ಬೆಂಗಳೂರು:ನಾಯಂಡಹಳ್ಳಿ ಯಾರ್ಡ್ನಲ್ಲಿ ಥಿಕ್ ವೆಬ್ ಸ್ವಿಚ್‌ಗಳ ಕೆಲಸದ ಅಳವಡಿಕೆ ಕಾರ್ಯಕ್ಕಾಗಿ ಲೈನ್ ಬ್ಲಾಕ್ ತೆಗೆದುಕೊಂಡಿದ್ದು, ಹಲವು ರೈಲುಗಳ ಸೇವೆಯನ್ನು ರದ್ದುಪಡಿಸಲಾಗಿದೆ. ನವೆಂಬರ್ 2ರಿಂದ ಹಲವು ಮಾರ್ಗಗಳ ರೈಲು ಸೇವೆ ರದ್ದಾಗಲಿದೆ. ಜೊತೆಗೆ ಇತರೆ ಮಾರ್ಗಗಳಲ್ಲೂ ಬದಲಾವಣೆ ಇರಲಿದೆ.
ಮೈಸೂರಿನಿಂದ ಚಲಿಸುವ (ರೈಲು ಸಂಖ್ಯೆ 06560) ಮೈಸೂರು - ಕೆಎಸ್‌ಆರ್ ಬೆಂಗಳೂರು ಮೆಮು ರೈಲು ಸೇವೆಯು ನವೆಂಬರ್ 02ರಿಂದ ಮತ್ತು ನ.11ರವರೆಗೆ ರದ್ದುಗೊಂಡಿದೆ. ಹಾಗೆಯೇ ನ. 03ರಿಂದ 12ರವರೆಗೆ ಬೆಂಗಳೂರಿನಿಂದ ಚಲಿಸುವ ಕೆಎಸ್‌ಆರ್ ಬೆಂಗಳೂರು - ಮೈಸೂರು ಮೆಮು ರೈಲಿನ (ರೈಲು ಸಂಖ್ಯೆ 06559) ಸಂಚಾರವನ್ನೂ ಕೂಡ ರದ್ದುಗೊಳಿಸಲಾಗಿದೆ.
ರೈಲುಗಳ ಮಾರ್ಗ ಬದಲಾವಣೆ:
ಇಂದಿನಿಂದ ಅಕ್ಟೋಬರ್ 27ರವರೆಗೆ ದ್ವಿ-ಪಥ ಕಾಮಗಾರಿಯ ಕಾರ್ಯಾರಂಭಕ್ಕೆ ಸಂಬಂಧಪಟ್ಟಂತೆ ಭಟ್ಟನಗರ (ಪೂರ್ವ ರೈಲ್ವೆ) ಮತ್ತು ಬಾಲ್ಟಿಕುರಿ (ಆಗ್ನೇಯ ರೈಲ್ವೆ) ನಿಲ್ದಾಣದಲ್ಲಿ ಪೂರ್ವ- ಇಂಟರ್ಲಾಕಿಂಗ್ ಮತ್ತು ನಾನ್-ಇಂಟರಲಾಕಿಂಗ್ ಕೆಲಸದ ನಿಮಿತ್ತವಾಗಿ ರೈಲುಗಳ ಮಾರ್ಗವನ್ನು ಬದಲಾಯಿಸಲಾಗಿದೆ. ಈ ರೈಲುಗಳು ಹೌರಾ, ಅಂಡುಲ್, ಖರಗ್‌ಪುರದ ಮೂಲಕ ಚಲಿಸಲಿದೆ.
1. ಗುವಾಹಟಿದಿಂದ ಹೊರಡುವ ರೈಲು 02510 ಗುವಾಹಟಿ - ಬೆಂಗಳೂರು ಕಂಟೋನ್ಮೆಂಟ್ ಎಕ್ಸ್‌ಪ್ರೆಸ್ ವಿಶೇಷ ರೈಲು ಅಕ್ಟೋಬರ್ 24 (ನಾಳೆ), ಅ. 25 ಮತ್ತು 26ರಂದು ದನಕುಣಿ ನಿಲ್ದಾಣದಲ್ಲಿ ನಿಲುಗಡೆಯೊಂದಿಗೆ ಹೌರಾ, ಅಂಡುಲ್ ಮತ್ತು ಖರಗ್‌ಪುರ ಮಾರ್ಗವಾಗಿ ಚಲಿಸಲಿದೆ.