ಕರ್ನಾಟಕ

karnataka

ETV Bharat / state

ನೈಟ್ ಕರ್ಫ್ಯೂ ವೇಳೆ ಅನಾವಶ್ಯಕ ಸಂಚಾರ: 61 ವಾಹನಗಳು ಜಪ್ತಿ

ಪೊಲೀಸರು ಬ್ಯಾರಿಕೇಡ್‌ಗಳನ್ನು ಹಾಕಿ ರಾತ್ರಿ 10 ಗಂಟೆ ಮೇಲೆ ಯಾರು‌ ಓಡಾಡದಂತೆ ಗಸ್ತಿನಲ್ಲಿದ್ದರು‌. ಈ ವೇಳೆ ಅನಾವಶ್ಯಕವಾಗಿ ಸಂಚಾರ ಮಾಡುತ್ತಿದ್ದ ವಾಹನಗಳನ್ನು ಪೊಲೀಸರು ಸೀಜ್ ಮಾಡಿದ್ದಾರೆ.‌

Needless traffic on night curfew 61 vehicles confiscated
ನೈಟ್ ಕರ್ಫ್ಯೂ ವೇಳೆ ಅನಾವಶ್ಯಕ ಸಂಚಾರ

By

Published : Apr 11, 2021, 2:46 PM IST

ಬೆಂಗಳೂರು: ನೈಟ್ ಕರ್ಫ್ಯೂ ಜಾರಿ ಹಿನ್ನೆಲೆ ಅವಧಿ‌ ಮೀರಿ ಸುಖಾಸುಮ್ಮನೆ ಸಂಚರಿಸುತ್ತಿದ್ದ ವಾಹನಗಳನ್ನು ನಗರ ಪೊಲೀಸರು ಜಪ್ತಿ ಮಾಡಿದ್ದಾರೆ.

ಕರ್ಫ್ಯೂ ಹಿನ್ನೆಲೆಯಲ್ಲಿ ದ್ವಿಮುಖ ರಸ್ತೆಗಳನ್ನು ಏಕಮುಖ ರಸ್ತೆಗಳನ್ನಾಗಿ ಪರಿವರ್ತಿಸಲಾಗಿತ್ತು. ಪೊಲೀಸರು ಬ್ಯಾರಿಕೇಡ್‌ಗಳನ್ನು ಹಾಕಿ ರಾತ್ರಿ 10 ಗಂಟೆ ಮೇಲೆ ಯಾರು‌ ಓಡಾಡದಂತೆ ಗಸ್ತಿನಲ್ಲಿದ್ದರು‌. ಈ ವೇಳೆ ಅನಾವಶ್ಯಕವಾಗಿ ಸಂಚಾರ ಮಾಡುತ್ತಿದ್ದ ವಾಹನಗಳನ್ನ ಪೊಲೀಸರು ಸೀಜ್ ಮಾಡಿದ್ದಾರೆ.‌

ಕೆಲವೆಡೆ ವಾಹನ ಸವಾರರಿಗೂ ಪೊಲೀಸರ ನಡುವೆ ಮಾತಿನ ಚಕಮಕಿ ನಡೆಯಿತು. ನಗರ ಅಗ್ನೇಯ ವಿಭಾಗದಲ್ಲಿ 61 ವಾಹನಗಳ ಪೈಕಿ 55 ದ್ವಿಚಕ್ರವಾಹನಗಳು ಹಾಗು ಐದು ನಾಲ್ಕು ಚಕ್ರದ ವಾಹನಗಳನ್ನು ಸೀಜ್‌ ಮಾಡಲಾಗಿದೆ. ವಿಕೋಪ ನಿರ್ವಹಣಾ ಕಾಯ್ದೆಯಡಿ ಪ್ರಕರಣ ದಾಖಲಾಗಿವೆ‌.

ಇದನ್ನೂ ಓದಿ: ನೈಟ್ ಕರ್ಫ್ಯೂ ಉಲ್ಲಂಘನೆ: ಮೈಸೂರಲ್ಲಿ 8 ಮಂದಿ ಅರೆಸ್ಟ್​

For All Latest Updates

TAGGED:

ABOUT THE AUTHOR

...view details