ಬೆಂಗಳೂರು:ವ್ಯಕ್ತಿಯೊಬ್ಬ ಯುವತಿಗೆ ಲೈಂಗಿಕ ಕಿರುಕುಳ ನೀಡಿರುವ ಘಟನೆ ಭಾನುವಾರ ಸಂಜೆ ನಗರದ ಪ್ರತಿಷ್ಠಿತ ಮಾಲ್ವೊಂದರಲ್ಲಿ ನಡೆದಿದೆ. ಸಂಜೆ 6.30ರ ಸುಮಾರಿಗೆ ಮಾಲ್ನಲ್ಲಿದ್ದ ಮಹಿಳೆಯರು, ಯುವತಿಯರನ್ನು ಆಕ್ಷೇಪಾರ್ಹವಾಗಿ ಸ್ಪರ್ಶಿಸಿ ವಿಕೃತವಾಗಿ ವರ್ತಿಸುತ್ತಿದ್ದ ವ್ಯಕ್ತಿಯನ್ನು ಯುವಕನೊಬ್ಬ ಗಮನಿಸಿ ವಿಡಿಯೋ ಮಾಡಿದ್ದಾನೆ.
ಇನ್ಸ್ಟಾಗ್ರಾಂ ಪೋಸ್ಟ್ನಲ್ಲಿರುವುದಿಷ್ಟು: ’’ಮಾಲ್ನಲ್ಲಿ ವ್ಯಕ್ತಿಯೊಬ್ಬ ಅಸಭ್ಯವಾಗಿ ವರ್ತಿಸುತ್ತಿದ್ದನು. ಅನುಮಾನಗೊಂಡು ಹಿಂಬಾಲಿಸಿದಾಗ ಆರೋಪಿ ನಿರಂತರವಾಗಿ ಕಿರುಕುಳ ನೀಡುತ್ತಾ ಓಡಾಡುತ್ತಿರುವುದು ಕಂಡು ಬಂದಿತು. ಆರೋಪಿಯ ಅಸಭ್ಯ ವರ್ತನೆಯನ್ನು ವಿಡಿಯೋ ಮಾಡಿಕೊಂಡ ಮಾಲ್ನ ಆಡಳಿತ ಮಂಡಳಿ ಮತ್ತು ಭದ್ರತಾ ಸಿಬ್ಬಂದಿಗೆ ತಿಳಿಸಿದ್ದೆ. ಭದ್ರತಾ ಸಿಬ್ಬಂದಿ ಆರೋಪಿಗಾಗಿ ಮಾಲ್ನಲ್ಲಿ ಹುಡುಕಾಟ ನಡೆಸಿದ್ರು. ಆದ್ರೆ ಆರೋಪಿ ಅಷ್ಟರಲ್ಲೇ ಪರಾರಿಯಾಗಿದ್ದನು. ಮಾಲ್ನ ಆಡಳಿತ ಮಂಡಳಿ ಮತ್ತು ಭದ್ರತಾ ಸಿಬ್ಬಂದಿ ಈ ಘಟನೆ ಬಗ್ಗೆ ಕ್ರಮ ತೆಗೆದುಕೊಳ್ಳುವುದಾಗಿ ತಿಳಿಸಿದ್ದಾರೆ‘‘ ಎಂದು ಯುವಕ ತನ್ನ ಇನ್ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾನೆ.