ಪುಲ್ವಾಮಾದಲ್ಲಿ ನಡೆದ ದಾಳಿಯಿಂದಾಗಿ 40 ಕ್ಕೂ ಹೆಚ್ಚು ಯೋಧರ ಕುಟುಂಬಗಳು ಸೇರಿದಂತೆ ಇಡೀ ದೇಶವೇ ಕಣ್ಣೀರಿನಲ್ಲಿ ಕೈ ತೊಳೆಯುವ ಪರಿಸ್ಥಿತಿ ಉಂಟಾಗಿದೆ. ಹುತಾತ್ಮರ ಕುಟುಂಬಗಳಿಗೆ ಸಾಂತ್ವನ ಹೇಳುವ ನಿಟ್ಟಿನಲ್ಲಿ, ಕರ್ನಾಟಕ ಕೇಡರ್ ನ ಎಲ್ಲಾ ಐಪಿಎಸ್ ಅಧಿಕಾರಿಗಳ ಒಂದು ದಿನದ ಸಂಬಳ ನೀಡಲು ತೀರ್ಮಾನಿಸಿದ್ದು, ಸಿಆರ್ ಪಿಎಫ್ ಕಲ್ಯಾಣ ನಿಧಿಗೆ ಪರಿಹಾರ ರೂಪವಾಗಿ ನೀಡಲಿದ್ದಾರೆ.
ಹುತಾತ್ಮ ಯೋಧರ ಕುಟುಂಬಕ್ಕೆ ಐಪಿಎಸ್ ಅಧಿಕಾರಿಗಳಿಂದ ಒಂದು ದಿನದ ವೇತನ ಘೋಷಣೆ - ವೇತನ ಘೋಷಣೆ
ಬೆಂಗಳೂರು: ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾದಲ್ಲಿ ಉಗ್ರರ ದುಷ್ಕೃತ್ಯದಿಂದ ಹುತ್ಮಾತರಾದ ಯೋಧರ ಕುಟುಂಬಗಳಿಗೆ ಕರ್ನಾಟಕ ಐಪಿಎಸ್ ಅಸೋಸಿಯೇಷನ್ ನಿಂದ ಒಂದು ದಿನದ ಸಂಬಳ ನೀಡಲು ನಿರ್ಧರಿಸಿದೆ.
ಅಧಿಕಾರಿಗಳಿಂದ ಒಂದು ದಿನದ ವೇತನ ಘೋಷಣೆಯ ಪತ್ರ
ಹುತಾತ್ಮ ಯೋಧ ಮಂಡ್ಯದ ಗುರು ಕುಟುಂಬಕ್ಕೆ 25 ಲಕ್ಷ ರೂಪಾಯಿ ಪರಿಹಾರ ಹಾಗೂ ಯೋಧನ ಪತ್ನಿಗೆ ಸರ್ಕಾರಿ ಉದ್ಯೋಗ ನೀಡುವುದಾಗಿ ಸಿಎಂ ಕುಮಾರಸ್ವಾಮಿ ಭರವಸೆ ನೀಡಿದ್ದಾರೆ. ದಾಳಿಯಲ್ಲಿ ಮೃತರಾದ ಎಲ್ಲಾ ಸೈನಿಕರ ಕುಟುಂಬಕ್ಕೂ ತಲಾ ಐದು ಲಕ್ಷ ಪರಿಹಾರ ನೀಡುವುದಾಗಿಯೂ ಅವರು ಘೋಷಿಸಿದ್ದಾರೆ.