಮಯ ಕಡಿಮೆ ಇದೆ ಎಂದು ಜನ ದಟ್ಟಣೆಯಾಗುವ ಸಾಧ್ಯತೆ ಇರುತ್ತೆ. ಹೀಗಾಗಿ ನೀಡಿರುವ ನಿಗದಿತ ಸಮಯವನ್ನ ಬೆಳಗ್ಗೆ 6 ರಿಂದ ಮಧ್ಯಹ್ನ 2 ವಿಸ್ತರಿಸಬೇಕೆಂದು ಮನವಿ ಮಾಡಿದ್ದಾರೆ.
ಜೊತೆಗೆ ಸಣ್ಣ ಕೈಗಾರಿಕಾ ಕೆಲಸವನ್ನ ನಡೆಸಲು ಅನುಮತಿಯನ್ನು ನೀಡಲಾಗಿದೆ. ಆದ್ರೆ,ಕಾರ್ಮಿಕರು ಕೆಲಸಕ್ಕೆ ಹಾಜರಾಗಾಲು ಯಾವುದೇ ರೀತಿಯ ಸಾರಿಗೆ ಸೌಲಭ್ಯಗಳು ಇಲ್ಲದಿರುವ ಕಾರಣ ಕೆಲಸಗಾರರು ಕೆಲಸಕ್ಕೆ ಬರಲು ತೊಂದರೆ ಎದುರಿಸುತ್ತಾರೆ. ಹೀಗಾಗಿ ಅವರಿಗಾಗಿ ಪ್ರತ್ಯೇಕವಾಗಿ ಬಸ್ ವ್ಯವಸ್ಥೆ ಮಾಡಿದ್ರೆ ಕಾರ್ಮಿಕರಿಗೆ ಅನುಕೂಲವಾಗುತ್ತೆ ಎಂದು ತಿಳಿಸಿದ್ದಾರೆ. ಇನ್ನು ಕೊವಿಡ್‌ನಿಂದಾಗಿ ರಾಜ್ಯ ತುಂಬಾನೆ ಆರ್ಥಿಕ ನಷ್ಟವನ್ನ ಎದುರಿಸಿದೆ, ಹೀಗಾಗಿ ಕೇಂದ್ರ ಸರ್ಕಾರದ ನೇರ ತೆರಿಗೆ ಹಾಗೂ ಪರೋಕ್ಷ ತೆರಿಗೆ ತೆರಿಗೆಗಳನ್ನು ಮುಂದೂಡಬೇಕು ಹಾಗೂ ವಾರ್ಷಿಕ ಸಭೆ (ಎ ಜಿ ಎಂ) ಮುಂದೂಡ ಬೇಕು ಎಂದು ಮನವಿ ಮಾಡಿದ್ದಾರೆ.