ಬೆಂಗಳೂರು:ಕೊರೊನಾ ಸೋಂಕಿನಿಂದ ಮಕ್ಕಳು ಬರೋಬ್ಬರಿ 21 ತಿಂಗಳ ಕಾಲ ಶಾಲಾ-ಕಾಲೇಜಿನತ್ತ ಹೋಗದೆ ಮನೆಯಲ್ಲೇ ಉಳಿಯುವಂತಾಗಿತ್ತು. ಕೋವಿಡ್ ತೀವ್ರತೆ ಕಡಿಮೆ ಆಗಿ, ಶಾಲೆ ಪುನಾರಂಭ ಆಯ್ತು ಎನ್ನುವಾಗಲೇ ಸೋಂಕು ಪ್ರಕರಣಗಳಲ್ಲಿ ಏರಿಕೆ ಕಂಡುಬರುತ್ತಿದೆ.
ಸದ್ಯ ರಾಜ್ಯದಲ್ಲಿ ಕೆಲ ಮೆಡಿಕಲ್ ಕಾಲೇಜುಗಳು ಸೇರಿದಂತೆ ಕೆಲ ಶಾಲೆಗಳ ಮಕ್ಕಳಲ್ಲೂ ಸೋಂಕು ಹೆಚ್ಚಿಗೆ ಕಾಣಿಸಿಕೊಳ್ಳುತ್ತಿದೆ. ರಾಜ್ಯದ ಒಟ್ಟೂ 34 ಶೈಕ್ಷಣಿಕ ಜಿಲ್ಲೆಯ 130 ಮಕ್ಕಳಿಗೆ ಕೋವಿಡ್ ತಗುಲಿದೆ. ಈ ಬಗ್ಗೆ ಶಿಕ್ಷಣ ಇಲಾಖೆಯು ಅಂಕಿ-ಅಂಶ ಬಿಡುಗಡೆ ಮಾಡಿದೆ. 1ರಿಂದ 10ನೇ ತರಗತಿಯ ಮಕ್ಕಳಿಗೆ ಸೋಂಕು ತಗುಲಿದ್ದು, ಈಗಾಗಲೇ ಹಲವರು ಗುಣಮುಖರಾಗಿದ್ದಾರೆ.
ಯಾವ್ಯಾವ ಜಿಲ್ಲೆಯಲ್ಲಿ ಎಷ್ಟು ಪ್ರಕರಣ:
1) ಬೆಂಗಳೂರು ಉತ್ತರ - 2 ಪ್ರಕರಣ
2) ಚಾಮರಾಜನಗರ - 7
3) ಚಿಕ್ಕಮಗಳೂರು - 92
4) ಚಿತ್ರದುರ್ಗ -2
5) ಧಾರವಾಡ - 2
6) ಗದಗ - 1
7) ಹಾಸನ - 4
8) ಕೊಡಗು - 11
9) ಮಧುಗಿರಿ - 5
10) ಮೈಸೂರು - 2
11) ಶಿವಮೊಗ್ಗ - 1
12) ಶಿರಸಿ -1