ಬೆಂಗಳೂರು :ಯಶವಂತಪುರ ಕ್ಷೇತ್ರದ ಜನ ನನ್ನನ್ನು ಸಚಿವನನ್ನಾಗಿ ಮಾಡಿದ್ದಾರೆ. ನಾನ್ಯಾಕೆ ಕ್ಷೇತ್ರ ಬಿಟ್ಟುಕೊಡಬೇಕು ಎಂದು ಸಚಿವ ಎಸ್.ಟಿ.ಸೋಮಶೇಖರ್ ಪ್ರಶ್ನಿಸಿದ್ದಾರೆ.
ವಿಕಾಸಸೌಧದಲ್ಲಿ ಮಾತನಾಡಿದ ಅವರು, ಸಚಿವರು ಕ್ಷೇತ್ರ ಬಿಟ್ಟು ಕೊಡಬೇಕೆಂಬ ವಿಚಾರವಾಗಿ ಪ್ರತಿಕ್ರಿಯಿಸಿ, ಸುಮಾರು ವರ್ಷದಿಂದ ಕಷ್ಟ ಪಟ್ಟಿದ್ದೇನೆ. ಪಕ್ಕದ ಕ್ಷೇತ್ರಕ್ಕೆ ಹೋಗು ಎಂದರೆ ಆಗುತ್ತಾ?. ನನಗೆ ಇನ್ನೊಂದು ಕ್ಷೇತ್ರ ಗೆಲ್ಲಿಸುವ ಸಾಮರ್ಥ್ಯ ಇಲ್ಲ. ನಾನು ಯಶವಂತಪುರಕ್ಕಷ್ಟೇ ಸೀಮಿತ ಎಂದು ಹೇಳಿದರು.
ಯಶವಂತಪುರ ಕ್ಷೇತ್ರದ ಜನ ನನ್ನನ್ನು ಸಚಿವನನ್ನಾಗಿ ಮಾಡಿದ್ದು, ನಾನ್ಯಾಕೆ ಕ್ಷೇತ್ರ ಬಿಟ್ಟುಕೊಡಬೇಕು: ಸಚಿವ ಎಸ್.ಟಿ.ಸೋಮಶೇಖರ್ "ಬೇರೆಯವರಂತೆ ನಾನು ಸ್ಟೇಟ್ ಫಿಗರ್ ಅಲ್ಲ. ಬೇರೆ ಕ್ಷೇತ್ರ ಗೆಲ್ಲಿಸಿಕೊಂಡು ಬರುವ ಸಾಮರ್ಥ್ಯ ನನಗೆ ಇಲ್ಲ. ಕ್ಷೇತ್ರದ ಜನ ನನ್ನನ್ನು ಶಾಸಕನನ್ನಾಗಿ, ಸಚಿವನನ್ನಾಗಿ ಮಾಡಿದ್ದಾರೆ. ನಾನ್ಯಾಕೆ ಯಶವಂತಪುರ ಕ್ಷೇತ್ರ ಬಿಟ್ಟುಕೊಡಲಿ" ಎಂದು ಹೇಳಿದರು.
ಒಕ್ಕಲಿಗ ಸಮುದಾಯ ಬೆಂಬಲಿಸಬೇಕೆಂಬ ಡಿಕೆಶಿ ಹೇಳಿಕೆಗೆ ಪ್ರತಿಕ್ರಿಯಿಸಿದ ಸಚಿವ, ಅವರು ಪಕ್ಷದ ಕಾರ್ಯಕ್ರಮದಲ್ಲಿ ಹೇಳಿಲ್ಲ. ಯಾವುದೋ ಖಾಸಗಿ ಕಾರ್ಯಕ್ರಮದಲ್ಲಿ ಹೇಳಿದ್ದಾರೆ. ಯಾವುದೇ ಸಮುದಾಯ ಪಕ್ಷಕ್ಕೆ ಸೀಮಿತವಲ್ಲ. ಡಿಕೆಶಿ ಒಕ್ಕಲಿಗ ನಾಯಕರೇ. ಅವರು ಅಧ್ಯಕ್ಷರಾಗುತ್ತಲೇ ಸಮುದಾಯ ಬೆಂಬಲಿಸಬೇಕೇ?. ಶೇ 100ರಷ್ಟು ಬಿಜೆಪಿ ಅಧಿಕಾರಕ್ಕೆ ಬರುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಎಪಿಎಂಸಿ ಮೃತ ಕಾರ್ಮಿಕರಿಗೆ ಪರಿಹಾರ: ಎಪಿಎಂಸಿ ಮೃತ ಕಾರ್ಮಿಕರಿಗೆ ತಲಾ 30 ಸಾವಿರ ಪರಿಹಾರದ ಚೆಕ್ ವಿತರಣೆ ಮಾಡಲಾಯಿತು. ಒಟ್ಟು 169 ಮಂದಿ ಫಲಾನುಭವಿಗಳಿಗೆ ಪರಿಹಾರ ನೀಡಲಾಗುತ್ತಿದ್ದು, ಸಾಂಕೇತಿಕವಾಗಿ 10 ಮಂದಿಗೆ ಪರಿಹಾರ ವಿತರಣೆ ಮಾಡಲಾಯಿತು. 2019-20ನೇ ಸಾಲಿನಲ್ಲಿ ಮೃತ ಪಟ್ಟವರಿಗೆ ಸಾಂಕೇತಿಕವಾಗಿ 10 ಮಂದಿಗೆ ಚೆಕ್ ವಿತರಿಸಿದ್ದೇವೆ ಎಂದು ಇದೇ ವೇಳೆ ಹೇಳಿದರು.
ಎಪಿಎಂಸಿಗಳಿಗೆ ಚುನಾವಣೆ ಮಾಡುತ್ತಿದ್ದೇವೆ. ಎಲ್ಲಿ ಅಧಿಕಾರಾವಧಿ ಮುಗಿಯುತ್ತದೆ ಅಲ್ಲಿ ಚುನಾವಣೆ ಮಾಡಲಾಗುತ್ತದೆ. ಚಾಮರಾಜನಗರಕ್ಕೆ ಈಗ ಚುನಾವಣೆ ಮಾಡುತ್ತೇವೆ. 6 ಎಪಿಎಂಸಿಗಳಿಗೆ ಚುನಾವಣೆ ಮಾಡಬೇಕಿದೆ. 150 ಎಪಿಎಂಸಿಗಳಿಗೆ ಚುನಾವಣೆ ಇಲ್ಲ. ಬೋರ್ಡ್ ಇರುವ ಎಪಿಎಂಸಿಗಳಿಗಷ್ಟೇ ಚುನಾವಣೆ ಮಾಡುತ್ತೇವೆ.ರಾಜ್ಯದಲ್ಲಿ ಕೇವಲ 6 ಎಪಿಎಂಸಿಗಳಲ್ಲಿ ಬೋರ್ಡ್ ಇವೆ ಎಂದು ಹೇಳಿದರು.
ಓದಿ :ಸಾರಿಗೆ ನಿಗಮ ಪುನಶ್ಚೇತನ.. ಸಿಎಂಗೆ 131 ಪುಟಗಳ ಅಂತಿಮ ವರದಿ ಸಲ್ಲಿಸಿದ ಸಮಿತಿ