ಬೆಂಗಳೂರು: ಜವಳಿ ಕೈಗಾರಿಕೆಗಳನ್ನು ಉತ್ತೇಜಿಸಲು ರಾಜ್ಯದಲ್ಲಿ ಹೊಸದಾಗಿ ಸ್ಥಾಪಿಸಲ್ಪಡುವ/ ವಿಸ್ತರಣ/ ಆಧುನೀಕರಣ/ ವೈವಿದ್ದೀಕರಣ ಘಟಕಗಳಿಗೆ ರಿಯಾಯಿತಿ ಮತ್ತು ಪ್ರೋತ್ಸಾಹಧನವನ್ನು ಒದಗಿಸಲು ಅನುಕೂಲವಾಗುವಂತೆ ನೂತನ ಜವಳಿ ಮತ್ತು ಸಿದ್ಧ ಉಡುಪು ನೀತಿ 2019-24 ನ್ನು ರಾಜ್ಯ ಸರ್ಕಾರವು ಜಾರಿಗೆ ತಂದಿದೆ. ಈ ಯೋಜನೆಯಡಿಯಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಫಲಾನುಭವಿಗಳಿಗೆ ಸಾಲಾಧಾಲಿತ ಬಂಡವಾಳ ಸಹಾಯಧನವನ್ನು ಹೆಚ್ಚುವರಿಯಾಗಿ ಶೇ.5 ರಷ್ಟು ನೀಡುವ ಅವಕಾಶ ನೀಡಲಾಗಿದೆ.
ಕೆ.ಹೆಚ್.ಡಿ.ಸಿ. ನಿಗಮದ ಯೋಜನೆಗಳು:
ನಿಗಮದಲ್ಲಿ ಉತ್ಪಾದಿಸಲಾಗುವ ಬೆಡ್ ಶೀಟ್, ಜಮಖಾನೆ, ಟವೆಲ್ ಹಾಗೂ ಇತರೆ ವಸ್ತ್ರಗಳನ್ನು ರಾಜ್ಯದ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ ವಸತಿ ನಿಲಯಗಳ ಬೇಡಿಕೆಯಂತೆ ಮಾಡಲಾಗುತ್ತಿದೆ. ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡದ ನೇಕಾರರಿಗೆ ಉತ್ಪಾದನೆಗೆ ನೀಡಲಾಗುವ ಪರಿವರ್ತನಾ ಶುಲ್ಕದಲ್ಲಿ ಶೇ.50 ರಷ್ಟು ಸಹಾಯಧನ ನೀಡಲಾಗುತ್ತಿದೆ.
ಕೈ ಮಗ್ಗದ ಯೋಜನೆ ಮತ್ತು ಮಾನದಂಡಗಳೇನು? :
1. ಕೈಮಗ್ಗ ಮತ್ತು ಸಲಕರಣೆಗಳು:
• ಕರ್ನಾಟಕ ರಾಜ್ಯದ ನಿವಾಸಿಯಾಗಿದ್ದು, ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡದವರಾಗಿರಬೇಕು.
- ಕೈಮಗ್ಗ ನೇಯ್ಗೆಯಲ್ಲಿ ತರಬೇತಿ ಪಡೆದಿರಬೇಕು ಮತ್ತು ವೃತ್ತಿಪರ ನೇಕಾರರಾಗಿರಬೇಕು.
- ಮಗ್ಗಗಳನ್ನು ಅಳವಡಿಸಲು ಅಗತ್ಯ ಜಾಗ ಹೊಂದಿರಬೇಕು.
2. ಎರಡು ವಿದ್ಯುತ್ ಮಗ್ಗಗಳ ಖರೀದಿಗೆ ಸಹಾಯಧನ. ಇದಕ್ಕೆ ಬೇಕಿರುವ ಮಾನದಂಡಗಳು ಈ ಕೆಳಕಂಡಂತೆ ಇವೆ.
- ಕರ್ನಾಟಕ ರಾಜ್ಯದ ನಿವಾಸಿಯಾಗಿದ್ದು, ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡದವರಾಗಿರಬೇಕು.
- ವಿದ್ಯುತ್ ಮಗ್ಗ ನೇಯ್ಗೆಯಲ್ಲಿ ತರಬೇತಿ ಪಡೆದಿರಬೇಕು ಮತ್ತು ವೃತ್ತಿಪರ ನೇಕಾರರಾಗಿರಬೇಕು
- ಮಗ್ಗಗಳನ್ನು ಅಳವಡಿಸಲು ಅವಶ್ಯಕ ಜಾಗ ಹೊಂದಿರಬೇಕು ಹಾಗೂ ಅಗತ್ಯ ವಿದ್ಯುತ್ ಸಂಪರ್ಕ ಹೊಂದಿರಬೇಕು.
- ಮಗ್ಗಗಳನ್ನು ಖರೀದಿಸಲು ಅವಶ್ಯವಿರುವ ಮೊತ್ತವನ್ನು ಬ್ಯಾಂಕಿನಿಂದ ಸಾಲ ಪಡೆದುಕೊಳ್ಳಬೇಕು.
3. ಎಲೆಕ್ಟ್ರಾನಿಕ್ ಜಕಾರ್ಡ್ ಖರೀದಿಗೆ ಸಹಾಯಧನ: ಕರ್ನಾಟಕ ರಾಜ್ಯದ ನಿವಾಸಿಯಾಗಿದ್ದು, ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡದವರಾಗಿರಬೇಕು.
- ಸ್ವಂತ ವಿದ್ಯುತ್ ಮಗ್ಗ ಹೊಂದಿರಬೇಕು, ಜಕಾರ್ಡ್
- ನೇಯ್ಗೆಯಲ್ಲಿ ಪರಿಣಿತಿ/ ತರಬೇತಿ ಹೊಂದಿರಬೇಕು.
- ಯಂತ್ರೋಪಕರಣಗಳನ್ನು ಖರೀದಿಸಲು ಅವಶ್ಯವಿರುವ ಮೊತ್ತವನ್ನು ಬ್ಯಾಂಕಿನಿಂದ ಸಾಲ ಪಡೆಯಬಹುದು.
4.ಮಗ್ಗ ಪೂರ್ವ ಸೌಲಭ್ಯ :
- ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡದ ಕೈಮಗ್ಗ, ವಿದ್ಯುತ್ ಮಗ್ಗ ನೇಕಾರರ ಅಥವಾ ವಿವಿಧೋದ್ದೇಶಗಳ ಸಹಕಾರ ಸಂಘಗಳಾಗಿರಬೇಕು.
- ಮಗ್ಗ ಪೂರ್ವ ಸೌಲಭ್ಯಕ್ಕಾಗಿ ವೈಡಿಂಗ್, ವಾರ್ಪಿಂಗ್, ಟ್ವಿಸ್ಟಿಂಗ್ ಮತ್ತು ಡೈಯಿಂಗ್ ಉಪಕರಣಗಳನ್ನು ಒದಗಿಸಲಾಗುತ್ತದೆ.
5 . ಸೈಜಿಂಗ್ ಘಟಕ ಸ್ಥಾಪನೆ:
ಸೈಜಿಂಗ್ ಉದ್ಯಮದಲ್ಲಿ ಅನುಭವ / ಆಸಕ್ತಿಯುಳ್ಳ ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡದ ಸಹಕಾರ ಸಂಘಗಳು / ಪ.ಜಾ/ಪ.ಪಂಗಡದ ಫಲಾನುಭವಿಗಳ ಎಸ್.ಪಿ.ಐ (ವಿಶೇಷ ಉದ್ದೇಶಿತ ವಾಹನ)
ಕನಿಷ್ಠ ಒಂದು ಎಕರೆ ಜಮೀನು / ನಿವೇಶನವನ್ನು ಹೊಂದಿರಬೇಕು.
