ಕರ್ನಾಟಕ

karnataka

ETV Bharat / state

BBMP ವ್ಯಾಪ್ತಿಯಲ್ಲಿ ಮಾರ್ಷಲ್‌ಗಳ ಕಾರ್ಯಾಚರಣೆ: ನಿಯಮ‌ ಉಲ್ಲಂಘಿಸಿದ್ರೆ ದಂಡ ಫಿಕ್ಸ್ - ಕೋವಿಡ್ ಮಾರ್ಗಸೂಚಿ ಉಲ್ಲಂಘಿಸಿದ್ರೆ ದಂಡ

ಬೆಂಗಳೂರಿನಲ್ಲಿ ಮತ್ತೆ ಕೊರೊನಾ ಕೇಸ್​ಗಳು ಹೆಚ್ಚಳವಾಗುವ ಆತಂಕ ಎದುರಾಗಿದೆ. ಈ ಹಿನ್ನೆಲೆ ಕ್ರಮಕ್ಕೆ ಮುಂದಾಗಿರುವ ಬಿಬಿಎಂಪಿ ಮಾರ್ಷಲ್​ಗಳನ್ನು ನೇಮಿಸುತ್ತಿದ್ದು, ಕೋವಿಡ್ ಮಾರ್ಗಸೂಚಿ ಉಲ್ಲಂಘಿಸಿದರೆ ಸಾರ್ವಜನಿಕರು ದಂಡ ತೆರಬೇಕು.‌

Corona rules
ಕೋವಿಡ್ ಮಾರ್ಗಸೂಚಿ ಉಲ್ಲಂಘಿಸಿದ್ರೆ ದಂಡ

By

Published : Aug 4, 2021, 3:53 PM IST

ಬೆಂಗಳೂರು: ಬೆಂಗಳೂರಿನಲ್ಲಿ ಸೋಂಕು ಹೆಚ್ಚಳವಾಗುತ್ತಿರುವ ಆತಂಕದ ಹಿನ್ನೆಲೆ 8 ವಲಯಗಳಲ್ಲಿ ಮಾರ್ಷಲ್ಸ್‌ಗಳು ಕಾರ್ಯಾಚರಣೆಗಿಳಿದಿದ್ದಾರೆ. ಮಾಸ್ಕ್, ಸಾಮಾಜಿಕ ಅಂತರ ಉಲ್ಲಂಘಿಸಿದರೆ ಮುಲಾಜಿಲ್ಲದೇ ಮಾರ್ಷಲ್‌ಗಳು ದಂಡ ವಿಧಿಸಲಿದ್ದಾರೆ.

ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಇಳಿಕೆಯಾಗುತ್ತಿದ್ದರೆ, ನಗರದಲ್ಲಿ ಮಾತ್ರ ಸೋಂಕಿತರ ಸಂಖ್ಯೆ ಇಳಿಕೆಯಾಗುತ್ತಿಲ್ಲ. ಎರಡನೇ ಅಲೆಯಲ್ಲಿ ಮಾಡಿದ ಲಾಕ್‌ಡೌನ್‌ನಿಂದಾಗಿ ಕೊಂಚ ಮಟ್ಟಿಗೆ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ ಇಳಿಮುಖವಾಗಿತ್ತು. ಅನ್‌ಲಾಕ್ ನಂತರವೂ ಕೂಡ ಸರ್ಕಾರ ಕೋವಿಡ್ ನಿಯಮಗಳನ್ನ ಕಟ್ಟುನಿಟ್ಟಾಗಿ ಪಾಲಿಸಬೇಕು ಅಂತ ಆದೇಶ ಹೊರಡಿಸಿತ್ತು. ಇಷ್ಟಾದ್ರೂ ಕೂಡ ಸಿಲಿಕಾನ್ ಸಿಟಿಯಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ ಮಾತ್ರ ಇಳಿಕೆಯಾಗುತ್ತಿಲ್ಲ. ಹೀಗಾಗಿ ಬಿಬಿಎಂಪಿ ವ್ಯಾಪ್ತಿಯಲ್ಲಿ ಮಾರ್ಷಲ್‌ಗಳಿಂದ ತೀವ್ರ ಕಾರ್ಯಾಚರಣೆ ಮಾಡಲು ಆದೇಶ ನೀಡಲಾಗಿದೆ.

ಸಿಲಿಕಾನ್​ ಸಿಟಿಯಲ್ಲಿ ಕೊರೊನಾ ಸೋಂಕು ಹೆಚ್ಚಳವಾಗುತ್ತಿರುವ ಆತಂಕದ ಹಿನ್ನೆಲೆ 8 ವಲಯಗಳಲ್ಲಿ ಮಾರ್ಷಲ್ಸ್‌ಗಳು ಕಾರ್ಯಾಚರಣೆಗಿಳಿದಿದ್ದಾರೆ. ಮಾಸ್ಕ್, ಸಾಮಾಜಿಕ ಅಂತರ ಉಲ್ಲಂಘಿಸಿದ್ರೆ ಮಾರ್ಷಲ್‌ಗಳು ದಂಡ ವಿಧಿಸಲಿದ್ದಾರೆ.

ತೀವ್ರ ಕಾರ್ಯಾಚರಣೆ ನಡೆಯುವ ಪ್ರದೇಶಗಳು:

- ಅಂಗಡಿ ಮುಂಗಟ್ಟುಗಳು
- ಹೋಟೆಲ್ಸ್, ರೆಸ್ಟೋರೆಂಟ್, ಬಾರ್
- ಮಾಲ್​ಗಳು ಸಿನಿಮಾ ಥಿಯೇಟರ್​​ಗಳು
- ಮಾರುಕಟ್ಟೆ ಪ್ರದೇಶಗಳು
- ಧಾರ್ಮಿಕ ಕೇಂದ್ರಗಳಾದ ದೇವಾಲಯ, ಚರ್ಚ್, ಮಸೀದಿ
- ಬಸ್ ನಿಲ್ದಾಣ, ಮೆಟ್ರೋ, ರೈಲು ನಿಲ್ದಾಣಗಳು
- ಮದುವೆ, ಸಭೆ, ಸಮಾರಂಭ ನಡೆಯುವ ಪ್ರದೇಶಗಳು
- ಟ್ರಾಫಿಕ್ ಸಿಗ್ನಲ್​ಗಳ‌ ಬಳಿ ಮಾರ್ಷಲ್​ಗಳು ಕಾರ್ಯಾಚರಣೆಗಿಳಿದಿದ್ದಾರೆ.

ABOUT THE AUTHOR

...view details