ಕರ್ನಾಟಕ

karnataka

By

Published : Nov 17, 2021, 9:07 PM IST

ETV Bharat / state

KSRTC ಮಹಿಳಾ ಉದ್ಯೋಗಿಗಳು ಮಗು ದತ್ತು ಪಡೆದರೆ ಒಂದು ವರ್ಷ ಹೆರಿಗೆ ರಜೆ ಮಾದರಿಯ ರಜೆ

ಕೆಎಸ್​ಆರ್​​ಟಿಸಿ ಮಹಿಳಾ ಸಿಬ್ಬಂದಿ(KSRTC women staffs) ಮಗುವನ್ನು ದತ್ತು ಪಡೆದರೆ ಅವರಿಗೆ ಒಂದು ವರ್ಷ ಹೆರಿಗೆ ರಜೆ ಮಾದರಿಯ ರಜೆ ನೀಡಲು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಸುತ್ತೋಲೆ ಹೊರಡಿಸಿದೆ..

One year maternity leave type leave from  if ksrtc female employees adopt child
ಒಂದು ವರ್ಷ ಹೆರಿಗೆ ರಜೆ ಮಾದರಿಯ ರಜೆ

ಬೆಂಗಳೂರು :ಕೆಎಸ್​ಆರ್​​ಟಿಸಿಯಲ್ಲಿ(KSRTC) ಕೆಲಸ ಮಾಡುತ್ತಿರುವ ಮಹಿಳಾ ಉದ್ಯೋಗಿಗಳು ಮಗುವನ್ನು ದತ್ತು(if adopt child)ಪಡೆದ ಸಂದರ್ಭದಲ್ಲಿ ಒಂದು ವರ್ಷ ರಜೆ(One year leave) ನೀಡಲು ಕೆಎಸ್​ಆರ್​ಟಿಸಿ ವ್ಯವಸ್ಥಾಪಕ ನಿರ್ದೇಶಕರಾದ ಶಿವಯೋಗಿ ಕಳಸದ ಅವರು ಸುತ್ತೋಲೆ ಹೊರಡಿಸಿದ್ದಾರೆ.

ಒಂದು ವರ್ಷ ಹೆರಿಗೆ ರಜೆ ಮಾದರಿಯ ರಜೆ

ಕರ್ನಾಟಕ ನಾಗರಿಕ ಸೇವಾ ನಿಯಮಾವಳಿಯ ನಿಯಮ 135 (ಎ)ಯ ಅವಕಾಶದಂತೆ ನಿಗಮದ ಮಹಿಳಾ ಉದ್ಯೋಗಿಗಳು ಮಗುವನ್ನು ದತ್ತು ಪಡೆದ ದಿನಾಂಕದಿಂದ ಒಂದು ವರ್ಷದ ಅವಧಿಯವರೆಗೆ ಅಥವಾ ದತ್ತು ಪಡೆದ ಮಗುವಿಗೆ ಒಂದು ವರ್ಷ ತುಂಬುವವರೆಗೆ ಇವುಗಳಲ್ಲಿ ಯಾವುದು ಮೊದಲೋ ಅಲ್ಲಿಯವರೆಗೆ ರಜಾ ನಿಯಮಾವಳಿಯನ್ವಯ ಅವರ ಖಾತೆಯಲ್ಲಿರುವ ರಜೆಯನ್ನು ಹಾಗೂ ಅಗತ್ಯವಿದ್ದಲ್ಲಿ ಖಾತೆಯಲ್ಲಿಲ್ಲದ ರಜೆಯನ್ನು ಮಂಜೂರು ಮಾಡಲು ಅವಕಾಶ ಕಲ್ಪಿಸಲಾಗಿದೆ.

ಮಹಿಳಾ ಸರ್ಕಾರಿ ಉದ್ಯೋಗಿಗಳು ಮಗುವನ್ನು ದತ್ತು ಪಡೆದ ಸಂದರ್ಭದಲ್ಲಿ 180 ದಿನಗಳ ರಜೆಯನ್ನು (ಹೆರಿಗೆ ರಜೆ ಮಾದರಿಯಲ್ಲಿ) ದತ್ತು ಪ್ರಕ್ರಿಯೆಯು ಮಾನ್ಯತೆ ಹೊಂದಿದ ದಿನಾಂಕದಿಂದ ಮಂಜೂರು ಮಾಡಲು ಅವಕಾಶ ಕಲ್ಪಿಸಿದೆ. ಅದರಂತೆ ನಿಗಮದಲ್ಲಿ ಪ್ರಸೂತಿ ರಜಾ ಸೌಲಭ್ಯವನ್ನು ಸರ್ಕಾರದಲ್ಲಿರುವಂತೆ ವಿಸ್ತರಿಸಲು ಒಪ್ಪಿಗೆ ನೀಡಿದ್ದಾರೆ. ಆದರೆ, ಅಂತಹ ಮಹಿಳಾ ಉದ್ಯೋಗಿಗಳು ಮಗುವನ್ನು ದತ್ತು ಪಡೆದ ಸಂದರ್ಭದಲ್ಲಿ ಎರಡು ಜೀವಂತ ಮಕ್ಕಳನ್ನು ಹೊಂದಿರಬಾರದು ಎಂದು ತಿಳಿಸಲಾಗಿದೆ.

ABOUT THE AUTHOR

...view details