ಕರ್ನಾಟಕ

karnataka

ETV Bharat / state

BSY ಭೇಟಿ ಮಾಡಿದ ಬಿಜೆಪಿ ನಾಯಕರು: ರಾಜಕೀಯ ವಲಯದಲ್ಲಿ ಭಾರಿ ಚರ್ಚೆ - Bengaluru BSY residence

ಬಿ.ಎಸ್ ಯಡಿಯೂರಪ್ಪ ಕಾವೇರಿ ನಿವಾಸಕ್ಕೆ ಶಾಸಕ ಮುರುಗೇಶ್ ನಿರಾಣಿ ಭೇಟಿ ನೀಡಿದ್ದು, ರಾಜಕೀಯ ವಲಯದಲ್ಲಿ ಭಾರೀ ಕುತೂಹಲ ಮೂಡಿಸಿದೆ.

Bengaluru
ನಿರಾಣಿ- ಬಿಎಸ್​ವೈ ಭೇಟಿ

By

Published : Jul 27, 2021, 10:44 AM IST

Updated : Jul 27, 2021, 2:28 PM IST

ಬೆಂಗಳೂರು:ನನಗೆ ಮುಂದಿನ ಸಿಎಂ ಯಾರು ಆಗುತ್ತಾರೆ ಎಂಬ ಮಾಹಿತಿ ಇಲ್ಲ. ಸುಮ್ಮನೆ ಊಹಾಪೋಹಗಳನ್ನ ಸೃಷ್ಟಿ ಮಾಡಲು ಇಚ್ಛಿಸುವುದಿಲ್ಲ. ಪಕ್ಷದ ವರಿಷ್ಠರು ಈ ವಿಷಯದಲ್ಲಿ ನಿರ್ಧಾರ ಕೈಗೊಳ್ಳಲಿದ್ದಾರೆ ಎಂದು ಬಿಜೆಪಿ ನಾಯಕ ಗೋ ಮಧುಸೂಧನ್, ಸಿಎಂ ಭೇಟಿ ಬಳಿಕ ಹೇಳಿಕೆ ನೀಡಿದ್ದಾರೆ.

ಇನ್ನು ಶಾಸಕ ಮುರಗೇಶ್ ನಿರಾಣಿ ಇಂದು ಹಂಗಾಮಿ ಸಿಎಂ ಬಿ.ಎಸ್ ಯಡಿಯೂರಪ್ಪ ನಿವಾಸ ಕಾವೇರಿಗೆ ಭೇಟಿ ನೀಡಿದ್ದಾರೆ. ನಿನ್ನೆ ನಡೆದ ಬಿ.ಎಸ್ ಯಡಿಯೂರಪ್ಪ ರಾಜೀನಾಮೆ ಭಾಷಣದಲ್ಲಿ ನಿರಾಣಿ ಅನುಪಸ್ಥಿತಿ ಕಂಡು ಬಂದಿತ್ತು. ಈ ಹಿನ್ನಲೆಯಲ್ಲಿ ಇಂದು ಕಾವೇರಿಗೆ ಭೇಟಿ ನೀಡಿದ್ದಾರೆ. ಜತೆಗೆ ಲಿಂಗಾಯತ ಸಮುದಾಯದಲ್ಲಿ ಪರ್ಯಾಯ ನಾಯಕ ಎಂದು ಇವರನ್ನ ಬಿಂಬಿಸಲಾಗುತ್ತಿದ್ದು ಇಂದಿನ ಭೇಟಿ ಕುತೂಹಲ ಮೂಡಿಸುತ್ತಿದೆ.

ಕಾವೇರಿ ನಿವಾಸಕ್ಕೆ ಶಾಸಕ ಮುರಗೇಶ್ ನಿರಾಣಿ

ಗೋವುಗಳ ಜತೆ ಬಿಎಸ್​ವೈ:ರಾಜೀನಾಮೆ ನೀಡಿದ ಬಳಿಕ ಹಂಗಾಮಿ ಸಿಎಂ ಬಿಎಸ್​ವೈ ರಿಲ್ಯಾಕ್ಸ್ ಮೂಡ್​ನಲ್ಲಿದ್ದು, ಕಾವೇರಿಯಲ್ಲಿ ಗೋವುಗಳ ಜೊತೆ ಕಾಲ ಕಳೆಯುತ್ತಿದ್ದಾರೆ.

ಇಂಟಲಿಜೆನ್ಸ್ ಎಡಿಜಿಪಿ ದಯಾನಂದ್ ಹಾಗೂ ಹೊರಟ್ಟಿ ಬಿಎಸ್​ವೈ ಭೇಟಿ:ಇನ್ನು ಉಳಿದಂತೆ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ಬಿಎಸ್ ಯಡಿಯೂರಪ್ಪ ನಿವಾಸಕ್ಕೆ ಭೇಟಿ ನೀಡಿ ಉಭಯ ಕುಶಲೋಪರಿ ವಿಚಾರಿಸಿದ್ದರು. ಹಾಗೂ ಗುಪ್ತಚರ ಇಲಾಖೆ ಎಡಿಜಿಪಿ ದಯಾನಂದ್ಕೂಡ ಭೇಟಿ ನೀಡಿದ್ದರು.

Last Updated : Jul 27, 2021, 2:28 PM IST

ABOUT THE AUTHOR

...view details