ಕರ್ನಾಟಕ

karnataka

ETV Bharat / state

ಬೆಂಗಳೂರಿನಲ್ಲಿ ಇನ್ಮುಂದೆ ಮಳೆ ಬಂದ್ರೆ ಭಯ ಬೇಡ,ಬರುತ್ತೆ ಮೇಘ ಸಂದೇಶ.. - ಕಂದಾಯ ಸಚಿವ ಆರ್​ ಅಶೋಕ್​

ಕಂದಾಯ ಇಲಾಖೆಯಡಿ ಬರುವ ವಿಪತ್ತು ನಿರ್ವಹಣೆಗಾಗಿ ರಾಜ್ಯ ಸರ್ಕಾರ 1036 ಕೋಟಿ ರೂ. ಮೀಸಲಿಟ್ಟಿದೆ. 308 ಕೋಟಿ ರೂ. ಮೊದಲ ಹಂತದಲ್ಲಿ ಬಿಡುಗಡೆಯಾಗಿದ್ದು, ನಿರಾಶ್ರಿತರಿಗಾಗಿ ಕಟ್ಟಡ ನಿರ್ಮಾಣ ಮಾಡಲಾಗುತ್ತದೆ.

sdwdd
ಮೇಘ ಸಂದೇಶ ಆ್ಯಪ್​

By

Published : Jun 6, 2020, 3:30 PM IST

ಬೆಂಗಳೂರು :ಮೇಘ ಸಂದೇಶ.. ಹೌದು ಇದು ನಗರದ ಮಳೆ, ಮೋಡ, ಸಿಡಿಲು, ಗಾಳಿಯ ಮುನ್ನೆಚ್ಚರಿಕೆ ಕುರಿತ ಇಂಚಿಂಚೂ ಮಾಹಿತಿ ಕೊಡುವ ಮೊಬೈಲ್ ಆ್ಯಪ್. ಪ್ರವಾಹ ಪರಿಸ್ಥಿತಿ ಉಂಟಾದರೂ ಮೊದಲೇ ಎಚ್ಚರಿಕೆ ನೀಡಲಿದೆ.

ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ಹಾಗೂ ಭಾರತೀಯ ವಿಜ್ಞಾನ ಸಂಸ್ಥೆ ಈ ಆ್ಯಪ್ ಸಿದ್ಧಪಡಿಸಿದ್ದು, ಕೆಎಸ್‌ಎನ್‌ಡಿಎಂಸಿ ಕಚೇರಿಯಲ್ಲಿ ಕಂದಾಯ ಸಚಿವರಾದ ಆರ್ ಅಶೋಕ್ ಚಾಲನೆ ನೀಡಿದರು. ಇದರ ಜೊತೆಗೆ ವರುಣಮಿತ್ರ ವೆಬ್‌ಸೈಟ್​ಗೆ ಕೂಡಾ ಚಾಲನೆ ಸಿಕ್ಕಿದ್ದು, ನಗರದ ಪ್ರತಿ ಪ್ರದೇಶದ ಮಳೆ ಮಾಹಿತಿ ಸಿಗಲಿದೆ.

ಮೇಘ ಸಂದೇಶ ಆ್ಯಪ್​

ಈ ಬಗ್ಗೆ ಮಾತನಾಡಿರುವ ಸಚಿವ ಆರ್​ ಅಶೋಕ್, ಮೇಘ ಸಂದೇಶ ಆ್ಯಪ್ ವಿಶೇಷವಾಗಿ ತಯಾರಾಗಿದೆ. ಪ್ರಸ್ತುತ ಹವಾಮಾನ ಮುನ್ಸೂಚನೆ, ಮುಂದಿನ ಮೂರು ದಿನಗಳ ಹವಾಮಾನ ವರದಿ, ಪ್ರವಾಹದ ಅಡ್ಡಿಯಿಲ್ಲದೆ ಪ್ರಯಾಣಿಸಬಹುದಾದ ಸುರಕ್ಷಿತ ಮಾರ್ಗದ ಸೂಚನೆ, ಪ್ರಸ್ತುತ ಗುಡುಗು, ಸಿಡಿಲು, ಮಳೆ ಹಾಗೂ ಮಳೆ ಪಲ್ಸ್ ರಾಡ್, ಮಳೆ ಸಂದರ್ಭದಲ್ಲಿ ಸುರಕ್ಷತಾ ಸಲಹೆ, ತುರ್ತು ಪರಿಸ್ಥಿತಿಯಲ್ಲಿ ಪಾಲಿಕೆಯ ನಿಯಂತ್ರಣ ಕೊಠಡಿ ಸಂಪರ್ಕ ಮತ್ತು ವರುಣಮಿತ್ರ ಅಂತರ್ಜಾಲ ತಾಣದಲ್ಲಿ 24 ಗಂಟೆಯ ಸಂಚಿತ ಮಳೆ ಮಾಹಿತಿ ಸಿಗಲಿದೆ.

ಕಂದಾಯ ಇಲಾಖೆಯಡಿ ಬರುವ ವಿಪತ್ತು ನಿರ್ವಹಣೆಗಾಗಿ ರಾಜ್ಯ ಸರ್ಕಾರ 1036 ಕೋಟಿ ರೂ. ಮೀಸಲಿಟ್ಟಿದೆ. 308 ಕೋಟಿ ರೂ. ಮೊದಲ ಹಂತದಲ್ಲಿ ಬಿಡುಗಡೆಯಾಗಿದ್ದು, ನಿರಾಶ್ರಿತರಿಗಾಗಿ ಕಟ್ಟಡ ನಿರ್ಮಾಣ ಮಾಡಲಾಗುತ್ತದೆ. ಒಟ್ಟಿನಲ್ಲಿ ಮಳೆಗಾಲದಲ್ಲಿ ನಗರದ ಜನರ ಬವಣೆ ತಪ್ಪಿಸಲು ಬಿಬಿಎಂಪಿ ಹಾಗೂ ಸರ್ಕಾರ ತಂತ್ರಜ್ಞಾನದ ಬಾಗಿಲು ತಟ್ಟಿದೆ. ಈ ಮಾರ್ಗ ಎಷ್ಟು ಯಶಸ್ವಿಯಾಗಲಿದೆ ಎಂದು ಕಾದು ನೋಡಬೇಕಿದೆ.

ABOUT THE AUTHOR

...view details