ಬೆಂಗಳೂರು: ರಾಜ್ಯದಲ್ಲಿಂದು ಕೊರೊನಾ ಸೋಂಕಿಗೆ 91 ಮಂದಿ ಬಲಿಯಾಗಿದ್ದು, ಈವರೆಗೆ 1,331 ಮೃತರಾಗಿದ್ದಾರೆ. ಈ ಮೂಲಕ ಸಾವಿನ ಪ್ರಮಾಣ 2.8% ಏರಿದೆ. ಇಂದು ಕೂಡ 4,120 ಹೊಸ ಪಾಸಿಟಿವ್ ಪ್ರಕರಣ ದೃಢಪಟ್ಟಿದ್ದು, ಈ ಮೂಲಕ 63,772ಕ್ಕೆ ಸೋಂಕಿತರ ಸಂಖ್ಯೆ ಗಡಿದಾಟಿದೆ. ರಾಜ್ಯದ ಚೇತರಿಕೆ ಪ್ರಮಾಣ ಶೇ 36.1% ರಷ್ಟು ಇದ್ದು ಈವರೆಗೆ 23,065 ಮಂದಿ ಗುಣಮುಖರಾಗಿದ್ದರೆ, 39,370 ಸಕ್ರಿಯ ಪ್ರಕರಣಗಳು ಬಾಕಿ ಇವೆ.
ಹಾಸನ: ಇಂದು 41 ಜನರಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಈವರೆಗೆ ಒಟ್ಟು 886 ಜನರು ಕೊರೊನಾ ಸೋಂಕಿಗೆ ಒಳಗಾದಂತೆ ಆಗಿದೆ. ಮತ್ತೊಂದು ಸಾವಿನೊಂದಿಗೆ ಒಟ್ಟು 28 ಜನರು ಕೊರೊನಾದಿಂದ ಹಾಸನ ಜಿಲ್ಲೆಯಲ್ಲಿ ಸಾವನ್ನಪ್ಪಿದ್ದಾರೆ. ಹೊಸದಾಗಿ ಪತ್ತೆಯಾದ 41 ಪ್ರಕರಣಗಳಲ್ಲಿ ಅರಕಲಗೂಡು, ಆಲೂರು, ಹೊಳೆನರಸೀಪುರ ತಲಾ 1, ಅರಸೀಕೆರೆ 8, ಚನ್ನರಾಯಪಟ್ಟಣ 5, ಸಕಲೇಶಪುರ 2, ಹಾಸನ ತಾಲ್ಲೂಕಿಗೆ ಸೇರಿದವರು 11 ಜನರು ಪಾಸಿಟಿವ್ ಪ್ರಕರಣದಲ್ಲಿ ದಾಖಲಾಗಿದ್ದಾರೆ. ಒಬ್ಬರು ಮೃತಪಟ್ಟಿದ್ದು, ಒಟ್ಟಾರೆ 41 ಮಂದಿಗೆ ಕೋವಿಡ್ ಸೋಂಕು ದೃಢಪಟ್ಟಿದೆ.
ಬಳ್ಳಾರಿ: ಗಣಿ ಜಿಲ್ಲೆಯಲ್ಲಿಂದು ಹೊಸದಾಗಿ 98 ಕೊರೊನಾ ಪಾಸಿಟಿವ್ ಕೇಸ್ಗಳು ಪತ್ತೆಯಾಗಿದ್ದು, ಇದರಿಂದ ಸೋಂಕಿತರ ಸಂಖ್ಯೆ 2452ಕ್ಕೇರಿಕೆಯಾಗಿದೆ. ಜಿಲ್ಲೆಯಲ್ಲಿ ಈ ದಿನ 98 ಮಂದಿಗೆ ಕೊರೊನಾ ಸೋಂಕಿರೋದು ದೃಢಪಟ್ಟಿದೆ. ಕೇವಲ ಜಿಂದಾಲ್ ಒಂದರಲ್ಲೇ ಈವರೆಗೆ 643 ಕೊರೊನಾ ಸೋಂಕಿತರು ಪತ್ತೆಯಾಗಿದ್ದಾರೆ. ಹೀಗಾಗಿ, ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 2452 ಕ್ಕೇರಿಕೆಯಾಗಿದ್ದು, 1327 ಮಂದಿ ಗುಣಮುಖ ರಾಗಿದ್ದಾರೆ. 60 ಮಂದಿ ಸಾವನ್ನಪ್ಪಿದ್ದಾರೆ. 1065 ಸಕ್ರಿಯ ಪ್ರಕರಣಗಳಿವೆ. ಈ ದಿನ ಮೂವರು ಸಾವನ್ನಪ್ಪಿದ್ದಾರೆ.