6. ಮಿನಿ ಪವರ್‌ಲೂಮ್ ಪಾರ್ಕ್ : ಜವಳಿ ಉದ್ಯಮದಲ್ಲಿ ಅನುಭವ / ಆಸಕ್ತಿಯುಳ್ಳ ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡದ ಸಹಕಾರ ಸಂಘಗಳು ಪ.ಜಾ/ಪ.ಪಂಗಡದ ಲಾನುಭವಿಗಳ ಎಸ್.ಪಿ.ಎ (ವಿಶೇಷ ಉದ್ದೇಶಿತ ವಾಹನ).
ಕನಿಷ್ಠ ಎರಡು ಎಕರೆ ಜಮೀನು / ನಿವೇಶನವನ್ನು ಹೊಂದಿರಬೇಕು.
7. ಜವಳಿ ಕ್ಷೇತ್ರಕ್ಕೆ ಸಂಬಂಧಿಸಿದ ಸಣ್ಣ ಮತ್ತು ಅತಿ ಸಣ್ಣ(ಎಸ್.ಎಂ.ಇ) ಘಟಕಗಳ ಸ್ಥಾಪನೆಗೆ ಸಹಾಯಧನ :
ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡದ ವೈಯಕ್ತಿಕ ಫಲಾನುಭವಿ/ ಪಾಲುದಾಲಿಕೆ ಸಂಸ್ಥೆ / ಸಂಘ / ಸಂಸ್ಥೆಗಳು/ ಕಂಪನಿ (ಶೇ.100 ರಷ್ಟು ಪ.ಜಾ ಮತ್ತು ಪ.ಪಂಗಡದ ಸದಸ್ಯರನ್ನು ಹೊಂದಿರತಕ್ಕದ್ದು).
ಕೈಗಾರಿಕಾ ನಿವೇಶನ / ಕಟ್ಟಡವನ್ನು ಹೊಂದಿರಬೇಕು. ಯೋಜನಾ ಮೊತ್ತದ ಕನಿಷ್ಠ ಶೇ. 50 ಅಥವಾ ಗರಿಷ್ಠ ಶೇ. 90 ರಷ್ಟು ಮೊತ್ತವನ್ನು ಬ್ಯಾಂಕ್ / ಹಣಕಾಸು ಸಂಸ್ಥೆಯಿಂದ ಸಾಲ ಪಡೆಯತಕ್ಕದ್ದು.
ಜವಳಿ ನೀತಿಯ ಯೋಜನೆಗಳೇನು? :
ರಿಯಾಯಿತಿ ಮತ್ತು ಪ್ರೋತ್ಸಾಹ ನೀಡುವ ಮಾನದಂಡಗಳು ಈ ಕೆಳಕಂಡಂತೆ ಇವೆ.
- ಉದ್ದಿಮೆದಾರರು ಯೋಜನಾ ಮೊತ್ತದ ಕನಿಷ್ಠ ಶೇ.50 ರಷ್ಟು ಬ್ಯಾಂಕ್ ಸಾಲ ಪ್ರಾರಂಭಿಸಬೇಕಾಗಿರುತ್ತದೆ.
- ಉತ್ಪಾದನೆ ಪ್ರಾರಂಭವಾದ ದಿನಾಂಕದಿಂದ 9 ತಿಂಗಳ ಅವಧಿಯೊಳಗೆ ಪ್ರಸ್ತಾವನೆಯನ್ನು ಇಲಾಖೆಯ ಜಿಲ್ಲಾಮಟ್ಟದ ಕಚೇರಿಗೆ ಸಲ್ಲಿಸಬೇಕಾಗುತ್ತದೆ.
- ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆಯಿಂದ ಯಾವುದೇ ರಿಯಾಯಿತಿ/ ಪ್ರೋತ್ಸಾಹಧನ ಪಡೆದಿರಬಾರದು.
- ಘಟಕ ಸ್ಥಾಪಿಸುವ ಜಾಗವು ಕೈಗಾರಿಕೆ ಉದ್ದೇಶಕ್ಕಾಗಿ ಭೂ ಪರಿವರ್ತನೆ ಆಗಿರಬೇಕು.
- ವಿದ್ಯುತ್ ಸಂಪರ್ಕ ಹೊಂದಿರಬೇಕು.
- ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಹಾಗೂ ಕಾರ್ಖಾನೆ ಮತ್ತು ಬಾಯ್ಲರ್ಸ್ ಇಲಾಖೆಯಿಂದ ಎನ್.ಒ.ಸಿ ಪಡೆದಿರಬೇಕು. ಸ್ಥಳೀಯ ಪ್ರಾಧಿಕಾರದಿಂದ ಜನರಲ್ ಲೈಸನ್ಸ್ ಪಡೆದಿರಬೇಕು.
- ಹೊಸ ಯಂತ್ರೋಪಕರಣಗಳನ್ನು ಅಳವಡಿಸಬೇಕು. ಆಮದು ಮಾಡಿಕೊಂಡ ಹಳೆಯ ಯಂತ್ರೋಪಕರಣಗಳನ್ನು ಅಳವಡಿಸಲು ಅವಕಾಶವಿರುತ್ತದೆ.
- ಈ ಯೋಜನೆಯಡಿ ಸಾಮಾನ್ಯ ವರ್ಗದವರಿಗೆ ಘಟಕ ಹಾಗೂ ವಿಭಾಗಗಳಿಗೆ ಅನುಗುಣವಾಗಿ ಶೇ.15 ರಿಂದ ಶೇ.30 ರವರೆಗೆ ರಿಯಾಯಿತಿ ಮತ್ತು ಪ್ರೋತ್ಸಾಹಧನ ನೀಡಲಾಗುತ್ತಿದ್ದು, ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡದ ಉದ್ದಿಮೆದಾರರಿಗೆ ಹೆಚ್ಚುವರಿ ಶೇ.5 ರಷ್ಟು ರಿಯಾಯಿತಿ ಮತ್ತು ಪ್ರೋತ್ಸಾಹ ನೀಡಲು ಅವಕಾಶವಿದೆ.
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಯುವಕ-ಯುವತಿಯರಿಗೆ ಸ್ವಯಂ ಉದ್ಯೋಗ ಮಾಡಲು ಇರುವ ಯೋಜನೆಗಳು ಮತ್ತು ಮಾನದಂಡಗಳೇನು?:
1.ಕೈಮಗ್ಗ ಮತ್ತು ಸಲಕರಣೆಗಳು:ಕರ್ನಾಟಕ ರಾಜ್ಯದ ನಿವಾಸಿಯಾಗಿದ್ದು, ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡದವರಾಗಿರಬೇಕು. ಕೈಮಗ್ಗ ನೇಯ್ಗೆ ಯಲ್ಲಿ ತರಬೇತಿ ಪಡೆದಿರಬೇಕು. ವೃತ್ತಿಪರ ನೇಕಾರರಾಗಿರಬೇಕು. ಮಗ್ಗಗಳನ್ನು ಅಳವಡಿಸಲು ಅಗತ್ಯ ಜಾಗ ಹೊಂದಿರಬೇಕು.
