ಬೆಂಗಳೂರು:ಕೊರೊನಾ ಲಾಕ್ ಡೌನ್ ಹಿನ್ನೆಲೆಯಲ್ಲಿ ಸ್ಥಗಿತಗೊಂಡಿದ್ದ ದೇಶಿಯ ವಿಮಾನ ಹಾರಾಟ ಮೇ 27ರಿಂದ ಆರಂಭಗೊಳ್ಳಲಿದೆ.
ಇನ್ನೊಂದೆಡೆ ವಿಶೇಷ ವಿಮಾನದ ಮೂಲಕ ಅಂತಾರಾಷ್ಟ್ರೀಯ ವಿಮಾನ ಹಾರಾಟ ನಡೆಸಲು ಸಿದ್ಧತೆ ನಡೆಸಿದ್ದು ಶೀಘ್ರದಲ್ಲೇ ಟಿಕೆಟ್ ಬುಕ್ಕಿಂಗ್ ಪ್ರಾರಂಭವಾಗಲಿದೆ.

ಈ ಹಿನ್ನೆಲೆಯಲ್ಲಿ ಅನ್ಯ ರಾಜ್ಯಗಳಿಂದ ಕರ್ನಾಟಕಕ್ಕೆ ಬಂದು ಬೆಂಗಳೂರು ವಿಮಾನ ನಿಲ್ದಾಣದ ಮೂಲಕ ವಿದೇಶ ಪ್ರಯಾಣ ಮಾಡುವವರು ಕ್ವಾರಂಟೈನ್ಗೆ ಒಳಗಾಗುವಂತಿಲ್ಲ ಎಂದು ರಾಜ್ಯ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ತಿಳಿಸಿದ್ದಾರೆ.
ನೆರೆಯ ರಾಜ್ಯಗಳಿಂದ ನಗರ ಪ್ರವೇಶಿಸುವ ಪ್ರಯಾಣಿಕರು ಯಾವುದೇ ರೀತಿಯ ಕ್ವಾರಂಟೈನ್ಗೆ ಒಳಗಾಗದೆ ನೇರವಾಗಿ ವಿಮಾನ ಹತ್ತಬಹುದಾಗಿದೆ. ಇದಕ್ಕೂ ಮುನ್ನ ಆರೋಗ್ಯ ತಪಾಸಣೆಗೆ ಒಳಗಾಗಬೇಕಿದೆ.