ಕರ್ನಾಟಕ

karnataka

ETV Bharat / state

ಆಗ ವೀರಶೈವ-ಲಿಂಗಾಯತ, ಈಗ ಆರ್ಯ-ದ್ರಾವಿಡ.. ಸಿದ್ದರಾಮಯ್ಯ ಒಡೆದಾಳುವ ರಾಜಕಾರಣಿ ಎಂದ ಪಿ ರಾಜೀವ್! - minister Rajiv P statement against siddaramaih

ಅಂಬೇಡ್ಕರ್‌ರವರ 'ಹೂ ಈಸ್ ಶೂದ್ರ' ಅನ್ನೋ ಪುಸ್ತಕದಲ್ಲಿ ಆರ್ಯ-ದ್ರಾವಿಡ ಎಂದು ಬರೆದಿಲ್ಲ. ಆರ್‌ಎಸ್‌ಎಸ್ ಶಾಖೆಯಲ್ಲಿ ಜಾತೀಯತೆ ಇಲ್ಲ. ಸಿದ್ದರಾಮಯ್ಯನವರು ಸತ್ಯ ತಿಳಿದುಕೊಳ್ಳಲು ಆರ್‌ಎಸ್‌ಎಸ್ ಶಾಖೆಗೆ ಹೋಗಬೇಕು ಎಂದರು. ಸಿದ್ದರಾಮಯ್ಯನವರು ಮುಖ್ಯಮಂತ್ರಿ ಕುರ್ಚಿ ವ್ಯಾಮೋಹದಿಂದ ಒಡೆದು ಆಳುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಬಿಜೆಪಿ ಶಾಸಕ ಪಿ ರಾಜೀವ್ ಆರೋಪಿಸಿದರು..

mla-rajiv-p-allegation-against-siddaramaiah
ಆಗ ವೀರಶೈವ ಲಿಂಗಾಯತ, ಈಗ ಆರ್ಯ ದ್ರಾವಿಡ: ಸಿದ್ದರಾಮಯ್ಯ ಒಡೆದಾಳುವ ರಾಜಕಾರಣಿಯೆಂದ ರಾಜೀವ್..!

By

Published : May 30, 2022, 12:51 PM IST

ಬೆಂಗಳೂರು :ಅಧಿಕಾರದಲ್ಲಿದ್ದಾಗ ವೀರಶೈವ-ಲಿಂಗಾಯತ ಎಂದು ಸಮಾಜ ಒಡೆಯೋಕೆ ಹೋಗಿ ಕೈಸುಟ್ಟು ಕೊಂಡಿದ್ದೀರಾ. ಈಗ ಆರ್ಯ- ದ್ರಾವಿಡ ಎಂದು ಒಡೆದು ಮತ್ತೊಮ್ಮೆ ಕೈಸುಟ್ಟುಕೊಳ್ಳುತ್ತಿದ್ದಿರಾ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯಗೆ ಕುಡುಚಿ ಶಾಸಕ ಪಿ ರಾಜೀವ್ ತಿರುಗೇಟು ನೀಡಿದ್ದಾರೆ.

