ಕರ್ನಾಟಕ

karnataka

ETV Bharat / state

ಎಲ್ಲಿದ್ದಾನೆ ಸ್ವಯಂ ಘೋಷಿತ ದೇವ ಮಾನವ: ಇಲ್ಲಿದೆ 'ನಿತ್ಯ'ಪುರಾಣ - Case against Nithyananda

ಸ್ವಯಂ ಘೋಷಿತ ದೇವ ಮಾನವ ನಿತ್ಯಾನಂದನ ವಿರುದ್ಧ ಅತ್ಯಾಚಾರ ಹಾಗೂ ಭಾವನೆಗಳಿಗೆ ಧಕ್ಕೆ ತಂದ ಆರೋಪವಿದೆ. ಧ್ಯಾನಪೀಠದ ಸ್ವಘೋಷಿತ ದೇವ ಮಾನವ ನಿತ್ಯಾನಂದ ಸ್ವಾಮೀಜಿ ಎಲ್ಲಿದ್ದಾರೆ ಎನ್ನುವ ಪ್ರಶ್ನೆ ಬಹುತೇಕ ಮಂದಿಯಲ್ಲಿದೆ.

dsds
ನಿತ್ಯಾನಂದ

By

Published : Aug 27, 2020, 11:06 AM IST

ಬೆಂಗಳೂರು: ಸ್ವಯಂ ಘೋಷಿತ ದೇವ ಮಾನವ ನಿತ್ಯಾನಂದ ಸದ್ಯ ತನ್ನದೇ ಒಂದು ದೇಶ ನಿರ್ಮಾಣ ಮಾಡಿ ನಾಪತ್ತೆಯಾಗಿದ್ದಾನೆ. ಈತನಿಗಾಗಿ ಕರ್ನಾಟಕ ಪೊಲೀಸರು ‌, ಗುಜಾರಾರ್ ಪೊಲೀಸರು ಬೆಂಬಿಡದೇ ಹುಡುಕಾಟ ನಡೆಸಿದ್ರು. ಆದರೆ, ಈತ ನ್ಯಾಯಾಲಯ‌ ಹಾಗೂ ಪೊಲೀಸರ ಕಣ್ಣಿಗೆ ಮಣ್ಣೇರಚಿ ಕಾಣೆಯಾಗಿದ್ದಾನೆ.

ಸ್ವಯಂ ಘೋಷಿತ ದೇವಮಾನವ ನಿತ್ಯಾನಂದ ಎಲ್ಲಿದ್ದಾನೆ: ಒಂದು ಕಾಲದಲ್ಲಿ ಭಾರಿ ಸದ್ದು ಮಾಡಿದ ನಿತ್ಯಾನಂದನಿಗೆ ಸದ್ಯ ಪೊಲೀಸರು ಬ್ಲೂ ಕಾರ್ನರ್ ( ಇಂಟರ್ ಪೊಲ್) ನೋಟಿಸ್ ಹೊರಡಿಸಿ ಹುಡುಕಾಟದಲ್ಲಿ ತೊಡಗಿದ್ದಾರೆ. ಆದರೆ, ಈ ಮಧ್ಯೆ ಸಾಮಾಜಿಕ ಜಾಲತಾಣಗಳಲ್ಲಿ ನಿತ್ಯಾನಂದ ಒಂದೊಂದೇ ವಿಡಿಯೋ ಬಿಡುಗಡೆ ಮಾಡುತ್ತಿದ್ದಾನೆ. ಅಧ್ಯಾತ್ಮಿಕ, ಧರ್ಮೋಪದೇಶ ನೀಡುವ ವಿಡಿಯೋಗಳು ಬರುತ್ತಿವೆ. ಹಾಗೆ ನಿತ್ಯಾನಂದನೆ ಹೇಳಿಕೊಂಡ ಹಾಗೆ ದಕ್ಷಿಣ ಅಮೆರಿಕ ಖಂಡದ ಈಕ್ವೆಡಾರ್ ದೇಶಕ್ಕೆ ಸೇರಿದ ದ್ವೀಪವೊಂದನ್ನ ಸ್ವತಃ ನಿತ್ಯಾನಂದ ಖರೀದಿ ಮಾಡಿ ಕೈಲಾಸ ಎಂದು ಹೆಸರಿಟ್ಟಿದ್ದಾನೆ. ಟ್ರೆನಿಡಾಡ್ ಅಂಡ್ ಟೊಬಾಗೋ ದ್ವೀಪಗಳ ಸಮೀಪ ಇರುವ ಈ ಕೈಲಾಸ ದ್ವೀಪವನ್ನು ಹಿಂದೂ ಸಾರ್ವಭೌಮ ದೇಶ ಎಂದು ಕೂಡ ಕರೆಯುತ್ತಾರೆ. ಸದ್ಯ ನಿತ್ಯಾನಂದ ಈ ಕೈಲಾಸದ ಬಳಿ ಇರುವ ಮಾಹಿತಿ ಲಭ್ಯವಾಗಿದೆ.

ಕೈಲಾಸ ನಿರ್ಮಾಣಕ್ಕೆ ಹಣ ಕೊಟ್ಟಿದ್ದು ಶಿಷ್ಯೆ: ನಿತ್ಯಾನಂದ ಸ್ವತಂತ್ರ ಹಿಂದೂ ರಾಷ್ಟ್ರ ಕೈಲಾಸ ನಿರ್ಮಾಣದ ಹಿಂದೆ ಮಹಿಳಾ ಉದ್ಯಮಿಯೊಬ್ಬರ ಆರ್ಥಿಕ ಶಕ್ತಿ ಇದೆ ಅನ್ನೋದು ತಿಳಿದು ಬಂದಿದೆ. ಈಕೆ ಸುಮಾರು 5-6 ಕೋಟಿ ಹಣ ನೀಡಿದ್ದಾರೆ ಎನ್ನಲಾಗಿದೆ. ಇದರಿಂದ ಭೂಮಿ ಖರೀದಿಸಿ ನಿತ್ಯಾನಂದ ಕೈಲಾಸ ಸ್ಥಾಪಿಸಿದ್ದಾನೆ ಎಂಬ ವಿಚಾರ ಬಯಲಾಗಿದೆ. ‌ಹಾಗೆ ಕೊರೊನಾ ವೈರಸ್​ ಹರಡದಂತೆ ಕೈಲಾಸದಲ್ಲಿ 28 ದಿನ ಉಪವಾಸ ವ್ರತ ಮತ್ತು ವಿಶೇಷ ಪ್ರಾರ್ಥನೆ ಮಾಡುವುದಾಗಿ ನಿತ್ಯಾನಂದ ತಿಳಿಸಿದ್ದ. ಅಷ್ಟು ಮಾತ್ರವಲ್ಲದೇ ಇತ್ತೀಚೆಗೆ ಗಣೇಶ ಹಬ್ಬದ ನಿಮಿತ್ತ ನೂತನ ರಿಸರ್ವ್ ಬ್ಯಾಂಕ್ ಆಫ್​ ಕೈಲಾಸ್ ಜತೆಗೆ ತನ್ನದೇ ಭಾವಚಿತ್ರ ಇರುವ ಕರೆನ್ಸಿ ಸಹ ಬಿಡುಗಡೆ ಮಾಡಿದ್ದಾನೆ.

‌ಭಾರತದಿಂದ ನಿತ್ಯಾನಂದ ಪರಾರಿಯಾಗಿದ್ದು ಹೇಗೆ?: ಇನ್ನು ಆರೋಪಿ‌ ನಿತ್ಯಾನಂದನ ಮೇಲೆ ಈಗಾಗಲೇ ವಾರಂಟ್​ ಜಾರಿ ಇದೆ.‌ 2018ರಲ್ಲಿ ಭಾರತದಿಂದ ಪರಾರಿಯಾಗಲು ಯತ್ನಿಸಿ ಪಾಸ್​ಪೊರ್ಟ್ ನವೀಕರಣಕ್ಕೆ ಬಿಡದಿ ಆಶ್ರಮದಲ್ಲಿದ್ದಾಗ ರಾಮನಗರ ಪೊಲೀಸರಿಗೆ ಮನವಿ‌‌ ಮಾಡಿದ್ದ. ಈ ವೇಳೆ, ಅಂದಿನ ಎಸ್​ಪಿ ರಮೇಶ್ ಬಾನೋತ್ ಒಪ್ಪಿಗೆ ಕೊಟ್ಟಿರಲಿಲ್ಲ. ನಂತರ ಗುಜಾರಾರ್​ಗೆ ತೆರಳಿದ್ದ. ಮೂಲಗಳ ಪ್ರಕಾರ ನಿತ್ಯಾನಂದ ದೇಶದಿಂದ ಪರಾರಿಯಾಗಲು ನಕಲಿ ಪಾಸ್​ಪೋರ್ಟ್ ಅಥವಾ ಬೇರೆ ದೇಶದ ಪಾಸ್‌ಪೋರ್ಟ್ ಪಡೆದು ಭಾರತದಿಂದ ಆಚೆ ಹೋಗಿದ್ದಾನೆ.

