ಬೆಂಗಳೂರು:ಲಾಲ್ಬಾಗ್ನಲ್ಲಿ ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ಮಂಡಳಿಯು ಮಾವು ಮೇಳ ಆಯೋಜಿಸಿದೆ.ರಾಸಾಯನಿಕ ಬಳಸದೇ ಸಹಜವಾಗಿ ಮಾಗಿದ ಮಾವಿನ ಹಣ್ಣನ್ನು ಮಧ್ಯವರ್ತಿಗಳ ಹಾವಳಿ ಇಲ್ಲದೇ ನೇರವಾಗಿ ಗ್ರಾಹಕರಿಗೆ ಮಾರಾಟ ಮಾಡಲಾಗುತ್ತಿದ್ದು, ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ.
ಲಾಲ್ಬಾಗ್ನಲ್ಲಿ ಮಾವು ಮೇಳ: ಜನರಿಂದ ಉತ್ತಮ ಪ್ರತಿಕ್ರಿಯೆ
ಮಧ್ಯವರ್ತಿಗಳ ಹಾವಳಿ ತಪ್ಪಿಸಿ, ಮಾವು ಬೆಳೆಗಾರರಿಗೆ ಉತ್ತಮ ಬೆಲೆ ಕೊಡಿಸುವ ಉದ್ದೇಶದಿಂದ ಲಾಲ್ಬಾಗ್ನಲ್ಲಿ ಮಾವು ಮೇಳ ಆಯೋಜಿಸಲಾಗಿದೆ. ಇಲ್ಲಿ ನೈಸರ್ಗಿಕವಾಗಿ ಮಾಗಿಸಿದ ಹಣ್ಣುಗಳನ್ನು ಮಾತ್ರ ಮಾರಾಟ ಮಾಡಲಾಗುತ್ತಿದ್ದು, ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ.
ಇಲ್ಲಿ ನೈಸರ್ಗಿಕವಾಗಿ ಮಾಗಿಸಿದ ಹಣ್ಣುಗಳನ್ನು ಮಾತ್ರ ಮಾರಾಟ ಮಾಡಲಾಗುತ್ತಿದೆ. ಹಣ್ಣಿನ ಪ್ರಮಾಣ ಹಾಗೂ ಗುಣಮಟ್ಟದ ಆಧಾರದ ಮೇಲೆ ಎರಡು ದಿನಕ್ಕೊಮ್ಮೆ ದರ ಕೂಡ ಬದಲಾಗುತ್ತದೆ. ಇಲ್ಲಿ ನಡೆಯುತ್ತಿರುವ ಮೇಳದಲ್ಲಿ ಕೋಲಾರ, ಚಿಂತಾಮಣಿ, ರಾಮನಗರ, ಶ್ರೀನಿವಾಸಪುರ ತಾಲೂಕು ಸೇರಿದಂತೆ ಮತ್ತಿತರ ಭಾಗಗಳ ಹಣ್ಣುಗಳು ಬಂದಿವೆ. ಬಾದಾಮಿ, ರಸಪುರಿ, ಸೆಂಧುರಾ, ಮಲ್ಲಿಕಾ, ನೀಲಂ, ತೋತಾಪುರಿ, ಮಲಗೋವಾ, ಆಮ್ರಪಾಲಿ, ಬಂಗನಪಲ್ಲಿ ಮತ್ತಿತರ ತಳಿಯ ಮಾವುಗಳು ಇಲ್ಲಿವೆ.
ಈ ಬಾರಿ ಹಲವು ಹೊಸ ಬಗೆಯ ತಳಿಗಳನ್ನು ಕೂಡ ಪರಿಚಯಿಸಲಾಗಿದೆ. ನೈಸರ್ಗಿಕವಾಗಿ ಮಾಗಿಸಿದ ಹಣ್ಣುಗಳನ್ನು ಮಾತ್ರ ಮಾರಾಟ ಮಾಡಲಾಗುತ್ತಿದೆ. ಕಳೆದ ವರ್ಷ ಮಂಡಳಿಯಿಂದ ಆಯೋಜಿಸಿದ್ದ ಮೇಳದಲ್ಲಿ 950ಕ್ಕೂ ಹೆಚ್ಚು ಟನ್ ಮಾವು ಮಾರಾಟವಾಗಿತ್ತು. ಈ ವರ್ಷ ಈಗಾಗಲೇ 100ಕ್ಕೂ ಹೆಚ್ಚು ಟನ್ ಮಾವು ಮಾರಾಟವಾಗಿದೆ.