ಕರ್ನಾಟಕ

karnataka

ETV Bharat / state

ದ. ಆಫ್ರಿಕಾದಿಂದ ಬಂದ ಕೆಲ ಪ್ರಯಾಣಿಕರು ನಾಪತ್ತೆ : ಸಚಿವ ಸುಧಾಕರ್

ಒಟ್ಟು 57 ಪ್ರಯಾಣಿಕರು ದ. ಆಫ್ರಿಕಾದಿಂದ ಆಗಮಿಸಿದ್ದರು. 10 ಪ್ರಯಾಣಿಕರ ವಿಳಾಸ ಪತ್ತೆಯಾಗಿಲ್ಲ. ಹಾಗೇ ತಮ್ಮ ಮೊಬೈಲ್ ಸ್ವಿಚ್​​ ಆಫ್ ಮಾಡಿಕೊಂಡಿದ್ದಾರೆ. ಪೊಲೀಸರು ಸಮರ್ಥರಿದ್ದು, ಆದಷ್ಟು ಬೇಗ ಅವರನ್ನು ಪತ್ತೆ ಹಚ್ಚಲಿದ್ದಾರೆ ಎಂದು ಸುಧಾಕರ್ ತಿಳಿಸಿದ್ದಾರೆ..

By

Published : Dec 3, 2021, 4:31 PM IST

Updated : Dec 3, 2021, 5:08 PM IST

ಸಚಿವ ಸುಧಾಕರ್
ಸಚಿವ ಸುಧಾಕರ್

ಬೆಂಗಳೂರು :ರಾಜ್ಯದಲ್ಲಿ Omicron ಭೀತಿ ಬೆನ್ನಲ್ಲೇ ದಕ್ಷಿಣ ಆಫ್ರಿಕಾದಿಂದ ಬಂದ ಕೆಲ ಪ್ರಯಾಣಿಕರು ನಾಪತ್ತೆಯಾಗಿದ್ದಾರೆ. 57 ಪ್ರಯಾಣಿಕರು ದ. ಆಫ್ರಿಕಾದಿಂದ ಆಗಮಿಸಿದ್ದರು. ಈ ಕುರಿತು ಪ್ರತಿಕ್ರಿಯಿಸಿದ ಸಚಿವ ಸುಧಾಕರ್, ನಾಪತ್ತೆಯಾದವರ ಬಗ್ಗೆ ಟ್ರೇಸಿಂಗ್ ಕಾರ್ಯ ನಡೆಯುತ್ತಿದೆ ಎಂದರು.

ಸಚಿವ ಸುಧಾಕರ್ ಪ್ರತಿಕ್ರಿಯೆ

ಒಟ್ಟು 10 ಪ್ರಯಾಣಿಕರ ವಿಳಾಸ ಪತ್ತೆಯಾಗಿಲ್ಲ. ಹಾಗೇ ತಮ್ಮ ಮೊಬೈಲ್ ಸ್ವಿಚ್​​ ಆಫ್ ಮಾಡಿಕೊಂಡಿದ್ದಾರೆ. ಪೊಲೀಸರು ಸಮರ್ಥರಿದ್ದು, ಆದಷ್ಟು ಬೇಗ ಅವರನ್ನು ಪತ್ತೆ ಹಚ್ಚಲಿದ್ದಾರೆ ಎಂಬ ವಿಶ್ವಾಸ ನನಗಿದೆ ಎಂದರು.

ಈಗಾಗಲೇ ಮೊದಲ ಹಾಗೂ ಎರಡನೇ ಅಲೆಯ ಸಂದರ್ಭದಲ್ಲಿ ಇಂತಹ ಪ್ರಕರಣಗಳ ಅನುಭವ ಇದೆ. ಇವರನ್ನೂ ಸಹ ಆದಷ್ಟು ಬೇಗ ಪತ್ತೆ ಮಾಡಲಾಗುವುದು. ಇನ್ನು ಸೋಂಕಿತರು ಬೇಜವಾಬ್ದಾರಿ ತೋರಬಾರದು.

ತಮಗೆ ಬಂದ ಸೋಂಕು ಹಬ್ಬಿಸಬಾರದು, ಯಾರು ಕೂಡ ಮೊಬೈಲ್ ಸ್ವಿಚ್​​ ಆಫ್ ಮಾಡಿಕೊಳ್ಳಬಾರದು. ಕಾನೂನಿನಲ್ಲಿ ಮಾರ್ಪಾಡಿನ ಅಗತ್ಯವಿದ್ದರೆ, ಸಿಎಂ ಜತೆ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುತ್ತೆ ಎಂದು ಡಾ.ಸುಧಾಕರ್ ಹೇಳಿದರು.

ಇದನ್ನೂ ಓದಿ : ಸಂಭಾವ್ಯ ಮೂರನೇ ಅಲೆ ಹಾಗೂ ಒಮಿಕ್ರಾನ್ ನಿಯಂತ್ರಣಕ್ಕೆ ಸಜ್ಜು : ಸಚಿವ ಸುಧಾಕರ್

Last Updated : Dec 3, 2021, 5:08 PM IST

ABOUT THE AUTHOR

...view details