ಕರ್ನಾಟಕ

karnataka

ETV Bharat / state

ಪ್ರಧಾನ ಮಂತ್ರಿ ಮಾತುಕತೆಗೆ ಸಿದ್ಧರಿದ್ದಾರೆ, ರೈತರು ಆ್ಯಂಟಿ ನ್ಯಾಷನಲಿಸ್ಟ್ ಜೊತೆ ಹೋಗಬೇಡಿ: ಸಚಿವ ಸದಾನಂದ ಗೌಡ

ಲೋಕಸಭೆಯಲ್ಲಿ ಕಾಯ್ದೆಗಳ ಬಗ್ಗೆ ಚರ್ಚೆ ನಡೆಸೋಣ ಪ್ರಧಾನ ಮಂತ್ರಿ ಮತ್ತು ಕೃಷಿ ಮಂತ್ರಿಗಳು ಸಹ ಮಾತುಕತೆಗೆ ಸಿದ್ಧರಿದ್ದಾರೆ, ರೈತರು ಆ್ಯಂಟಿ ನ್ಯಾಷನಲಿಸ್ಟ್ ಜೊತೆ ಹೋಗಬೇಡಿ ಎಂದು ಸಚಿವ ಸದಾನಂದ ಗೌಡ ಹೇಳಿದ್ದಾರೆ.

Sadananda Gowda
ಸದಾನಂದ ಗೌಡ

By

Published : Jan 30, 2021, 6:00 PM IST

ದೇವನಹಳ್ಳಿ:ರೈತರೊಂದಿಗೆ ಮಾತುಕತೆ ನಡೆಸಲು ಕೇಂದ್ರ ಸರ್ಕಾರ ಸಿದ್ಧವಿದೆ. ಪ್ರಧಾನ ಮಂತ್ರಿಗಳು ರೈತರೊಂದಿಗೆ ಮುಕ್ತವಾಗಿ ಚರ್ಚಿಸಲು ಸಿದ್ಧರಿದ್ದು, ರೈತರು ಆ್ಯಂಟಿ ನ್ಯಾಷನಲಿಸ್ಟ್ ಜೊತೆ ಹೋಗಬೇಡಿ ಎಂದು ಕೇಂದ್ರ ಸಚಿವ ಡಿ. ವಿ. ಸದಾನಂದ ಗೌಡ ಹೇಳಿದರು.

ದೇವನಹಳ್ಳಿಯಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಅವರು, ದೆಹಲಿಯಲ್ಲಿ ನಡೆದ ರೈತರ ಟ್ರಾಕ್ಟರ್​ ಪೆರೇಡ್​ನಲ್ಲಿ ಬಿಜೆಪಿಯ ಗೂಂಡಾಗಳಿಂದ ಗಲಾಟೆಯಾಗಿದೆ ಎಂದು ಕೋಡಿಹಳ್ಳಿ ಚಂದ್ರಶೇಖರ್​ ಹೇಳಿಕೆಗೆ ಪ್ರತಿಕ್ರಿಯಿಸಿ, ಮಾತುಕತೆ ನಡೆಸಲು ರೈತರಿಗೆ ಕೇಂದ್ರ ಸರ್ಕಾರ ಆಹ್ವಾನಿಸುತ್ತಿದೆ, ಸುಪ್ರೀಂಕೋರ್ಟ್​ ಸಹ ಕೃಷಿ ಕಾಯ್ದೆಗಳಿಗೆ ತಡೆಯಾಜ್ಞೆ ನೀಡಿದ್ದು, ಮಾತುಕತೆಯ ಮೂಲಕ ಸಮಸ್ಯೆಗಳನ್ನು ಬಗೆಹರಿಸುವುದರ ಬಗ್ಗೆ ರೈತರಿಗೆ ಮುಕ್ತ ಆಹ್ವಾನ ನೀಡಿದೆ ಎಂದರು.

ಕೇಂದ್ರ ಸಚಿವ ಸದಾನಂದ ಗೌಡ

ರೈತರ ಹೋರಾಟದ ಹಿಂದೆ ಯಾರೋ ರಾಜಕೀಯ ಮಾಡುತ್ತಿರುವುದು ಬೇಸರ ತಂದಿದೆ. ರೈತರಿಗೆ ಮತ್ತೆ ವಿನಂತಿ ಮಾಡುವೆ ಲೋಕಸಭೆಯಲ್ಲಿ ಕಾಯ್ದೆಗಳ ಬಗ್ಗೆ ಚರ್ಚೆ ನಡೆಸೋಣ ಪ್ರಧಾನ ಮಂತ್ರಿ ಮತ್ತು ಕೃಷಿ ಮಂತ್ರಿಗಳು ಸಹ ಮಾತುಕತೆಗೆ ಸಿದ್ಧರಿದ್ದಾರೆ, ರೈತರು ಆ್ಯಂಟಿ ನ್ಯಾಷನಲಿಸ್ಟ್ ಜೊತೆ ಹೋಗಬೇಡಿ ಎಂದರು.

ಗೋವಾ ಮುಖ್ಯಮಂತ್ರಿ ಮಹದಾಯಿ ನಮ್ಮ ತಾಯಿ ಇದ್ದಂತೆ ಯಾವ ಕಾರಣಕ್ಕೂ ಕರ್ನಾಟಕಕ್ಕೆ ನೀರು ಬಿಡುವುದಿಲ್ಲವೆಂದು ವಿಧಾನಸಭೆಯಲ್ಲಿ ಹೇಳಿದ್ರು, ಇದಕ್ಕೆ ಪ್ರತಿಕ್ರಿಯಿಸಿದ ಅವರು, ರಾಜ್ಯಗಳಲ್ಲಿ ರಾಜಕೀಯ ಲಾಭಕ್ಕಾಗಿ ನಾಯಕರು ಹೇಳಿಕೆ ಕೊಡುತ್ತಾರೆ, ನಮ್ಮ ಕೆಲಸಗಳು ಶೇಕಡಾ 75ರಷ್ಟು ಮುಗಿದಿದೆ. ನಾವು ಕುಡಿಯಲು ನೀರು ಕೇಳಿರುವುದು, ಕುಡಿಯುವ ನೀರಿಗೆ ಯಾರು ತೊಂದರೆ ಮಾಡಬಾರದೆಂದು ಸುಪ್ರೀಂಕೋರ್ಟ್ ತೀರ್ಪು ಮತ್ತು ವಾಟರ್ ಟ್ರಿಬ್ಯೂನಲ್ ತೀರ್ಪು ನೀಡಿವೆ ಆದ್ದರಿಂದ ಇಂತಹ ಹೇಳಿಕೆ ನೀಡುವುದು ಸರಿ ಅಲ್ಲ ಎಂದರು.

ABOUT THE AUTHOR

...view details