ಬೆಂಗಳೂರು: ಲೈಂಗಿಕ ಶೋಷಣೆಗೆ ಒಳಗಾಗಿ, ಮಾನಸಿಕವಾಗಿ ಜರ್ಜರಿತವಾದ ಮಹಿಳೆಯ ಬದುಕು ಕಟ್ಟಿಕೊಡುತ್ತಿದೆ ಮಾಸ್ಕ್ ತಯಾರಿಕೆ ಕೆಲಸ. ದೇಶಾದ್ಯಂತ ಭಾರಿ ಬೇಡಿಕೆ ವಸ್ತುವಾಗಿರುವ ಮಾಸ್ಕ್ಗಳನ್ನು ಈ ಮಹಿಳೆಯರು ತಯಾರಿಸುತ್ತಿದ್ದಾರೆ. ಇವರ ಕೆಲಸಕ್ಕೆ ಬೆನ್ನೆಲುಬಾಗಿ ನಿಂತಿರುವುದು, ನಗರ ಪೊಲೀಸ್ ಆಯುಕ್ತ ಕಚೇರಿಯಲ್ಲಿರುವ ವನಿತ ಸಹಾಯ ವಾಣಿ ಕಚೇರಿ ಎಂಬುದು ವಿಶೇಷ.
ಮಾಸ್ಕ್ ತಯಾರಿಕೆಗೆ ಮುಂದಾದ ಲೈಂಗಿಕ ಶೋಷಿತೆಯರು
ಬೆಂಗಳೂರಿನ ವನಿತ ಸಹಾಯ ವಾಣಿಯಿಂದ ಲೈಂಗಿಕ ಶೋಷಣೆಗೆ ಒಳಗಾದ ಮಹಿಳೆಯರಿಗೆ ತರಬೇತಿ ನೀಡಿ, ಮಾಸ್ಕ್ ತಯಾರಿಕೆ ಮಾಡಿಸಲಾಗುತ್ತಿದೆ ಎಂದು ವನಿತ ಸಹಾಯ ವಾಣಿ ಅಧ್ಯಕ್ಷೆ ರಾಣಿ ಶೆಟ್ಟಿ ಹೇಳಿದರು.
ಅನೇಕ ಸಮಸ್ಯೆಗಳನ್ನು ಹೊತ್ತು ಸಹಾಯವಾಣಿಗೆ ಬರುವ ಮಹಿಳೆಯರಿಗೆ ಸ್ವಾವಲಂಬನೆ ಬದುಕು ಕಟ್ಟಿಕೊಡುತ್ತಿದೆ. ಸುಮಾರು 25 ಮಹಿಳೆಯರಿಗೆ ಮಾಸ್ಕ್ ಹಾಗೂ ಇತರೆ ವಸ್ತುಗಳ ತಯಾರಿಕೆ ತರಬೇತಿ ನೀಡಿಲಾಗಿದೆ. ಉಚಿತವಾಗಿ ಹೊಲಿಗೆ ಯಂತ್ರಗಳನ್ನು ನೀಡಿದ್ದು, 10 ಮಹಿಳೆಯರು ಮನೆಯಲ್ಲಿ ಮಾಸ್ಕ್ಗಳನ್ನು ತಯಾರಿಸಿ ಕೊಡುತ್ತಿದ್ದಾರೆ ಎಂದು ವನಿತ ಸಹಾಯವಾಣಿ ಅಧ್ಯಕ್ಷೆ ರಾಣಿ ಶೆಟ್ಟಿ ಈಟಿವಿ ಭಾರತ ಸಂದರ್ಶನದಲ್ಲಿ ತಿಳಿಸಿದರು.
ಸಮಸ್ಯೆಗಳ ಬಗ್ಗೆ ಕೌನ್ಸಿಲಿಂಗ್ ಮಾಡಿ, ಜೊತೆಗೆ ಟೈಲರಿಂಗ್, ಕ್ಯಾಂಡಲ್ ಮೇಕಿಂಗ್ ಹೀಗೆ ಅನೇಕ ರೀತಿಯ ತರಬೇತಿ ನೀಡಲಾಗುತ್ತದೆ. ಕೋವಿಡ್-19ನಿಂದ ಬೇಡಿಕೆ ಇರುವ ಮಾಸ್ಕ್ಗಳನ್ನು ತಯಾರಿಸಿ, 10 ರೂಪಾಯಿಗೆ ಒಂದನ್ನು ಮಾರಾಟ ಮಾಡಲಾಗುತ್ತಿದೆ ಎಂದರು.