ಮಹಿಳೆಯ ಮೇಲೆ ಅತ್ಯಾಚಾರ: ಬಿಡದಿ ಧ್ಯಾನಪೀಠದಲ್ಲಿ ಮಹಿಳೆಯ ಮೇಲೆ ಅತ್ಯಾಚಾರ ನಡೆಸಿದ್ದಾನೆ ಎಂಬ ಆರೋಪ ಕೇಳಿ ಬಂದಿತ್ತು. ಇದು ರಾಷ್ಟ್ರದ್ಯಾಂತ ಭಾರಿ ಸುದ್ದಿಯಾಗಿತ್ತು. ಇದೇ ವೇಳೆ, ಆಶ್ರಮಕ್ಕೆ ಬರುವ ಭಕ್ತರಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ ಎನ್ನಲಾಗಿದೆ. ಇದರ ಆತನ ಕಾರು ಚಾಲಕ ಲೆನಿನ್ ಎಂಬಾತ ದೂರು ದಾಖಲಿಸಿದ್ದ. ಹಾಗೆ ಮೊಬೈಲ್​ನಲ್ಲಿ ನಿತ್ಯಾನಂದನ ಖಾಸಗಿ ದೃಶ್ಯ ಕೂಡ ಸೆರೆಯಾಗಿತ್ತು. ಈ ವೇಳೆ, ತಾನು ಪುರುಷನೇ ಅಲ್ಲಾ ಎಂದು ನಿತ್ಯಾನಂದ ವಾದಿಸಿದ್ದ. ಈ ವೇಳೆ, ಪುರುಷತ್ವ ಪರೀಕ್ಷೆ, ಧ್ವನಿ ಹಾಗೂ ರಕ್ತ ಪರೀಕ್ಷೆ ಮಾಡಲಾಗಿತ್ತು‌.

ಬಿಡದಿ ಆಶ್ರಮದಲ್ಲಿ ಯುವತಿ ನಿಗೂಢ ಸಾವು: ಇನ್ನು 24 ವರ್ಷದ ಯುವತಿಯೊಬ್ಬಳು 2014 ರ ಡಿಸೆಂಬರ್ 28ರಂದು ಬಿಡದಿಯಲ್ಲಿ ನಿಗೂಡವಾಗಿ ಸಾವನ್ನಪ್ಪಿದಳು. ನಂತರ ನಿತ್ಯಾನಂದನೇ ತನ್ನ ಮಗಳ ಸಾವಿಗೆ ಕಾರಣ, ಆಶ್ರಮದೊಳಗೆ ತಮ್ಮ ಮಗಳಿಗೆ ಹಿಂಸೆ ಕೊಟ್ಟು ಆಕೆಯನ್ನ ಕೊಂದಿದ್ದಾರೆ ಎಂಬ ಆರೋಪವನ್ನ ಪೋಷಕರು ಮಾಡಿದ್ದರು.

ಆಶ್ರಮ ನೆಲಸಮ: ಗುಜಾರಾತ್ ಅಹಮದಾಬಾದ್​ನ ಯೋಗಿನಿ ಸರ್ವಜ್ಞಾನ ಪೀಠಂ ಆಶ್ರಮ ತಯಾರಿ ಮಾಡಲು ಸರ್ಕಾರಿ ನಿಯಗಳನ್ನ ಉಲ್ಲಂಘನೆ ‌ಮಾಡಿ ಖರೀದಿ ಮಾಡಿದ್ದ. ಹೀಗಾಗಿ ಈತನಿಗೆ ಜಾಗ ನೀಡಿದ ದೆಹಲಿ ಪಬ್ಲಿಕ್ ಸ್ಕೂಲ್ ಪ್ರಾಂಶುಪಾಲರನ್ನ ಬಂಧಿಸಲಾಗಿತ್ತು. ಹಾಗೆ ಇದೆ ಆಶ್ರಮದಲ್ಲಿ ಇಬ್ಬರು ಸಂಯೋಜಕರ ಮೇಲೆ ಮಕ್ಕಳ ಅಪಹರಣ, ಹಲ್ಲೆ ಹಿಂಸೆ ಮಾಡಿದ ಕೇಸ್ ದಾಖಲಾಗಿದ್ದವು. ವಿವಾದಗಳಿಂದಲೇ ಹೆಸರಾಗಿರುವ ಸ್ವಾಮಿ ನಿತ್ಯಾನಂದ ಮೇಲೆ ಹತ್ತಾರು ಪ್ರಕರಣಗಳ ಗಂಭೀರ ಆರೋಪವನ್ನ ಎದುರಿಸುತ್ತಿದ್ದಾನೆ. ಸದ್ಯ ಈ ಆಧಾರದ ಮೇಲೆ ನ್ಯಾಯಾಲಯ ಈತನ ಮೇಲೆ ಬಂಧನ ವಾರಂಟ್​ ಜಾರಿ ಮಾಡಿದೆ. ಭಾರತದಲ್ಲಿ ನಿತ್ಯಾನಂದನನ್ನು ಹುಡುಕುವುದು ವ್ಯರ್ಥ ಎಂದು ಪೊಲಿಸರು ನಿರ್ಧರಿಸಿ ಕೈಲಾಸ ಪರ್ವತಕ್ಕೆ ಹೋಗಿ ಯಾವ ರೀತಿ ಬಂಧಿಸಬಹುದು ಎಂಬುವುದರ ಬಗ್ಗೆ ಚರ್ಚೆ ಮುಂದುವರೆದಿದೆ.

ABOUT THE AUTHOR

...view details