ಬೆಂಗಳೂರು: ಬೆಂಗಳೂರು ಟೆಕ್ ಶೃಂಗಸಭೆ (Bangalore Tech Summit) 2021 ಇಂದು ಅಂತ್ಯಗೊಂಡಿದ್ದು, ಮುಂದಿನ ವರ್ಷ ನವೆಂಬರ್ 16, 17 ಹಾಗೂ 18ರಂದು ಬಿಟಿಎಸ್ 2022 ನಡೆಯಲಿದೆ ಎಂದು ಐಟಿ ಬಿಟಿ ಸಚಿವ ಅಶ್ವತ್ಥ್ ನಾರಾಯಣ (Minister Ashwatha Narayan) ತಿಳಿಸಿದರು.
ಈ ಕುರಿತು ಈಟಿವಿ ಭಾರತ್ ಜೊತೆ ಮಾತನಾಡಿದ ಅವರು, ಈ ವರ್ಷ ಬಿಟಿಎಸ್ ಮೈಸೂರು, ಹುಬ್ಬಳ್ಳಿ ಹಾಗೂ ಮಂಗಳೂರಿನಲ್ಲಿ ಮಿನಿ ಟೆಕ್ ಸಮ್ಮಿಟ್ ನಡೆಸಲಾಯಿತು. ಆದರೆ, ಮುಂದಿನ ವರ್ಷ ಬಿಟಿಎಸ್‌ಗೆ 25 ವರ್ಷ ಆಗಲಿದೆ. ಹಾಗೂ ಬೆಂಗಳೂರಿನ ಸಾಮರ್ಥ್ಯ ಸಾರಲು ಅಮೆರಿಕ ಹಾಗೂ ಇತರೆ ರಾಷ್ಟ್ರಗಳಲ್ಲೂ ಮಿನಿ ಬಿಟಿಎಸ್ ನಡೆಸಲಾಗುವುದು ಎಂದರು.
ಈಟಿವಿ ಭಾರತ ಪ್ರತಿನಿಧಿ ಜೊತೆ ಸಚಿವರ ಮಾತು ಬೆಂಗಳೂರಿಗೆ ಜಿಸಿಸಿಗಳು ಈ ಹಿಂದೆ ಆಫ್ ಶೋರ್ ಎಂದು ಕರೆಯುತ್ತಿದ್ದರು. ಈಗ ಸ್ಪಾಕ್ ಶೋರ್ ಎಂದು ಕರೆಯಬೇಕು. ಚಾಮರಾಜನಗರ ಸೇರಿದಂತೆ ಇನ್ನಿತರೆ ಜಿಲ್ಲೆಗಳಲ್ಲಿ ಹಲವಾರು ಉತ್ಪಾದನಾ ಘಟಕ ಸ್ಥಾಪನೆ ಆಗಲಿದೆ. ಬೆಂಗಳೂರಿನಲ್ಲಿ ಜೆರೊಡ ದೇಶದ 15ರಷ್ಟು ಷೇರು ವಹಿವಾಟಿನ ಪಾಲಿದೆ. ಇದು ರಾಜ್ಯದ ಸಾಮರ್ಥ್ಯ ತೋರಿಸುತ್ತದೆ ಎಂದು ಹೇಳಿದರು.
ಈ ವರ್ಷದ ಬಿಟಿಎಸ್ ಆಶಾದಾಯಕವಾಗಿದ್ದು, ಇಸ್ರೇಲ್ ಹಾಗೂ ಅಮೆರಿಕ ರಾಷ್ಟ್ರಗಳು ಪಾಲ್ಗೊಂಡಿದ್ದರು. ಇದರಿಂದ ಬಾಂಧವ್ಯ ಹೆಚ್ಚಲಿದೆ ಎಂದು ತಿಳಿಸಿದರು.
ಓದಿ:'ಅಮೆರಿಕದ ಸ್ಟಾರ್ಟಪ್‌ಗಳಿಗೆ ಇಲ್ಲಿಂದಲೇ ಕೆಲಸ ನಿರ್ವಹಿಸಲು 'ಸ್ಟಾರ್ಟಪ್ ಸಿಲಿಕ್ಯಾನ್ ವ್ಯಾಲಿ ಬ್ರಿಡ್ಜ್ 'ರಚನೆ'