ಬೆಂಗಳೂರು: ಕಲರ್ಸ್ ಸೂಪರ್ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಪಾಪಾ ಪಾಂಡು ಧಾರಾವಾಹಿಯಲ್ಲಿ ಪುಂಡನ ಹೆಂಡತಿ ಚಾರುಲತಾ ಆಗಿ ನಟಿಸುತ್ತಿದ್ದ ನಯನಾ, ಇದೀಗ ಹೊಚ್ಚ ಹೊಸ ಧಾರಾವಾಹಿ ಗಿಣಿರಾಮದಲ್ಲಿ ಮೊದಲ ಬಾರಿಗೆ ನಾಯಕಿಯಾಗಿ ಬಣ್ಣ ಹಚ್ಚಲಿದ್ದಾರೆ.
ಗಿಣಿರಾಮದಲ್ಲಿ ಮೊದಲ ಬಾರಿಗೆ ನಾಯಕಿಯಾಗಿ ಪಾಪಪಾಂಡು ಚೌಕಾಸಿ ಚಾರು ಬಾಲ್ಯದಿಂದಲೂ ಹಾಡುಗಾರ್ತಿಯಾಗಬೇಕೆಂಬ ಕನಸು ಕಂಡಿದ್ದ ನಯನಾ,ನಾಟಕಗಳಲ್ಲಿ ಹಾಡುತ್ತಿದ್ದರು. ಬಳಿಕ ಕರ್ನಾಟಕ ಕ್ಲಾಸಿಕಲ್ ಮತ್ತು ಹಿಂದೂಸ್ತಾನಿ ಸಂಗೀತವನ್ನು ಶಾಸ್ತ್ರೋಕ್ತವಾಗಿ ಕಲಿತು, ಪದವಿ ಬಳಿಕ ರಿದಂಸ್ ಫೈನ್ ಆರ್ಟ್ಸ್ ಕಾಲೇಜಿನಲ್ಲಿ ದೇಸಿ ಸಂಗೀತದ ಉಪನ್ಯಾಸಕಿಯಾಗಿ ಕೆಲಸ ಆರಂಭಿಸಿದ್ದರು.
ಗಿಣಿರಾಮದಲ್ಲಿ ಮೊದಲ ಬಾರಿಗೆ ನಾಯಕಿಯಾಗಿ ಪಾಪಪಾಂಡು ಚೌಕಾಸಿ ಚಾರು ಬಳಿಕ ಅವರ ಕಾಲು ಫ್ಯಾಕ್ಚರ್ ಆಗಿ ಉಪನ್ಯಾಸಕಿ ಕೆಲಸಕ್ಕೆ ಬಾಯ್ ಹೇಳಿದ್ರು. ಅದ್ಯಾವಾಗ ರೆಸ್ಟ್ ಸಮಯದಲ್ಲಿ ಮನೆಯಲ್ಲಿ ಕುಳಿತು ಟಿವಿ ನೋಡುತ್ತಿದ್ದರೋ ಆಗ ನಾನ್ಯಾಕೆ ನಟಿಸಬಾರದು ಎಂದು ಮನೆಯವರ ಒಪ್ಪಿಗೆ ಪಡೆದು ಶಾಂತಂ ಪಾಪಂ ಕಾರ್ಯಕ್ರಮದಲ್ಲಿ ನಟಿಸಿದ್ರು. ಹಾಡುವುದು ಬಿಟ್ಟು ಬೇರೇನೋ ಗೊತ್ತಿರದ ನಯನಾ ನಟಿಸುವ ಅವಕಾಶ ಬಂದಾಗ ಹಿಂದೆ ಮುಂದೆ ನೋಡಲಿಲ್ಲ. ನಟನೆಯಲ್ಲೂ ಸೈ ಎನಿಸಿಕೊಂಡ ಅವರು, ಮುಂದೆ ಮಂಗ್ಳೂರು ಹುಡ್ಗಿ ಹುಬ್ಬಳ್ಳಿ ಹುಡ್ಗದಲ್ಲಿ ಧಾರವಾಹಿಯಲ್ಲಿ ಬಣ್ಣ ಹಚ್ಚಿದರು.
ಗಿಣಿರಾಮದಲ್ಲಿ ಮೊದಲ ಬಾರಿಗೆ ನಾಯಕಿಯಾಗಿ ಪಾಪಪಾಂಡು ಚೌಕಾಸಿ ಚಾರು ಧಾರಾವಾಹಿಯ ಜೊತೆಗೆ ನಿರೂಪಕರಾಗಿಯೂ ಗುರುತಿಸಿಕೊಂಡಿರುವ ನಯನಾ, ಯೂ 2 ಚಾನೆಲ್ನ ಫಿಲ್ಮಿಭಾತ್ ಕಾರ್ಯಕ್ರಮವನ್ನು ನಡೆಸಿಕೊಡುತ್ತಿದ್ದರು. ಮುಂದೆ ಪಾಪಾ ಪಾಂಡುವಿನ ಚಾರುಲತಾ ಅಲಿಯಾಸ್ ಚೌಕಾಸಿ ಚಾರು ಆಗಿ ಪರಾಕಾಯ ಪ್ರವೇಶ ಮಾಡಿರುವ ನಯನಾ ಕಾಮಿಡಿಯ ಮೂಲಕ ಮತ್ತೆ ಜನರ ಮನಸ್ಸು ಸೆಳೆಯುವಲ್ಲಿ ಯಶಸ್ವಿಯಾದರು. ಇದೀಗ ಉತ್ತರ ಸೊಗಡಿನ ಭಾಷೆಯ ಧಾರಾವಾಹಿಯಲ್ಲಿ ನಾಯಕಿಯಾಗಿ ಬರುತ್ತಿದ್ದಾರೆ.