ಬೆಂಗಳೂರು: ಕ್ಷಣಕ್ಷಣಕ್ಕೂ ರಾಜಧಾನಿ ಬೆಂಗಳೂರು ಬಿಡುವವರ ಸಂಖ್ಯೆ ಹೆಚ್ಚಾಗುತ್ತಿದ್ದು, ಗಂಟುಮೂಟೆ ಕಟ್ಟಿಕೊಂಡು ಊರಿನತ್ತ ಮುಖ ಮಾಡುತ್ತಿರುವವರಿಂದ ರೈಲು ನಿಲ್ದಾಣದಲ್ಲಿ ಜನರ ಸಂಖ್ಯೆ ಹೆಚ್ಚಾಗಿದೆ.
ಲಾಕ್ಡೌನ್ ಭೀತಿಗೆ ರಾಜಧಾನಿಯಿಂದ ತಮ್ಮೂರಿನತ್ತ ಜನರ ಪ್ರಯಾಣ ಕೇವಲ ಅಂತಾರಾಜ್ಯ ಮಾತ್ರವಲ್ಲದೇ ಅಂತರ್ಜಿಲ್ಲೆಗೆ ಓಡಾಡುವವರ ಸಂಖ್ಯೆಯಲ್ಲೂ ಹೆಚ್ಚಳ ಕಂಡುಬರುತ್ತಿದೆ. ಮೆಜೆಸ್ಟಿಕ್ ರೈಲ್ವೆ ನಿಲ್ದಾಣದಲ್ಲಿ ಜನಸಂದಣಿ ಹೆಚ್ಚಿದೆ. ಕೆಲಸ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕುವ ಮುನ್ನ ತಮ್ಮೂರು ಸೇರಿದರಾಯ್ತೆಂದು ಜನರು ಸಾಗುತ್ತಿದ್ದಾರೆ.
ಕಾಯ್ದಿರಿಸದ ಟಿಕೆಟ್ ಝೋನ್ನಲ್ಲಿ ಕೂಡ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿ ಕಂಡುಬರುತ್ತಿದ್ದು, ಸಾವಿರಾರು ಜನ ದಿಢೀರನೇ ರಾಜಧಾನಿಯಿಂದ ಊರಿನತ್ತ ಪ್ರಯಾಣ ಬೆಳೆಸಿದ್ದಾರೆ. ಮೆಜೆಸ್ಟಿಕ್ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದಲ್ಲಿ ವಲಸೆ ಕಾರ್ಮಿಕರು ಬ್ಯಾಗುಗಳನ್ನು ಹಿಡಿದು ಸಾಗುತ್ತಿರುವ ದೃಶ್ಯಗಳು ಕಂಡುಬರುತ್ತಿವೆ.
ಇದನ್ನೂ ಓದಿ:ಉದ್ಯೋಗ ಕಳ್ಕೊಂಡು ಸಂಕಷ್ಟದಲ್ಲಿರುವ ಜನರಿಗೆ ನೆರವು ನೀಡಿ: ಸಿಎಂಗೆ ಸಿದ್ದರಾಮಯ್ಯ ಪತ್ರ