ಬೆಂಗಳೂರು :ರಾಜಕೀಯ ಲಾಭಕ್ಕಾಗಿ ಕಾಂಗ್ರೆಸ್ ಪಾದಯಾತ್ರೆ ಮಾಡುತ್ತಿದೆ ಎಂದು ಐಟಿ, ಬಿಟಿ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಡಾ. ಸಿ.ಎನ್. ಅಶ್ವತ್ಥ್ ನಾರಾಯಣ ಹೇಳಿದರು.
ಮಲ್ಲೇಶ್ವರಂ ಲಸಿಕಾ ಕೇಂದ್ರ ಉದ್ಘಾಟನೆ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಮ್ಮ ಸಿಎಂ ಬಸವರಾಜ ಬೊಮ್ಮಾಯಿಯವರು ನೀರಾವರಿ ಯೋಜನೆ, ಈ ವಿಚಾರದ ಬಗ್ಗೆ ಜ್ಞಾನ, ತಿಳುವಳಿಕೆ ಇರುವ ವ್ಯಕ್ತಿ. ಮೇಕೆದಾಟು ವಿಚಾರವಾಗಿ ಎರಡು ಉಭಯ ಸದನದಲ್ಲಿ ಸರ್ಕಾರದ ನಿಲುವು ಮತ್ತು ಯೋಚನೆ ಬಗ್ಗೆ ತಿಳಿಸಲಾಗಿದೆ. ಯಾವ ರೀತಿ ಕಾರ್ಯ ರೂಪಕ್ಕೆ ತರುತ್ತೇವೆ ಎಂಬುದು ಸ್ಪಷ್ಟವಾಗಿದೆ ಎಂದರು.
ಪ್ರತಿಪಕ್ಷಗಳು ಅವರ ಅಧಿಕಾರಾವಧಿಯಲ್ಲಿ ಮೇಕೆದಾಟು ವಿಚಾರದಲ್ಲಿ ಯಾವುದೇ ಪ್ರಾಮಾಣಿಕ ಪ್ರಯತ್ನ ಮಾಡಿಲ್ಲ. ರಾಜಕೀಯ ಲಾಭಕ್ಕಾಗಿ ಹಾಗೂ ಜನರ ದಿಕ್ಕನ್ನು ತಪ್ಪಿಸುವ ಸಲುವಾಗಿ ಕಾಂಗ್ರೆಸ್ ಅವಕಾಶವಾದಿ ರಾಜಕಾರಣ ಮಾಡುತ್ತಿದೆ. ಹಾಗಾಗಿ, ಪಾದಯಾತ್ರೆಯನ್ನು ಹಮ್ಮಿಕೊಂಡಿದೆ ಎಂದು ವ್ಯಂಗ್ಯವಾಡಿದರು.