ಬೆಂಗಳೂರು: ಭಾರತ ಲಾಕ್ ಡೌನ್ ಘೋಷಿಸಿ ಒಂದು ವಾರ ಕಳೆದ ಹಿನ್ನೆಲೆಯಲ್ಲಿ ರಾಜ್ಯಗಳ ಪರಿಸ್ಥಿತಿ ಬಗ್ಗೆ ಆಯಾ ರಾಜ್ಯಗಳ ಮುಖ್ಯಮಂತ್ರಿಗಳ ಜೊತೆ ಪ್ರಧಾನಿ ನರೇಂದ್ರ ಮೋದಿ ವೀಡಿಯೋ ಸಂವಾದ ನಡೆಸುತ್ತಿದ್ದಾರೆ.
ಪಿಎಂ ಜೊತೆ ವಿಡಿಯೋ ಸಂವಾದದಲ್ಲಿ ಬಿಎಸ್ವೈ ಭಾಗಿ: ಲಾಕ್ ಡೌನ್ ಸ್ಥಿತಿಗತಿ ಕುರಿತು ಮಾತುಕತೆ
ಲಾಕ್ಡೌನ್ ಪರಿಸ್ಥಿತಿ ಬಗ್ಗೆ ಆಯಾ ರಾಜ್ಯಗಳ ಮುಖ್ಯಮಂತ್ರಿಗಳ ಜೊತೆ ಪ್ರಧಾನಿ ನರೇಂದ್ರ ಮೋದಿ ವೀಡಿಯೋ ಸಂವಾದ ನಡೆಸುತ್ತಿದ್ದು, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವೀಡಿಯೋ ಸಂವಾದದಲ್ಲಿ ಭಾಗಿಯಾಗಿದ್ದಾರೆ.
meeting
ವಿಧಾನಸೌಧದ ಸಮಿತಿ ಕೊಠಡಿಯಿಂದ ಪ್ರಧಾನಿಗಳ ವೀಡಿಯೋ ಸಂವಾದದಲ್ಲಿ ಸಿಎಂ ಭಾಗಿಯಾಗಿದ್ದು, ಕೊರೊನಾ ನಿಯಂತ್ರಣಕ್ಕೆ ತೆಗೆದುಕೊಂಡಿರುವ ಕ್ರಮಗಳು, ಸದ್ಯದ ಪರಿಸ್ಥಿತಿಯ ಬಗ್ಗೆ ಪ್ರಧಾನಿ ಮೋದಿ ವಿವರಣೆ ಪಡೆದಿದ್ದಾರೆ. ಇನ್ನುಳಿದ 13 ದಿನಗಳ ಕಾಲ ಲಾಕ್ ಡೌನ್ ಯಾವ ರೀತಿ ಇರಬೇಕು ಎಂದು ಸಲಹೆ, ಸೂಚನೆ ನೀಡಿದ್ದಾರೆ.
ಪ್ರಧಾನಿಗಳ ಜೊತೆಗಿನ ವೀಡಿಯೋ ಕಾನ್ಫರೆನ್ಸ್ಗೂ ಮುನ್ನ ಸಿಎಂ ಯಡಿಯೂರಪ್ಪ ವಿಧಾನಸೌಧದಲ್ಲಿ ಕೊರೊನಾ ಟಾಸ್ಕ್ಫೋರ್ಸ್ ಟೀಂ ಮತ್ತು ಹಿರಿಯ ಅಧಿಕಾರಿಗಳ ಜೊತೆ ಸಭೆ ನಡೆಸಿದರು.