ಬೆಂಗಳೂರು:ಮಳೆ ಬಂತು ಅಂತಾ ರಾಜಧಾನಿಯ ಅಂಡರ್ ಪಾಸ್ಗಳಲ್ಲಿ ನಿವೇನಾದರೂ ವಾಹನ ಪಾರ್ಕ್ ಮಾಡಿದರೆ ಇನ್ಮುಂದೆ ದಂಡ ಕಟ್ಟಬೇಕು. ಸುಗಮ ಸಂಚಾರಕ್ಕಾಗಿ ಹಾಗೂ ಅಪಘಾತ ತಡೆಯುವ ಉದ್ದೇಶದಿಂದ ನಗರ ಸಂಚಾರ ಪೊಲೀಸರು ಹೊಸ ನಿಯಮ ಜಾರಿಗೊಳಿಸಿದ್ದಾರೆ.
ಬೆಂಗಳೂರು ಟ್ರಾಫಿಕ್ ಪೊಲೀಸರಿಂದ ಹೊಸ ನಿಯಮ ಜಾರಿ:ಬೆಳಗ್ಗೆ ಹಾಗೂ ಸಂಜೆ ಪ್ರಮುಖ ವೇಳೆಯಲ್ಲಿ ಅಂಡರ್ ಪಾಸ್ ಹಾಗೂ ಫ್ಲೈಓವರ್ಗಳಲ್ಲಿ ಅನಗತ್ಯವಾಗಿ ವಾಹನಗಳನ್ನ ಪಾರ್ಕ್ ಮಾಡುತ್ತಿರುವುದು ಕಂಡು ಬರುತ್ತಿದೆ. ಇನ್ನೂ ಕೆಲ ವಾಹನ ಚಾಲಕರು ಗಂಟೆಗಟ್ಟಲೇ ವಾಹನಗಳನ್ನು ನಿಲ್ಲಿಸುತ್ತಿದ್ದಾರೆ. ಮಳೆ ಬಂದಾಗ ವಾಹನ ನಿಲ್ಲಿಸುವುದರಿಂದ ಮಂದ ಬೆಳಕಿನ ಕಾರಣ ಹಿಂಬದಿಯಿಂದ ಬರುವ ವಾಹನಗಳಿಗೆ ಕಾಣುವುದಿಲ್ಲ. ಇದರಿಂದ ಅಪಘಾತಗಳು ಹೆಚ್ಚಾಗುತ್ತಿವೆ. ಇದೇ ರೀತಿ ಅಪಘಾತವಾಗಿ ಕೆ.ಆರ್.ಪುರ, ಜೀವನಭೀಮಾನಗರ, ಕೆ.ಎಸ್.ಲೇಔಟ್ ಹಾಗೂ ಹೈಗ್ರೌಂಡ್ಸ್ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಾಲ್ಕು ಪ್ರಕರಣ ದಾಖಲಾಗಿವೆ.