ಕರ್ನಾಟಕ

karnataka

ETV Bharat / state

ಪಟ್ಟು ಸಡಿಲಿಸದ ಪಂಚಮಸಾಲಿಗಳು: ಇಂದು ಸಂಜೆ ದುಂಡು ಮೇಜಿನ ಸಭೆ

ಪಂಚಮಸಾಲಿ ಸಮುದಾಯವನ್ನು 2ಎಗೆ ಸೇರಿಸುವಂತೆ ಒತ್ತಾಯಿಸಿ ನಡೆಯುತ್ತಿರುವ ಹೋರಾಟ ಮುಗಿಯುವ ಲಕ್ಷಣ ಕಾಣುತ್ತಿಲ್ಲ. ಇಂದು ಸಂಜೆ ಪಂಚಮಸಾಲಿ ಮುಖಂಡರ ಮಹತ್ವದ ದುಂಡು ಮೇಜಿನ ಸಭೆ ನಡೆಯಲಿದ್ದು, ಸಭೆಯಲ್ಲಿ ಮುಂದಿನ‌ ಹೋರಾಟದ ‌ಬಗ್ಗೆ ಚರ್ಚೆ ನಡೆಯುವ ಸಾಧ್ಯತೆ ಹೆಚ್ಚಿದೆ.

ಇಂಧು ಸಂಜೆ ಸಭೆ ನಡೆಸಲಿರುವ ಪಂಚಮಸಾಲಿ ಮುಖಂಡರು
Panchamasali leaders will made the meeting in evening today

By

Published : Feb 25, 2021, 10:10 AM IST

ಬೆಂಗಳೂರು:ಪಂಚಮಸಾಲಿಗಳಿಂದ 2ಎ ಮೀಸಲಾತಿ ಹೋರಾಟ ಮುಗಿಯುವ ಲಕ್ಷಣಗಳು ಗೋಚರಿಸುತ್ತಿಲ್ಲ ಎನ್ನುವಂತಾಗಿದ್ದು, ಫ್ರೀಡಂ ಪಾರ್ಕ್​​​ನಲ್ಲಿ ನಡೆಯುತ್ತಿರುವ ಮೀಸಲಾತಿ ಧರಣಿ ಇಂದೂ ಮುಂದುವರೆದಿದೆ.

ಬುಧವಾರ ಕೂಡಲಸಂಗಮ ಪೀಠಾಧ್ಯಕ್ಷ ಜಯಮೃತ್ಯುಂಜಯ ಸ್ವಾಮೀಜಿ, ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ್​ ಅವರ ಜೊತೆ ಸಚಿವರಾದ ಬೊಮ್ಮಾಯಿ ಹಾಗೂ ಸಿ ಸಿ ಪಾಟೀಲ್ ಸಭೆ ನಡೆಸಿ ಮಾತುಕತೆ ನಡೆಸಿದ್ದರು. ಆದರೆ ನಿನ್ನೆಯ ಸಭೆ ವಿಫಲವಾದಂತೆ ಕಂಡು ಬರುತ್ತಿದೆ.

ಓದಿ: ಹಿರೇನಾಗವಲ್ಲಿ ಜಿಲೆಟಿನ್​ ಸ್ಫೋಟ ಪ್ರಕರಣ: ಪ್ರಮುಖ ಆರೋಪಿ ತಮಿಳುನಾಡಿನಲ್ಲಿ ಸೆರೆ

ಸರ್ಕಾರ ಮನವೂಲಿಕೆ ನಂತರವೂ ಮೀಸಲಾತಿ ಪಟ್ಟು ಬಗೆಹರಿಯುವ ಯಾವುದೇ ಲಕ್ಷಣಗಳು ಗೋಚರಿಸುತ್ತಿಲ್ಲ. ಇಂದು ಸಂಜೆ ಪಂಚಮಸಾಲಿ ಮುಖಂಡರ ಮಹತ್ವದ ದುಂಡು ಮೇಜಿನ ಸಭೆ ನಡೆಯಲಿದ್ದು, ಸಭೆಯಲ್ಲಿ ಮುಂದಿನ‌ ಹೋರಾಟದ ‌ಬಗ್ಗೆ ಚರ್ಚೆ ನಡೆಯುವ ಸಾಧ್ಯತೆ ಹೆಚ್ಚಿದೆ ಎನ್ನಲಾಗುತ್ತಿದೆ.

ABOUT THE AUTHOR

...view details