ಕರ್ನಾಟಕ

karnataka

ETV Bharat / state

ವಸಂತಪುರ ಅಪಾರ್ಟ್​ಮೆಂಟ್​​ನಲ್ಲಿ ರೂಪಾಂತರಿ ಕೊರೊನಾ ವೈರಸ್ ‌: ವಯೋವೃದ್ಧರು ಖಾಸಗಿ ಆಸ್ಪತ್ರೆಗಳಿಗೆ ಶಿಫ್ಟ್

ಅಪಾರ್ಟ್​ಮೆಂಟ್​​ನಲ್ಲಿದ್ದ ವಯೋವೃದ್ಧರನ್ನು 2 ಖಾಸಗಿ ಆಸ್ಪತ್ರೆಗಳಿಗೆ ಶಿಫ್ಟ್ ಮಾಡಲಾಗುತ್ತಿದ್ದು, ಓಲ್ಡ್ ಏರ್ ಪೋರ್ಟ್ ರಸ್ತೆಯಲ್ಲಿರುವ ಅಕ್ಷಯ ಆಸ್ಪತ್ರೆ ಹಾಗೂ ಈಸ್ಟ್ ಎಂಡ್ ಆಸ್ಪತ್ರೆಗೆ ಕರೆದೊಯ್ಯಲಾಗುತ್ತಿದೆ. ಪ್ರತಿಯೊಬ್ಬರಿಗೂ ವಿಶೇಷ ಕೊಠಡಿಯಲ್ಲಿ ಇರಿಸಿ ನಿಗಾ ಇಡಲಾಗುತ್ತಿದೆ..

FIle Photo
ಸಂಗ್ರಹ ಚಿತ್ರ

By

Published : Dec 29, 2020, 1:52 PM IST

ಬೆಂಗಳೂರು: ಬ್ರಿಟನ್​ ದೇಶದಲ್ಲಿ ಕಾಣಿಸಿಕೊಂಡ ಕೊರೊನಾ ರೂಪಾಂತರಿ ವೈರಸ್​​ ಭಾರತಕ್ಕೂ ಕಾಲಿಟ್ಟಿದ್ದು, ಬೆಂಗಳೂರಿನ ಮೂವರು ನಿವಾಸಿಗಳಿಗೆ ಈ ಹೊಸ ಪ್ರಭೇದದ ಸೋಂಕು ತಗುಲಿರುವುದು ದೃಢವಾಗಿದೆ. ‌

ಸಿಲಿಕಾನ್​ ಸಿಟಿಯ ವಸಂತಪುರದಲ್ಲಿ ಸುಮಾರು 25 ಫ್ಲಾಟ್​​ಗಳಿರುವ ಅಪಾರ್ಟ್​ಮೆಂಟ್​​ನಲ್ಲಿ ಮೂವರಿಗೆ ರೂಪಾಂತರಿ ಕೊರೊನಾ ದೃಢಪಟ್ಟಿರುವ ಹಿನ್ನೆಲೆ ಅಕ್ಕಪಕ್ಕದ ನಿವಾಸಿಗಳಿಗೂ ಕ್ವಾರೆಂಟೈನ್​ ಮಾಡಲಾಗುತ್ತಿದೆ. ಇನ್ನು ಮುಂಜಾಗೃತ ಕ್ರಮವಾಗಿ ವಯೋವೃದ್ಧರನ್ನು ಆಸ್ಪತ್ರೆಗೆ ಶಿಫ್ಟ್ ಮಾಡಲಾಗುತ್ತಿದೆ.

ಅಪಾರ್ಟ್​ಮೆಂಟ್​​ನಲ್ಲಿದ್ದ ವಯೋವೃದ್ಧರನ್ನು 2 ಖಾಸಗಿ ಆಸ್ಪತ್ರೆಗಳಿಗೆ ಶಿಫ್ಟ್ ಮಾಡಲಾಗುತ್ತಿದ್ದು, ಓಲ್ಡ್ ಏರ್ ಪೋರ್ಟ್ ರಸ್ತೆಯಲ್ಲಿರುವ ಅಕ್ಷಯ ಆಸ್ಪತ್ರೆ ಹಾಗೂ ಈಸ್ಟ್ ಎಂಡ್ ಆಸ್ಪತ್ರೆಗೆ ಕರೆದೊಯ್ಯಲಾಗುತ್ತಿದೆ. ಪ್ರತಿಯೊಬ್ಬರಿಗೂ ವಿಶೇಷ ಕೊಠಡಿಯಲ್ಲಿ ಇರಿಸಿ ನಿಗಾ ಇಡಲಾಗುತ್ತಿದೆ.

ಸದ್ಯ ಈ ಎಲ್ಲರಿಗೂ ಕೊರೊನಾ ನೆಗಟಿವ್ ರಿಪೋರ್ಟ್ ಬಂದಿದೆ, ಆದರೆ ಮುಂಜಾಗ್ರತ ಕ್ರಮವಾಗಿ ಈ ಅಪಾರ್ಟ್​ಮೆಂಟ್​​ ನಿವಾಸಿಗಳನ್ನು ಆಸ್ಪತ್ರೆಗಳಿಗೆ ಶಿಫ್ಟ್ ಮಾಡಲಾಗುತ್ತಿದೆ ಎಂದು ಆರೋಗ್ಯಧಿಕಾರಿಗಳು ತಿಳಿಸಿದ್ದಾರೆ.

ABOUT THE AUTHOR

...view details