ಬೆಂಗಳೂರು: ಪ್ರಪಂಚದಲ್ಲಿಯೇ ಹೃದಯಾಘಾತದ ತವರೂರಾಗಿ ಭಾರತ ಮಾರ್ಪಾಡಾಗುತ್ತಿದೆ. ಅಲ್ಲದೆ ಸಕ್ಕರೆ ಹಾಗೂ ರಕ್ಕದೊತ್ತಡ ಕಾಯಿಲೆಗಳು ಭಾರತೀಯರಲ್ಲಿ ಹೆಚ್ಚು ಕಾಣಿಸಿಕೊಳ್ಳುತ್ತಿದ್ದು, ಆರೋಗ್ಯಕರ ಭಾರತ ಮುಂದಿನ ದಿನಗಳಲ್ಲಿ ಅಸಾಧ್ಯವಾದ ಮಾತಾಗಿ ಪರಿಣಮಿಸುತ್ತಿದೆ ಎಂದು ಜಯದೇವ ಆಸ್ಪತ್ರೆ ನಿರ್ದೇಶಕ ಡಾ.ಸಿ.ಎನ್ ಮಂಜುನಾಥ್ ಹೇಳಿದರು.
ರೋಗಿಗಳನ್ನು ತಾಳ್ಮೆಯಿಂದ ಆರೈಸುವಿಕೆ ವೈದ್ಯರ ಧೋರಣೆಯಾಗಬೇಕು: ಡಾ.ಸಿ.ಎನ್ ಮಂಜುನಾಥ್
ರೋಗಿಗಳೊಂದಿಗೆ ಆತ್ಮವಿಶ್ವಾಸ ಮೂಡಿಸುವ ಮಾತುಗಳಿಂದ ಆರೈಸಿ ಗುಣಮುಖರನ್ನಾಗಿಸುವ ಕಲೆಯನ್ನು ಕರಗತ ಮಾಡಿಕೊಳ್ಳಬೇಕಿದೆ. ಆತ್ಮೀಯತೆಯಿಂದ ರೋಗಿಗಳ ಮನಸ್ಸನ್ನು ಗೆದ್ದರೆ ಅರ್ಧ ಕಾಯಿಲೆ ಗುಣವಾಗುತ್ತದೆ ಎಂದು ಜಯದೇವ ಆಸ್ಪತ್ರೆ ನಿರ್ದೇಶಕ ಡಾ.ಸಿ.ಎನ್ ಮಂಜುನಾಥ್ ಹೇಳಿದರು.
ಡಾ.ಸಿ.ಎನ್ ಮಂಜುನಾಥ್,ಜಯದೇವ ಆಸ್ಪತ್ರೆ ನಿರ್ದೇಶಕ
ಬೆಂಗಳೂರು-ಹೊಸೂರು ಹೆದ್ದಾರಿಯ ಯಡವನಹಳ್ಳಿ ಬಳಿಯಿರುವ ಆಕ್ಸಫರ್ಡ್ ವೈದ್ಯಕೀಯ ಮಹಾವಿದ್ಯಾಲಯ, ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ಪದವಿ ಪ್ರಧಾನ ಸಮಾರಂಭದಲ್ಲಿ ಮಾತನಾಡಿ, ವೈದ್ಯಕೀಯ ಪದವಿ ಪಡೆದು ಹೊರ ಬರುತ್ತಿರುವ ವಿದ್ಯಾರ್ಥಿ ಸಮುದಾಯ ತಾವು ಕಲಿತ ವಿದ್ಯೆಗಿಂತ ಹೆಚ್ಚು ಮಾನವೀಯತೆಯ ಮೂಲಕ ಸೇವೆ ಸಲ್ಲಿಸಬೇಕು ಎಂದು ಕರೆ ನೀಡಿದರು.
ರೋಗಿಗಳೊಂದಿಗೆ ಆತ್ಮವಿಶ್ವಾಸ ಮೂಡಿಸುವ ಮಾತುಗಳಿಂದ ಆರೈಕೆ ಮಾಡಿ ಗುಣಮುಖರನ್ನಾಗಿಸುವ ಕಲೆಯನ್ನು ಕರಗತ ಮಾಡಿಕೊಳ್ಳಬೇಕಿದೆ. ಆತ್ಮೀಯತೆಯಿಂದ ರೋಗಿಗಳ ಮನಸ್ಸನ್ನು ಗೆದ್ದರೆ ಅರ್ಧ ಕಾಯಿಲೆ ಗುಣವಾಗುತ್ತದೆ ಎಂದು ತಿಳಿಸಿದರು.