ಆರ್‌ಟಿ ನಗರದಲ್ಲಿರುವ ಸಿಎಂ ಖಾಸಗಿ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆರ್‌ಎಸ್‌ಎಸ್‌ನವರು ಭಾರತೀಯರಲ್ಲ ಎಂದು ಹೇಳಿ ಸಿದ್ದರಾಮಯ್ಯ ಆರ್‌ಎಸ್‌ಎಸ್ ಸ್ವಯಂಸೇವಕರು ಮತ್ತು ಕಾರ್ಯಕರ್ತರ ಭಾವನೆಗೆ ನೋವು ತಂದಿದ್ದಾರೆ. ಕಾಂಗ್ರೆಸ್ ಪಕ್ಷ ಶುರು ಮಾಡಿದ್ದು ಬ್ರಿಟಿಷ್ ಅಧಿಕಾರಿ ಎ ಓ ಹ್ಯೂಮ್. ಆರ್‌ಎಸ್‌ಎಸ್ ಹುಟ್ಟಿದ್ದು ಈ ಮಣ್ಣಿನಲ್ಲಿ. ಸಿದ್ದರಾಮಯ್ಯ ನನ್ನ ಹೆಸರಲ್ಲೇ ರಾಮ ಇದ್ದಾನೆ ಎಂದು ಆಗಾಗ ಹೇಳುತ್ತಾರೆ. ಆದರೆ, ಅವರು ಅವಕಾಶಕ್ಕೆ ತಕ್ಕಂತೆ ಮಾತನಾಡುವ ರಾಜಕಾರಣಿ ಎಂದು ವಾಗ್ದಾಳಿ ನಡೆಸಿದರು.

ಅಂಬೇಡ್ಕರ್‌ರವರ 'ಹೂ ಈಸ್ ಶೂದ್ರ' ಅನ್ನೋ ಪುಸ್ತಕದಲ್ಲಿ ಆರ್ಯ-ದ್ರಾವಿಡ ಎಂದು ಬರೆದಿಲ್ಲ. ಆರ್‌ಎಸ್‌ಎಸ್ ಶಾಖೆಯಲ್ಲಿ ಜಾತೀಯತೆ ಇಲ್ಲ. ಸಿದ್ದರಾಮಯ್ಯನವರು ಸತ್ಯ ತಿಳಿದುಕೊಳ್ಳಲು ಆರ್‌ಎಸ್‌ಎಸ್ ಶಾಖೆಗೆ ಹೋಗಬೇಕು ಎಂದರು. ಸಿದ್ದರಾಮಯ್ಯನವರು ಮುಖ್ಯಮಂತ್ರಿ ಕುರ್ಚಿ ವ್ಯಾಮೋಹದಿಂದ ಒಡೆದು ಆಳುವ ಪ್ರಯತ್ನ ಮಾಡುತ್ತಿದ್ದಾರೆ.

ಸಿದ್ದರಾಮಯ್ಯನವರು ಸಿಎಂ ಕುರ್ಚಿ ಆಸೆಯನ್ನು ಬಿಡಬೇಕು. ವಯಸ್ಸಿನಲ್ಲಿ ನಾನು ಚಿಕ್ಕವನಾದರೂ ಸಿದ್ದರಾಮಯ್ಯನವರಿಗೆ ಈ ಮಾತು ಹೇಳುತ್ತಿದ್ದೇನೆ. ಆರ್‌ಎಸ್‌ಎಸ್ ಸಂಘಟನೆ, ದೇಶ ದ್ರೋಹಿ ಸಂಘಟನೆ ಎಂದು ಕಾಂಗ್ರೆಸ್ ಟ್ವೀಟ್ ಮಾಡಿದ ವಿಚಾರದ ಕುರಿತು ಪ್ರತಿಕ್ರಿಯೆ ನೀಡಿದ ರಾಜೀವ್, ಉಗ್ರಗಾಮಿಗಳಿಗೆ ಪೊಲೀಸರು ಸಮಾಜ ರಕ್ಷಕರಾಗಿ ಕಾಣ್ತಾರಾ? ಎಂದು ಕಾಂಗ್ರೆಸ್‌ಗೆ ತಿರುಗೇಟು ನೀಡಿದರು.

ಓದಿ :ಬೆಂಗಳೂರಲ್ಲಿ ಮತ್ತೊಂದು ಅಮಾನವೀಯ ಘಟನೆ.. ಮಲಗಿದ್ದ ನಾಯಿ ಮೇಲೆ ಕಾರು ಹತ್ತಿಸಿ ಕೊಂದ ಕಿಡಿಗೇಡಿ..

For All Latest Updates

TAGGED:

ABOUT THE AUTHOR

...view details