ಬೆಂಗಳೂರು: ಪೊಲೀಸ್ ಠಾಣೆಗಳ ಬಗ್ಗೆ ಜನರಲ್ಲಿರುವ ಭಯವನ್ನು ಹೋಗಲಾಡಿಸಲು ಹಾಗೂ ಮಕ್ಕಳಲ್ಲಿ ಪೊಲೀಸರ ಬಗ್ಗೆ ಒಳ್ಳೆಯ ಅಭಿಪ್ರಾಯ ಮೂಡಿಸಲು ಈಗಾಗಲೇ ಎಚ್ಎಸ್ಆರ್ ಲೇಔಟ್, ಕೋರಮಂಗಲ ಠಾಣೆಗಳ ಬಳಿಕ ಇದೀಗ ಮಡಿವಾಳ ಪೊಲೀಸ್ ಠಾಣೆಯಲ್ಲಿಯೂ ಚಿಣ್ಣರಿಗಾಗಿ ಪ್ಲೇ ಹೋಮ್ ನಿರ್ಮಿಸಿದ್ದಾರೆ.
ಚಿಣ್ಣರಿಗಾಗಿ ಠಾಣೆ ಆವರಣದಲ್ಲಿ ಪ್ಲೇ ಹೋಮ್ ನಿರ್ಮಿಸಿದ ಮಡಿವಾಳ ಪೊಲೀಸರು..!
ಮಕ್ಕಳ ಮನಸ್ಸಿನಲ್ಲಿ ಪೊಲೀಸರ ಬಗ್ಗೆ ಇರುವ ಭಯವನ್ನು ಶಾಶತ್ವವಾಗಿ ಹೋಗಲಾಡಿಸಲು ಪೊಲೀಸ್ ಠಾಣೆ ಆವರಣದಲ್ಲಿ ಪ್ರತ್ಯೇಕ ಕೊಠಡಿಯಲ್ಲಿ ಚಿಣ್ಣರಿಗಾಗಿ ಆಟಿಕೆ ಸಾಮಾನು, ಜಾರೆಬಂಡೆ, ಉಯ್ಯಾಲೆ ಹಾಕುವ ಮೂಲಕ ಪ್ಲೇ ಹೋಮ್ ಸೃಷ್ಟಿಸಿದ್ದಾರೆ.
ನಗರ ಈಶಾನ್ಯ ವಿಭಾಗದ ಡಿಸಿಪಿ ಇಶಾಪಂತ್ ನೇತೃತ್ವದಲ್ಲಿ ಮಡಿವಾಳ ಪೊಲೀಸರು ಪ್ಲೇ ಹೋಮ್ ನಿರ್ಮಿಸಿದ್ದಾರೆ. ಪೊಲೀಸ್ ