ಕರ್ನಾಟಕ

karnataka

ETV Bharat / state

ಹಳೇ ಕಟ್ಟಡಗಳ ತೆರವಿಗೆ ನೋಟಿಸ್​​​‌ ಕೊಟ್ಟು ಸುಮ್ಮನಾದ ಬಿಬಿಎಂಪಿ: ಮಳೆ ಬಂದ್ರೆ ಅಪಾಯವೇ ಹೆಚ್ಚು!

ಕಳೆದ ವರ್ಷ ಮಳೆ ಬಂದು ಬೆಂಗಳೂರಿನಲ್ಲಿ ಕಳಪೆ ಗುಣಮಟ್ಟದ ಕಟ್ಟಡ ಕುಸಿದು ಅಪಾರ ಸಾವು-ನೋವು ಸಂಭವಿಸಿತ್ತು. ಅದಾದ ಬಳಿಕ ಬಿಬಿಎಂಪಿ 178 ಅಪಾಯಕಾರಿ ಸ್ಥಿತಿಯಲ್ಲಿರುವ ಕಟ್ಟಡಗಳನ್ನು 2019ರ ನವೆಂಬರ್​​ನಲ್ಲಿ ಸರ್ವೇ ಮಾಡಿತ್ತು. 78 ಕಟ್ಟಡಗಳ ಮಾಲೀಕರಿಗೆ ನೋಟಿಸ್‌ ನೀಡಲಾಗಿತ್ತು. ಇದೀಗ ಮಳೆಗಾಲ ಆರಂಭವಾಗಿದ್ರೂ ಬಿಬಿಎಂಪಿ ಕೈಕಟ್ಟಿ ಕುಳಿತಿದೆ.

old-buildings-problems-in-bengaluru
ಹಳೆ ಕಟ್ಟಡಗಳ ತೆರವಿಗೆ ನೋಟಿಸ್‌ ಕೊಟ್ಟು ಸುಮ್ಮನಾದ ಬಿಬಿಎಂಪಿ; ಮಳೆ ಬಂದ್ರೆ ಅಪಾಯವೇ ಹೆಚ್ಚು!

By

Published : Jun 19, 2020, 3:58 PM IST

ಬೆಂಗಳೂರು:ಉದ್ಯಾನ ನಗರಿಯಲ್ಲಿ ಮಳೆಗಾಲ ಆರಂಭವಾದ್ರೆ ಒಂದಿಲ್ಲೊಂದು ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಅಂತಹ ಸಮಸ್ಯೆಗಳ ಪೈಕಿ ಪ್ರಮುಖವಾದದ್ದು ಅಂದ್ರೆ ಅದು ಹಳೇ ಕಟ್ಟಡಗಳು. ಹೌದು, ಕಳೆದ ವರ್ಷ ಮಳೆ ಬಂದು ಕಳಪೆ ಗುಣಮಟ್ಟದ ಕಟ್ಟಡ ಕುಸಿದು ಅಪಾರ ಸಾವು-ನೋವು ಸಂಭವಿಸಿತ್ತು. ಇದರಿಂದ ಎಚ್ಚೆತ್ತ ಬಿಬಿಎಂಪಿ ಅಪಾಯಕಾರಿ ಕಟ್ಟಗಳನ್ನು ಗುರುತಿಸಿದ ನಂತರ 78 ಕಟ್ಟಗಳ ಮಾಲೀಕರಿಗೆ ನೋಟಿಸ್‌ ನೀಡಿ ಸುಮ್ಮನಾಗಿದೆ.

ಹಳೇ ಕಟ್ಟಡಗಳ ತೆರವಿಗೆ ನೋಟಿಸ್‌ ಕೊಟ್ಟು ಬಿಬಿಎಂಪಿ ಮೌನ: ಮಳೆ ಬಂದ್ರೆ ಅಪಾಯವೇ ಹೆಚ್ಚು!

ಈ ಬಗ್ಗೆ ಬಿಬಿಎಂಪಿ ಆಯುಕ್ತರನ್ನು ಕೇಳಿದ್ರೆ ಕೋವಿಡ್ ನಾಮ ಜಪಿಸುತ್ತಿದ್ದಾರೆ. ಮುಖ್ಯ ಎಂಜಿನಿಯರ್ ಸಿದ್ದೇಗೌಡರ 8 ವಲಯಗಳ ಪೈಕಿ ಕೇವಲ 3 ವಲಯಗಳ ಮಾಹಿತಿ ಸಿದ್ಧವಿದೆ. ಉಳಿದ ವಲಯಗಳಿಂದ ವರದಿ ತರಿಸಿಕೊಳ್ಳಬೇಕು ಎನ್ನುತ್ತಾರೆ. ಕಟ್ಟಡ ಬಿದ್ದ ವೇಳೆ ನಗರದ ಎಲ್ಲಾ ಹಳೇ ಕಟ್ಟಡಗಳನ್ನು ಗುರುತಿಸಬೇಕು. ಕಟ್ಟಡಗಳನ್ನು ದುರಸ್ತಿ ಮಾಡಿ ಎಂದು ಕಟ್ಟಡ ಮಾಲೀಕರಿಗೆ ಸೂಚಿಸುವುದು ಅಥವಾ ದುರಸ್ತಿ ಮಾಡಲು ಸಾಧ್ಯವಾಗದಿದ್ದರೆ ಧ್ವಂಸ ಮಾಡಲು ಪಾಲಿಕೆ ಖಡಕ್ ಸೂಚನೆ ಕೊಟ್ಟಿತ್ತು.

ಸದ್ಯ ಸರ್ವೇ ಮಾಡಿ ನೋಟಿನ್‌ ನೀಡಿ 8 ತಿಂಗಳು ಕಳೆದರೂ ಇನ್ನೂ ಪ್ರಗತಿ ಕಂಡಿಲ್ಲ. ಯಾವ ಮನೆ ಕೂಡ ರಿಪೇರಿ ಆಗಿಲ್ಲ, ಶಿಥಿಲವಾದ ಕಟ್ಟಡವನ್ನು ನೆಲಸಮ ಮಾಡಿಲ್ಲ. ಮತ್ತೆ ಮಳೆಗಾಲ ಬಂದು ಸಾವು ನೋವಾಗುವವರೆಗೆ ಪಾಲಿಕೆ ಬೇಜವಾಬ್ದಾರಿಯಿದ ಕೈಕಟ್ಟಿ ಕುಳಿತಿದೆ. ಈ ಕುರಿತು ಮಾತನಾಡಿದ ಆಯುಕ್ತ ಬಿ.ಹೆಚ್.ಅನಿಲ್ ಕುಮಾರ್, ಶಿಥಿಲಗೊಂಡ ಹಳೇ ಕಟ್ಟಡಗಳ ಮಾಲೀಕರಿಗೆ ನೋಟಿಸ್ ಜಾರಿ ಮಾಡಲಾಗಿದೆ. ರಿಪೇರಿ ಮಾಡಬೇಕು, ಇಲ್ಲ ತೆರವು ಮಾಡಬೇಕು ಎನ್ನುತ್ತಾರೆ.

ಪಾಲಿಕೆಯ ಕಟ್ಟಡಗಳೇ ಶಿಥಿಲಗೊಂಡಿದ್ದು, ವ್ಯಾಪಾರಸ್ಥರು ಜೀವಭಯದಲ್ಲಿದ್ದಾರೆ. ಕಬ್ಬನ್ ಪೇಟೆ ಮಾರುಕಟ್ಟೆಯ ವ್ಯಾಪಾರಿ ಹನುಮಂತ್ ಬಾಬು ಮಾತನಾಡಿ, ಈಗಾಗಲೇ ಮಾರುಕಟ್ಟೆಯ ಒಂದೊಂದೇ ಭಾಗದ ಛಾವಣಿ ಕುಸಿದು ಹಲವರಿಗೆ ಗಾಯ ಆಗಿದೆ. ಮಣ್ಣಿನ ಅಡಿ ಬಿದ್ದಿರುವ ಸರಕನ್ನು ತೆಗೆಯಲು ಸಹ ಆಗುತ್ತಿಲ್ಲ. ಪಾಲಿಕೆಗೆ ದೂರು ಕೊಟ್ಟರೂ ಪ್ರಯೋಜನವಾಗಿಲ್ಲ. ಆದರೆ ಬಾಡಿಗೆ ಮಾತ್ರ ಕಾಲ ಕಾಲಕ್ಕೆ ವಸೂಲಿ ಮಾಡ್ತಾರೆ ಎಂದು ಬೇಸರ ವ್ಯಕ್ತಪಡಿಸಿದರು.

ಪಾಲಿಕೆ ಬಳಿ ಇರುವ ಮಾಹಿತಿ ಪ್ರಕಾರ ಮಹದೇವಪುರ ವಲಯ 52ರ ಕೆಆರ್ ಪುರ ವಾರ್ಡ್‌ನ ಭಟ್ಟರಹಳ್ಳಿ ಪ್ರಾಥಮಿಕ ಶಾಲೆ ತೆರುವುಗೊಳಿಸಿ ಹೊಸದಾಗಿ ನಿರ್ಮಿಸಲು ಯೋಜನೆ ರೂಪಿಸಲಾಗಿದೆ. ಎ ನಾರಾಯಣಪುರದ ಹಳೇ ಮದ್ರಾಸ್ ರಸ್ತೆಯ ಹೋಂಡಾ ಶೋ ರೂಂ ಪಕ್ಕದ ಕಟ್ಟಡ ಹೀಗೆ 178 ಅಪಾಯಕಾರಿ ಕಟ್ಟಡಗಳನ್ನು ಗುರುತಿಸಲಾಗಿದ್ದು, ಅದಷ್ಟು ಬೇಗ ಈ ಹಳೇ ಕಟ್ಟಡಗಳನ್ನು ನೆಲಸಮ ಮಾಡಿ ಮುಂದಾಗಬಹುದಾಗ ಅಪಾಯದಿಂದ ಜನರನ್ನು ರಕ್ಷಿಸಬೇಕಿದೆ.

ABOUT THE AUTHOR

...view details