ಕರ್ನಾಟಕ

karnataka

ETV Bharat / state

ಬ್ರಹ್ಮ ಬಂದಿದ್ರೂ ಇಂಥ ಬಜೆಟ್ ಮಂಡನೆ ಮಾಡಲಾಗುತ್ತಿರಲಿಲ್ಲ: ಆರ್. ಅಶೋಕ್​

ಸಿಎಂ ಯಡಿಯೂರಪ್ಪ ಕಷ್ಟ ಕಾಲದಲ್ಲೂ ನಯಾ ಪೈಸೆ ತೆರಿಗೆ ಹಾಕದೆ ಉತ್ತಮ ಬಜೆಟ್ ಮಂಡಿಸಿದ್ದಾರೆ ಎಂದು ಸಚಿವ ಆರ್​. ಅಶೋಕ್​ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Minister R .Ashok  about State budget
ರಾಜ್ಯ ಬಜೆಟ್ ಬಗ್ಗೆ ಸಚಿವ ಅಶೋಕ್ ಮಾತು

By

Published : Mar 8, 2021, 4:41 PM IST

ಬೆಂಗಳೂರು: ಕೊರೊನಾ ಸಂಕಷ್ಟ ಕಾಲದಲ್ಲಿ ಸಿಎಂ ಯಡಿಯೂರಪ್ಪ ಬಜೆಟ್ ಮಂಡನೆ ಮಾಡಿದ್ದಾರೆ. ಬ್ರಹ್ಮ ಬಂದಿದ್ರೂ ಈ ತರ ಬಜೆಟ್ ಮಂಡನೆ ಮಾಡಲಾಗುತ್ತಿರಲಿಲ್ಲ ಎಂದು ಬಜೆಟ್​ ಬಗ್ಗೆ ಆರ್. ಅಶೋಕ್ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ಬೆಂಗಳೂರಿಗೆ ಹೆಚ್ಚುವರಿ ನೀರು ತರಲು ಶ್ರಮ ವಹಿಸಿದ್ದಾರೆ, ಮೇಕೆದಾಟು, ಎತ್ತಿನಹೊಳೆ ಯೋಜನೆಗಳಿಗೆ ಹೆಚ್ಚು ಆದ್ಯತೆ ನೀಡಿದ್ದಾರೆ. ಬೆಂಗಳೂರಿಗೆ ಮೆಟ್ರೋ ಯೋಜನೆ ಕಲ್ಪಿಸಲಾಗುತ್ತಿದೆ. ಒಕ್ಕಲಿಗ ಸಮುದಾಯಕ್ಕೆ 500 ಕೋಟಿ, ಎಸ್​ಟಿ, ಎಸ್​ಟಿ ಮಕ್ಕಳ ಹಾಸ್ಟೆಲ್ ನಿರ್ಮಾಣ, ಹೊರ ವರ್ತುಲ ರಸ್ತೆ ನಿರ್ಮಾಣಕ್ಕೆ ಅನುಮೋದನೆ, ಬಡವರು ಖರೀದಿ ಮಾಡುವ ಮನೆಗಳಿಗೆ ಟ್ಯಾಕ್ಸ್ ಮೂರು ಪರ್ಸೆಂಟಿಗೆ ಕಡಿತ ಇದರಿಂದ ನಗರದ ಹೊರಗೆ ಫ್ಲಾಟ್ ಖರೀದಿಗೆ ಅವಕಾಶವಾಗಲಿದೆ ಎಂದರು.

ಇನ್ನು ಕಾಂಗ್ರೆಸ್ ಸದಸ್ಯರು ಸದನದಿಂದ ಹೊರನಡೆದಿರುವ ಬಗ್ಗೆ ಮಾತನಾಡಿದ ಅವರು, ಕಾಂಗ್ರೆಸ್​ನವರಿಗೆ ಕೇಂದ್ರದಲ್ಲಿ ಮೋದಿ ಎದುರು ಹಾಕಿಕೊಳ್ಳಲು ಸಾಧ್ಯವಿಲ್ಲ. ಹೀಗಾಗಿ ಜನ ವಿರೋಧಿ ಎನ್ನುವ ಹಾಗೆ ಬಿಂಬಿಸುತ್ತಿದ್ದಾರೆ. ಹೀಗಾಗಿ ಬಿಎಸ್ ಯಡಿಯೂರಪ್ಪ ವಿರುದ್ಧ ನಿಂತಿದ್ದು, ವಿಪಕ್ಷವಾಗಿ ಕಾಂಗ್ರೆಸ್ ಸೋತಿದೆ ಎಂದರು.

ABOUT THE AUTHOR

...view details