2. ಎರಡು ವಿದ್ಯುತ್ ಮಗ್ಗ ಖರೀದಿಗೆ ಸಹಾಯಧನ:
ಕರ್ನಾಟಕ ರಾಜ್ಯದ ನಿವಾಸಿಯಾಗಿದ್ದು, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದವರಾಗಿರಬೇಕು. ವಿದ್ಯುತ್ ಮಗ್ಗ ನೇಯ್ಗೆಯಲ್ಲಿ ತರಬೇತಿ ಪಡೆದಿರಬೇಕು/ ವೃತ್ತಿಪರ ನೇತಾರರಾಗಿರಬೇಕು. ಅಗತ್ಯ ಜಾಗ ಹೊಂದಿರಬೇಕು. ಅಗತ್ಯ ವಿದ್ಯುತ್ ಸಂಪರ್ಕ ಹೊಂದಿರಬೇಕು. ಮಗ್ಗಗಳನ್ನು ಖರೀದಿಸಲು ಅವಶ್ಯವಿರುವ ಮೊತ್ತವನ್ನು ಬ್ಯಾಂಕಿನಿಂದ ಸಾಲ ಪಡೆಯಬಹುದು.
3. ಮಿನಿ ಪವರ್‌ಲೂಮ್ ಪಾರ್ಕ್: ಜವಳಿ ಉದ್ಯಮದಲ್ಲಿ ಅನುಭವ / ಆಸಕ್ತಿಯುಳ್ಳ ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡದ ಸಹಕಾರ ಸಂಘಗಳು | ಪ.ಜಾ/ಪ.ಪಂಗಡದ ಫಲಾನುಭವಿಗಳ ಎಸ್.ಪಿ.ವಿ (ವಿಶೇಷ ಉದ್ದೇಶಿತ ವಾಹನ). ಕನಿಷ್ಠ ಎರಡು ಎಕರೆ ಜಮೀನು/ ನಿವೇಶನವನ್ನು ಹೊಂದಿರಬೇಕು.
4. ಜವಳಿ ಕ್ಷೇತ್ರಕ್ಕೆ ಸಂಬಂಧಿಸಿದ ಸಣ್ಣ ಮತ್ತು ಅತಿ ಸಣ್ಣ (ಎಸ್.ಎಂ.ಇ)ಘಟಕಗಳ ಸ್ಥಾಪನೆಗೆ ಸಹಾಯಧನ: ಜಾತಿ / ಪರಿಶಿಷ್ಟ ಪಂಗಡದ ವೈಯಕ್ತಿಕ ಫಲಾನುಭವಿ/ ಪಾಲುದಾರಿಕೆ ಸಂಸ್ಥೆ / ಸಂಘ / ಸಂಸ್ಥೆಗಳು /ಕಂಪನಿ (ಶೇ.100 ರಷ್ಟು ಪ.ಜಾತಿ/ ಪ. ಪಂಗಡದ ಸದಸ್ಯರನ್ನು ಹೊಂದಿರಬೇಕು).
ಕೈಗಾರಿಕಾ ನಿವೇಶನ/ಕಟ್ಟಡವನ್ನು ಹೊಂದಿರಬೇಕು.
ಯೋಜನಾ ಮೊತ್ತದ ಕನಿಷ್ಠ ಶೇ. 50 ಅಥವಾ ಗರಿಷ್ಠ ಶೇ. 90 ಮೊತ್ತವನ್ನು ಬ್ಯಾಂಕ್ / ಹಣಕಾಸು ಸಂಸ್ಥೆಯಿಂದ ಸಾಲ ಪಡೆಯಬಹುದು.
ನೂತನ ಜವಳಿ ಮತ್ತು ಸಿದ್ಧ ಉಡುಪು ನೀತಿ(2019-24) ಯೋಜನೆಯಡಿ ತರಬೇತಿ ನಂತರ ವಿವಿಧ ಜವಳಿ ಕೈಗಾರಿಕೆಗಳಲ್ಲಿ ಉದ್ಯೋಗವಕಾಶ ಕಲ್ಪಿಸಲಾಗುತ್ತಿದೆ ಹಾಗೂ ಸ್ವಯಂ ಉದ್ಯೋಗ ಕೈಗೊಳ್ಳುವವರಿಗೆ ಉತ್ತೇಜಿಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.