ಕಾರವಾರ: ಉತ್ತರಕನ್ನಡ ಜಿಲ್ಲೆಯಲ್ಲಿ ಇಂದು 69 ಮಂದಿಗೆ ಕೊರೊನಾ ಸೋಂಕು ಪತ್ತೆಯಾಗಿದ್ದು, 99 ಮಂದಿ ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಕುಮಟಾದಲ್ಲಿ 17 ಸೋಂಕಿತರು ಪತ್ತೆಯಾಗಿದ್ದಾರೆ. ಉಳಿದಂತೆ ಯಲ್ಲಾಪುರ 12, ಅಂಕೋಲಾ 10 ಭಟ್ಕಳ 6, ಕಾರವಾರ 6, ಮುಂಡಗೋಡ 6, ಹೊನ್ನಾವರ 4, ಸಿದ್ದಾಪುರ 3, ಶಿರಸಿ 2, ಜೊಯಿಡಾ 2 ಹಾಗೂ ಹಳಿಯಾಳದಲ್ಲಿ ಓರ್ವರಿಗೆ ಸೋಂಕು ಪತ್ತೆಯಾಗಿದೆ. ಇನ್ನು ಇಂದು ಒಂದೇ ದಿನ ಬರೊಬ್ಬರಿ 99 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಈ ಪೈಕಿ ಭಟ್ಕಳದ 75 ಮಂದಿ, ಶಿರಸಿ 17, ಕುಮಟಾ 4, ಹಳಿಯಾಳ 2 ಹಾಗೂ ಸಿದ್ದಾಪುರ ಒಬ್ಬರು ಸಂಪೂರ್ಣ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.
ಬಾಗಲಕೋಟೆ: ಕೊರೊನಾ ವಾರಿಯರ್ಸ್ ಆಗಿರುವ ಪೊಲೀಸ್ ಸಿಬ್ಬಂದಿಗೆ ಕೊರೊನಾ ಸೋಂಕು ತಗುಲಿದೆ. ಜಿಲ್ಲೆಯ ವಿವಿಧ ಪೊಲೀಸ್ ಠಾಣೆಯ ಒಟ್ಟು 26 ಸಿಬ್ಬಂದಿಗೆ ಹಾಗೂ ಅಧಿಕಾರಿಗಳಿಗೆ ಸೋಂಕು ದೃಢಪಟ್ಟಿದೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯಲ್ಲಿ ಆರು ಜನರಿಗೆ, ಇಬ್ಬರು ಬನಹಟ್ಟಿ, ತೇರದಾಳ ಸಿಬ್ಬಂದಿ, ಆರು ಜನ ಗುಳೇದಗುಡ್ಡ, ಕೆರೂರು ಪೊಲೀಸ್ ಠಾಣೆಯ ಸಿಬ್ಬಂದಿ, ಮೂವರು, ಬಾಗಲಕೋಟೆ ನಗರ ಹಾಗೂ ನವನಗರದ ಠಾಣೆಯ ಸಿಬ್ಬಂದಿ, ಡಿ ಎ ಆರ್ ಓರ್ವ ಸಿಬ್ಬಂದಿ, ಇಲಕಲ್ಲ ಹಾಗೂ ಅಮೀನಗಡ ಸಿಬ್ಬಂದಿಗೆ ಸೋಂಕು ತಗುಲಿದೆ. ಒಟ್ಟು 26 ಸಿಬ್ಬಂದಿಯಲ್ಲಿ ಈಗಾಗಲೇ ಸೋಂಕು ತಗುಲಿದ್ದು, ಇದರಲ್ಲಿ ನಾಲ್ವರು ಸಿಬ್ಬಂದಿ ಗುಣಮುಖರಾಗಿ ಕೋವಿಡ್ ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗಿದೆ.
