ಬೆಂಗಳೂರು: ಪಾಪ ಮಕ್ಕಳು ಯಾರದ್ದೋ ಪ್ರಚೋದನೆಗೆ ಒಳಗಾಗಿ ಶಾಲೆ ಬಾಯ್ಕಾಟ್ ಮಾಡುವ ನಿರ್ಣಯ ತೆಗೆದುಕೊಂಡಿದ್ದಾರೆ ಎಂದು ಶಿಕ್ಷಣ ಸಚಿವ ಬಿಸಿ ನಾಗೇಶ್ ಹೇಳಿದ್ದಾರೆ. ವಿಧಾನಸೌಧದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಈ ಘಟನೆಯನ್ನು ಬಳಕೆ ಮಾಡಿಕೊಂಡು ಕೆಲ ಸಂಘಟನೆಗಳು ಕುಮ್ಮಕ್ಕು ಕೊಟ್ಟವು. ಕೆಲ ರಾಜಕೀಯ ಪಕ್ಷಗಳು ಇದನ್ನೂ ಬಳಸಿಕೊಂಡವು. ರಾಜ್ಯದಲ್ಲಿನ ಕಾನೂನು ಪರಿಸ್ಥಿತಿ ಗೃಹ ಸಚಿವರಿಗೆ ಗೊತ್ತಾಗುತ್ತೆ ಹೀಗಾಗಿ ಅವರ ಜೊತೆ ಚರ್ಚೆ ಮಾಡುತ್ತೇವೆ ಎಂದರು.
ಕೋರ್ಟ್ನಲ್ಲಿ ಇಂದು ತೀರ್ಪು ಬರಬಹುದು ಅನ್ನೋ ನಿರೀಕ್ಷೆ ಇತ್ತು. ಅದು ವಿಸ್ತೃತ ಪೀಠಕ್ಕೆ ವರ್ಗಾವಣೆ ಆಗಿದೆ. ಯಾವುದೇ ಮಧ್ಯಂತರ ಆದೇಶವೂ ಆಗಿಲ್ಲ. ಸರ್ಕಾರದ ಸುತ್ತೋಲೆ ಈಗಲೂ ಚಾಲೂ ಇದೆ. ಶಾಲೆಗೆ ಮಕ್ಕಳು ಬರುವ ಸಂದರ್ಭದಲ್ಲಿ 1995ರ ರೂಲ್ ಅನುಸಾರವೇ ಎಲ್ಲ ಮಕ್ಕಳು ಬರಬೇಕು. ಶಾಂತಿ ಕಾಪಾಡಬೇಕು. ಏಪ್ರಿಲ್ ಪರೀಕ್ಷೆಗೆ ಮಕ್ಕಳು ಸಿದ್ದರಾಗಬೇಕು ಎಂದು ಶಿಕ್ಷಣ ಸಚಿವರು ಸಲಹೆ ನೀಡಿದರು.
ರಜೆ ವಿಚಾರ, ಸಿಎಂ ಜತೆ ಚರ್ಚಿಸಿ ನಿರ್ಧಾರ:ರಜೆ ಮುಂದುವರಿಸುವ ಬಗ್ಗೆ ಇವತ್ತು ನಿರ್ಣಯ ತಗೆದುಕೊಳ್ಳಲ್ಲ. ಸಿಎಂ ಹಾಗೂ ಗೃಹ ಸಚಿವರ ಜೊತೆ ಚರ್ಚೆ ಮಾಡಿ ತೀರ್ಮಾನ ಮಾಡುತ್ತೇವೆ. ಆರು ಮಕ್ಕಳು ಸಣ್ಣ ವಿಷಯವನ್ನು ತಮ್ಮ ಬೇಳೆ ಬೇಯಿಸಿಕೊಳ್ಳಲು ಹೋಗಿ ಇಷ್ಡು ದೊಡ್ಡದು ಮಾಡಿದ್ದಾರೆ ಎಂದರು.
ನಾಳೆ ಬೆಳಗ್ಗೆ ಶುಕ್ರವಾರ ಎಕ್ಸಾಂ ಮಾಡಬೇಡಿ ಅಂತಾರೆ. ಕುರಾನ್ ಪ್ರಕಾರ ಕೆಲ ಸಬ್ಜೆಕ್ಟ್ ಇರಬಾರದು ಅಂತಾರೆ. ಹಾಗೆ ಮಾಡೋದಕ್ಕೆ ಸಾಧ್ಯಾನಾ? ಸರ್ಕಾರ ಇರೋದು ಸಂವಿಧಾನದ ಪ್ರಕಾರ ಆಡಳಿತ ನಡೆಸುವುದಕ್ಕೆ. ಕೋರ್ಟ್ ಏನು ನಿರ್ಣಯ ತೆಗೆದುಕೊಳ್ಳುತ್ತದೋ ಆ ಪ್ರಕಾರ ಸರ್ಕಾರ ನಡೆದುಕೊಳ್ಳುತ್ತದೆ. ಡಿಸೆಂಬರ್ ನಿಂದ ಇದು ಶುರು ವಾಗಿದೆ, ಬೇಕಾದಷ್ಟು ಸಲ ಸ್ಪಷ್ಟನೆ ಕೊಟ್ಟಿದ್ದೀನಿ ಎಂದರು.