ಬೆಂಗಳೂರು :ನಾಳೆಗೆ ನಿಗದಿಯಾಗಿದ್ದ ಮೇಯರ್ ಉಪಮೇಯರ್ ಚುನಾವಣೆ ಮುಂದೂಡಿಕೆ ಮಾಡಲು ರಾಜ್ಯ ಸರ್ಕಾರ ಕಸರತ್ತು ಆರಂಭಿಸಿದೆ.
ಬಿಜೆಪಿಯಲ್ಲಿ ಮೇಯರ್ ಅಭ್ಯರ್ಥಿ ಆಯ್ಕೆ ಅಂತಿಮವಾಗದ ಹಿನ್ನೆಲೆಯಲ್ಲಿ ಮತ್ತು ಸ್ಥಾಯಿ ಸಮಿತಿ ಹಾಗೂ ಮೇಯರ್ ಚುನಾವಣೆ ಜೊತೆಯಾಗಿ ನಡೆಸುವ ಕುರಿತು ಗೊಂದಲ ಇರುವುದರಿಂದ ಸಿಎಂ ಯಡಿಯೂರಪ್ಪ, ಚುನಾವಣೆ ಮುಂದೂಡುವಂತೆ ನಗರಾಭಿವೃದ್ಧಿ ಇಲಾಖೆಗೆ ಸೂಚನೆ ನೀಡಿದ್ದಾರೆ ಎನ್ನಲಾಗುತ್ತಿದೆ. ಈ ಕುರಿತು ನಗರಾಭಿವೃದ್ಧಿ ಇಲಾಖೆಯಿಂದ ಪ್ರಾದೇಶಿಕ ಚುನಾವಣಾ ಆಯೋಗಕ್ಕೆ ಸೂಚನೆ ಹೋಗಲಿದೆ.
ಆದರೆ, ಈ ಬಗ್ಗೆ ಇನ್ನೂ ಮಾಹಿತಿ ಬಂದಿಲ್ಲ ಎಂದು ಪ್ರಾದೇಶಿಕ ಚುನಾವಣಾ ಆಯುಕ್ತರಾದ ಹರ್ಷಗುಪ್ತ ತಿಳಿಸಿದ್ದಾರೆ. ಸಕಾರಣವಿಲ್ಲದೇ ಚುನಾವಣೆ ಮುಂದೂಡಿಕೆ ಸಾಧ್ಯವಿಲ್ಲ ಎಂದಿದ್ದಾರೆ. ಹೀಗಾಗಿ ಬಿಬಿಎಂಪಿ ಕೌನ್ಸಿಲ್ ಸಭಾಂಗಣದಲ್ಲಿ ಸಿದ್ಧತೆ ಭರದಿಂದ ಸಾಗಿದೆ.
ಮೇಯರ್ ಉಪಮೇಯರ್ ಚುನಾವಣೆ ಮುಂದೂಡಿಕೆ ಮೇಯರ್ ಉಪಮೇಯರ್ ಹಾಗೂ ಸ್ಥಾಯಿ ಸಮಿತಿ ಚುನಾವಣೆಗೆ ಅಧಿಸೂಚನೆ ಹೊರಡಿಸಲಾಗಿತ್ತು. ಆದ್ರೆ, ಕೋರ್ಟ್ನಲ್ಲಿ ಎಂಟು ಸ್ಥಾಯಿ ಸಮಿತಿಗಳ ಚುನಾವಣೆಗೆ ತಡೆ ನೀಡಿದ್ದರಿಂದ ನಾಲ್ಕು ಸ್ಥಾಯಿ ಸಮಿತಿ ಹಾಗೂ ಮೇಯರ್ ಚುನಾವಣೆ ನಡೆಸಲಾಗುತ್ತೆ ಎಂದಿದ್ದರು. ಆದರೆ, ನಾಲ್ಕು ಸಮಿತಿಯಲ್ಲಿ ಆರೋಗ್ಯ, ಮುಜಾಹಿದ್ ಹಾಗೂ ಮಾರುಕಟ್ಟೆ ಸ್ಥಾಯಿ ಸಮಿತಿಯ ಇಸ್ತಿಯಾಕ್, ಚುನಾವಣೆ ತಡೆಕೋರಿ ಕೋರ್ಟ್ ಮೆಟ್ಟಿಲೇರಲು ನಿರ್ಧರಿಸಿದ್ದಾರೆ.
ಹೀಗಾಗಿ ಒಂದು ವೇಳೆ ನಾಳೆ ಚುನಾವಣೆ ನಡೆದರೆ, ಮೇಯರ್- ಉಪಮೇಯರ್, ತೆರಿಗೆ, ಆರ್ಥಿಕ ಹಾಗೂ ಲೆಕ್ಕಪತ್ರ ಸ್ಥಾಯಿ ಸಮಿತಿಗೆ ಚುನಾವಣೆ ನಡೆಯಬಹುದು. ಚುನಾವಣೆ ಮುಂದೂಡುವ ಕುರಿತು ಸಿಎಂ ಸೂಚನೆ ಹಿನ್ನೆಲೆ ನಗರಾಭಿವೃದ್ಧಿ ಇಲಾಖೆ ಕಾನೂನಿನ ಸಾಧ್ಯತೆಗಳನ್ನು ಹುಡುಕುತ್ತಿದೆ.