ಚಿಕ್ಕಮಗಳೂರು:ಜಿಲ್ಲೆಯಲ್ಲಿ ಈ ದಿನ 41 ಜನರಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ. ಈ ಮೂಲಕ 291 ಕ್ಕೆ ಸೋಂಕಿತರ ಸಂಖ್ಯೆ ಏರಿಕೆಯಾಗಿದ್ದು, ಜಿಲ್ಲಾ ಕೋವಿಡ್-19 ಆಸ್ಪತ್ರೆಯಿಂದ ಇಂದು 06 ಜನರು ಗುಣಮುಖರಾಗಿ ಬಿಡುಗಡೆಯಾಗಿದ್ದು, ಈವರೆಗೂ ಜಿಲ್ಲೆಯಲ್ಲಿ ಒಟ್ಟು 136 ಜನ ಸೋಂಕಿತರು ಬಿಡುಗಡೆಯಾದಂತೆ ಆಗಿದೆ. ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 291 ಕ್ಕೆ ಏರಿಕೆಯಾಗಿದ್ದು, ಜಿಲ್ಲೆಯಲ್ಲಿ ಒಟ್ಟು 147 ಸಕ್ರಿಯ ಪ್ರಕರಣಗಳಿವೆ.
ಕೊಪ್ಪಳ: ಶಾಸಕರೊಬ್ಬರು ಸೇರಿ ಜಿಲ್ಲೆಯಲ್ಲಿ ಇಂದು 69 ಪಾಸಿಟಿವ್ ಕೇಸ್ ದೃಢವಾಗಿದ್ದು ಸೋಂಕಿತರ ಸಂಖ್ಯೆ 515 ಕ್ಕೆ ಏರಿದೆ. ಪಾಸಿಟಿವ್ ಕೇಸ್ ಗಳಲ್ಲಿ ಶ್ವಾಸಕೋಶ ಸಂಬಂಧಿತ (SAARI) ಪ್ರಕರಣದಲ್ಲಿ ಒಬ್ಬರು, ಐಎಲ್ಐ ಕೇಸ್ ನಲ್ಲಿ 53, ಪ್ರಾಥಮಿಕ ಸಂಪರ್ಕಿತ ಹೊಂದಿರುವ 10 ಜನರಿಗೆ, ಡೊಮೆಸ್ಟಿಕ್ ಟ್ರಾವೆಲ್ಲರ್ಟ್ಗಳಲ್ಲಿ 5 ಜನರು ಸೇರಿ ಒಟ್ಟು ಇಂದು 69 ಪಾಸಿಟಿವ್ ಪ್ರಕರಣಗಳು ಪತ್ತಯಾಗಿವೆ. ಈವರೆಗೆ ಸೋಂಕಿಗೆ ಒಟ್ಟು 12 ಸೋಂಕಿತರು ಬಲಿಯಾಗಿದ್ದಾರೆ. ಇದರ ಜೊತೆಗೆ ಇಂದು 46 ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.
ತುಮಕೂರು: ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 71 ಸೋಂಕಿತರು ಸಂಪೂರ್ಣ ಗುಣಮುಖರಾಗಿ ಇಂದು ಡಿಸ್ಚಾರ್ಜ್ ಆಗಿದ್ದಾರೆ. ಈ ಮೂಲಕ ಇದುವರೆಗೂ 358 ಮಂದಿ ಗುಣಮುಖರಾಗಿ ಮನೆಗೆ ತೆರಳಿದ್ದಾರೆ. ಈ ಪೈಕಿ ಇಂದು ಒಂದೇ ದಿನ ತುಮಕೂರು ತಾಲೂಕಿನ 61 ಮಂದಿ, ಗುಬ್ಬಿ ಮತ್ತು ಕೊರಟಗೆರೆ ತಾಲೂಕಿನ ತಲಾ ಮೂವರು, ತುರುವೇಕೆರೆ ತಾಲೂಕಿನ ನಾಲ್ವರು ಸಂಪೂರ್ಣ ಗುಣಮುಖರಾಗಿದ್ದಾರೆ. ಜಿಲ್ಲಾಸ್ಪತ್ರೆಯಿಂದ ಇವರನ್ನು ಆತ್ಮೀಯವಾಗಿ ಬೀಳ್ಕೊಡುಗೆ ಮಾಡಲಾಯಿತು.
