ಕರ್ನಾಟಕ

karnataka

ETV Bharat / state

ನಾಳೆ ಸಾರಿಗೆ ನಿಗಮದಿಂದ ಕಾರ್ಗೋ ಸೇವೆಗೆ ಸಿಎಂ ಚಾಲನೆ: ಸವದಿ

ನೆರೆ ರಾಜ್ಯಗಳಾದ ಮಹಾರಾಷ್ಟ್ರ, ತಮಿಳುನಾಡು, ಆಂಧ್ರ,‌ ತೆಲಂಗಾಣ ಮತ್ತು ಗೋವಾಗೆ ಸಹ ಈ ಸೌಲಭ್ಯ ಸಿಗಲಿದೆ. ಕೆಎಸ್ಆರ್​​​ಟಿಸಿ 35, ಎನ್​​​​​​​ಡಬ್ಲ್ಯೂಎಸ್ಆರ್​​ಟಿಸಿ ನಿಗಮದಿಂದ 26, ಎನ್​​ಇಕೆಎಸ್ಆರ್​​​ಟಿಸಿ 27, ಅಂತರ್​​​ ರಾಜ್ಯ 21 ಬಸ್ ನಿಲ್ದಾಗಳಲ್ಲಿ ಪ್ರಥಮ ಹಂತದ ಲಾಜಿಸ್ಟಿಕ್ ಕಾರ್ಯನಿರ್ವಹಿಸಲಿದೆ.

minister-laxman-savadi
ಸಚಿವ ಸವದಿ

By

Published : Feb 25, 2021, 6:40 PM IST

ಬೆಂಗಳೂರು: ನಾಳೆಯಿಂದ 'ನಮ್ಮ ಕಾರ್ಗೋ' ಸೇವೆಯನ್ನು ಸಾರಿಗೆ ಇಲಾಖೆ ಜಾರಿಗೆ ತರಲಿದ್ದು, ಸಾರಿಗೆ ನಿಗಮಗಳ ನಷ್ಟ ಭರಿಸಲು ಇದು ಸಹಕಾರಿಯಾಗಲಿದೆ ಎಂದು ಡಿಸಿಎಂ ಹಾಗೂ ಸಾರಿಗೆ ಸಚಿವ ಲಕ್ಷ್ಮಣ ಸವದಿ ತಿಳಿಸಿದರು.

ಡಿಸಿಎಂ ಲಕ್ಷ್ಮಣ ಸವದಿ

ಓದಿ: ಜಲ ವಿವಾದಗಳ ಶೀಘ್ರ ಇತ್ಯರ್ಥ; ಉನ್ನತ ಮಟ್ಟದ ಸಭೆ ಕರೆದ ಸಚಿವ ರಮೇಶ್ ಜಾರಕಿಹೊಳಿ‌

ವಿಕಾಸಸೌಧದಲ್ಲಿ ಮಾತನಾಡಿದ ಅವರು, ಕಾರ್ಗೋ ಸೇವೆಗೆ ಸಿಎಂ ನಾಳೆ ವಿಧಾನಸೌಧದ ಮುಂಭಾಗ ಚಾಲನೆ ನೀಡಲಿದ್ದಾರೆ. ಬಿಎಂಟಿಸಿ ಹೊರತುಪಡಿಸಿ, ಕೆಎಸ್ಆರ್​​ಟಿಸಿ, ಎನ್​​​ಡಬ್ಲ್ಯೂಎಸ್ಆರ್​​ಟಿಸಿ, ಎನ್​​​ಇಕೆಎಸ್ಆರ್​​​ಟಿಸಿ ಸಂಸ್ಥೆಗಳಲ್ಲಿ ಕಾರ್ಗೊ-ಪಾರ್ಸಲ್ ಸೇವೆ ಪ್ರಾರಂಭಿಸಲಿದ್ದೇವೆ. ಒಟ್ಟು 109 ಬಸ್ ನಿಲ್ದಾಣಗಳಲ್ಲಿ ಈ ಸೌಲಭ್ಯ ಲಭ್ಯವಾಗಲಿದೆ ಎಂದು ವಿವರಿಸಿದರು.

ನೆರೆ ರಾಜ್ಯಗಳಾದ ಮಹಾರಾಷ್ಟ್ರ, ತಮಿಳುನಾಡು, ಆಂಧ್ರ,‌ ತೆಲಂಗಾಣ ಮತ್ತು ಗೋವಾಗೆ ಸಹ ಈ ಸೌಲಭ್ಯ ಸಿಗಲಿದೆ. ಕೆಎಸ್ಆರ್​​​ಟಿಸಿ 35, ಎನ್​​​ಡಬ್ಲ್ಯೂ ಎಸ್ಆರ್​ಟಿಸಿ ನಿಗಮದಿಂದ 26, ಎನ್​​ಇಕೆಎಸ್ಆರ್​​​ಟಿಸಿ 27, ಅಂತರ ರಾಜ್ಯ 21 ಬಸ್ ನಿಲ್ದಾಗಳಲ್ಲಿ ಪ್ರಥಮ ಹಂತದ ಲಾಜಿಸ್ಟಿಕ್ ಕಾರ್ಯನಿರ್ವಹಿಸಲಿದೆ ಎಂದು ತಿಳಿಸಿದರು.

ಕೋವಿಡ್​​​​​ನಿಂದಾಗಿ ಇಲ್ಲಿಯ ತನಕ 2,720 ಕೋಟಿ ರೂ. ಸಾರಿಗೆ ಇಲಾಖೆಗೆ ನಷ್ಟ ಆಗಿದೆ. ಈ ನಷ್ಟ ಭರಿಸಲು ಈ ಯೋಜನೆ ಜಾರಿಗೆ ತರಲಾಗಿದೆ. ಇಲ್ಲಿಯವರೆಗೆ ಖಾಸಗಿಯವರು ಈ ಸೇವೆ ಮಾಡುತ್ತಾ ಇದ್ದಾರೆ. ಈಗ ಸರ್ಕಾರ ಕೂಡ ಕಾರ್ಗೋ ಮತ್ತು ಪಾರ್ಸಲ್ ವ್ಯವಸ್ಥೆ ಮಾಡುತ್ತಿದೆ. ಇದರಿಂದ ವಾರ್ಷಿಕ 70-80 ಕೋಟಿ ರೂ. ಲಾಭದ ನಿರೀಕ್ಷೆ ಇದೆ ಎಂದು ತಿಳಿಸಿದರು.

ಮುಂದಿನ ದಿನಗಳಲ್ಲಿ ಎರಡನೇ ಹಂತದಲ್ಲಿ ಅಗತ್ಯಕ್ಕನುಗುಣವಾಗಿ ಬಸ್ ನಿಲ್ದಾಣಗಳನ್ನು ಹೆಚ್ಚಿಸುವುದರ ಜೊತೆಗೆ ಮನೆ ಬಾಗಿಲಿಗೆ ಸೇವೆ ಒದಗಿಸಲು ಚಿಂತಿಸುತ್ತಿದ್ದೇವೆ ಎಂದರು.

ABOUT THE AUTHOR

...view details