ಬೆಂಗಳೂರು :ಈಗಾಗಲೇ ಕಳೆದೆರಡು ವರ್ಷಗಳಿಂದ ಕೊರೊನಾ ಸೋಂಕಿನಿಂದ ಜನರು ಮಾನಸಿಕವಾಗಿ ಹಾಗೂ ಆರ್ಥಿಕವಾಗಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ಇದರ ಬೆನ್ನಲ್ಲೆ ಕೊರೊನಾ ಅಲೆಗಳ ಜೊತೆಗೆ ಬ್ಲ್ಯಾಕ್ ಫಂಗಸ್ ಡೆಲ್ಟಾ ವೈರಸ್ ನಂತಹ ಹೊಸ ರೋಗಳು ಹುಟ್ಟಿಕೊಂಡು ಜನರ ನಿದ್ದೆ ಕೆಡಿಸಿವೆ.
ಇದೀಗ ಮತ್ತೆ ರಾಜಧಾನಿಯಲ್ಲಿ ಡೆಲ್ಟಾ ವೈರಸ್‌ನ ವಂಶವಾಹಿಯ ತಳಿಗಳು ಪತ್ತೆಯಾಗಿವೆ. ಡೆಲ್ಟಾ ವಂಶೀಯ ತಳಿಗಳ ಕುರಿತು ತಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ. ಜಿನೋಮಿಕ್ ಸಿಕ್ವೆನ್ಸಿಂಗ್ ವೇಳೆ ಈ ಹೊಸ ತಳಿಗಳು ಪತ್ತೆಯಾಗಿವೆ. ಇನ್ನು, ಬೆಂಗಳೂರಿನ ಇಬ್ಬರಲ್ಲಿ ಹೊಸ ಡೆಲ್ಟಾದ ವಂಶವಾಹಿ ಕಪ್ಪಾ ತಳಿ ಪತ್ತೆಯಾಗಿದೆ. AY.3, AY.4, AY.6 ಎಂಬ ಮೂರು ಹೊಸ ಡೆಲ್ಟಾ ವಂಶೀಯ ತಳಿಗಳು ಪತ್ತೆಯಾಗಿವೆ.
ಸರಿ ಸುಮಾರು 400 ಸ್ಯಾಂಪಲ್‌ಗಳನ್ನು ಜಿನೋಮಿಕ್ ಸಿಕ್ವೆನ್ಸಿಂಗ್ ಮಾಡಿದ ವೇಳೆ ಈ ಮೂರು ಹೊಸ ತಳಿಗಳು ಪತ್ತೆಯಾಗಿವೆ. ಈ ಹೊಸ ತಳಿಗಳು ಮೂರನೇ ಅಲೆಗೆ ಕಾರಣವಾಗಬಹುದಾ ಎಂದು ತಜ್ಞರು ಶಂಕೆ ವ್ಯಕ್ತಪಡಿಸಿದ್ದು, ಸದ್ಯಕ್ಕೆ ಆ ಬಗ್ಗೆ ತಜ್ಞರು ಏನೂ ಹೇಳಿಲ್ಲ.