ಬೆಂಗಳೂರು: ಕುಮಾರಸ್ವಾಮಿ, ಸಿದ್ದರಾಮಯ್ಯ ಈಗಲಾದರೂ ಬೆಂಗಳೂರು ಸುತ್ತಾಡಲಿ. ಕುಮಾರಸ್ವಾಮಿ ನಡೆದಷ್ಟೂ ಒಳ್ಳೆಯದು ಎಂದು ಮಾಜಿ ಮುಖ್ಯಮಂತ್ರಿಗಳಾದ ಕುಮಾರಸ್ವಾಮಿ ಹಾಗೂ ಸಿದ್ದರಾಮಯ್ಯ ಅವರ ನಗರ ಪ್ರದಕ್ಷಿಣೆ ವಿಚಾರಕ್ಕೆ ಸಚಿವ ವಿ.ಸೋಮಣ್ಣ ವ್ಯಂಗ್ಯವಾಡಿದ್ದಾರೆ.
ವಿಧಾನಸೌಧಲ್ಲಿ ಮಾತನಾಡಿದ ಅವರು, ಕುಮಾರಸ್ವಾಮಿ ಅವರಿಗೆ ಹೀಗಾದರೂ ಆರೋಗ್ಯ ಸುಧಾರಿಸಲಿ. ಅವರಿಗೆ ಜನರ ಭಾವನೆ ಏನು ಎನ್ನೋದು ಅರ್ಥವಾಗಲಿ. ಅವರು ಎರಡು ಬಾರಿ ಮುಖ್ಯಮಂತ್ರಿ ಆದವರು. ಕುಮಾರಸ್ವಾಮಿ ಓಡಾಡಿ ಇನ್ನಷ್ಟು ಆರೋಗ್ಯ ಸರಿ ಮಾಡಿಕೊಳ್ಳಲಿ, ನಾವು ಬೇಡ ಅನ್ನೋದಿಲ್ಲ. ಅವರು ಕೊಡುವ ಅಮೂಲ್ಯ ಸಲಹೆಗಳನ್ನು ಸ್ವೀಕಾರ ಮಾಡುವುದಕ್ಕೆ ತಯಾರಿದ್ದೇವೆ. ಎಲ್ಲವನ್ನೂ ಸರಿಪಡಿಸಿದ್ದೇವೆ ಅಂತ ದುರಹಂಕಾರದಿಂದ ಹೇಳಲ್ಲ. ಕುಮಾರಸ್ವಾಮಿ ಮತ್ತು ಸಿದ್ದರಾಮಯ್ಯ ಕೊಡುವ ಸಲಹೆಗಳನ್ನೂ ನಾವು ಸ್ವೀಕಾರ ಮಾಡ್ತೀವಿ ಎಂದರು.