ಚಿಕ್ಕಬಳ್ಳಾಪುರ: 135 ಮಂದಿಯಲ್ಲಿ ಕೊರೊನಾ ಸೋಂಕು ದೃಢವಾಗಿದ್ದು, ತಾಲೂಕು ಕಚೇರಿ ಸಿಬ್ಬಂದಿ ಬಲಿಯಾಗಿದ್ದಾರೆ. ಸೋಂಕಿತರ ಸಂಖ್ಯೆ 850 ಕ್ಕೆ ಏರಿಕೆಯಾಗಿದೆ. ಚಿಕ್ಕಬಳ್ಳಾಪುರದಲ್ಲಿ 33 ಜನ ಸೋಂಕಿತರು, ಚಿಂತಾಮಣಿಯಲ್ಲಿ 28, ಗೌರಿಬಿದನೂರು 46, ಬಾಗೇಪಲ್ಲಿ 14, ಶಿಡ್ಲಘಟ್ಟ 8 ಹಾಗೂ ಗುಡಿಬಂಡೆಯಲ್ಲಿ 6 ಸೋಂಕಿತರು ಪತ್ತೆಯಾಗಿದ್ದಾರೆ.
ಬೀದರ್: ಕೊರೊನಾ ಗಡಿ ಜಿಲ್ಲೆ ಬೀದರ್ನಲ್ಲಿಯೂ ಹೆಚ್ಚುತ್ತಿದ್ದು, ಇಂದು ಒಂದೇ ದಿನ ಮೂವರು ಬಲಿಯಾಗಿದ್ದು, 45 ಜನರಲ್ಲಿ ಸೋಂಕು ದೃಢವಾಗಿದೆ. ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 1378 ಕ್ಕೆ ಏರಿಕೆಯಾದ್ರೆ 59 ಜನರು ಬಲಿಯಾಗಿದ್ದು, ಈ ಪೈಕಿ ಇಬ್ಬರು ಅನ್ಯಕಾರಣಕ್ಕಾಗಿ ಸಾವಿಗೀಡಾಗಿದ್ದಾರೆ. 740 ಜನರು ಗುಣಮುಖರಾಗಿ ಮನೆಗೆ ವಾಪಸ್ಸಾಗಿದ್ದಾರೆ.
ಚಾಮರಾಜನಗರ: ಇಂದು ಬರೋಬ್ಬರಿ 38 ಕೊರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗುವ ಮೂಲಕ ಸೋಂಕಿತರ ಸಂಖ್ಯೆ 297 ಕ್ಕೆ ಏರಿಕೆಯಾಗಿದೆ. ಸಕ್ರಿಯ ಪ್ರಕರಣಗಳ ಸಂಖ್ಯೆ106 ಆಗಿದ್ದು, ಇಂದು ಕೂಡ 13 ಮಂದಿ ಸೋಂಕಿನಿಂದ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಪತ್ತೆಯಾದ 38 ಪ್ರಕರಣಗಳಲ್ಲಿ ಗುಂಡ್ಲುಪೇಟೆ 10, ಕೊಳ್ಳೇಗಾಲ 18, ಚಾಮರಾಜನಗರ, ಯಳಂದೂರು ಹಾಗೂ ಹನೂರಿನಲ್ಲಿ ತಲಾ 3 ಪ್ರಕರಣ ವರದಿಯಾಗಿದೆ. 38 ಮಂದಿಯಲ್ಲಿ ಹೆಚ್ಚಿನವರು ಬೆಂಗಳೂರಿನಿಂದ ಬಂದವರಾಗಿದ್ದು 4-5 ಮಾತ್ರ ಸೋಂಕಿತರ ಸಂಪರ್ಕ ಹೊಂದಿದವರಾಗಿದ್ದಾರೆ.
ರಾಯಚೂರು: ಜಿಲ್ಲೆಯಲ್ಲಿ 32 ಕೋವಿಡ್ ಪ್ರಕರಣಗಳು ವರದಿ ಆಗಿವೆ. ರಾಯಚೂರು ಜಿಲ್ಲೆಯಲ್ಲಿ ಇಂದು 32 ಕೊರೊನಾ ಪಾಸಿಟಿವ್ ಪ್ರಕರಣಗಳು ದೃಢಪಟ್ಟಿವೆ. ಈ ಮೂಲಕ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 996ಕ್ಕೆ ತಲುಪಿದೆ. 996 ಪ್ರಕರಣಗಳಲ್ಲಿ 613 ರೋಗಿಗಳು ಗುಣಮುಖ ಆಗಿ ಬಿಡುಗಡೆ ಹೊಂದಿದ್ದಾರೆ. ಈ ವರೆಗೆ ಒಟ್ಟು 13 ಜನ ಮೃತರಾಗಿದ್ದಾರೆ. ಇಂದು ಯಾವುದೇ ಮರಣ ಹೊಂದಿದ ಪ್ರಕರಣಗಳು ವರದಿ ಆಗಿಲ್ಲ.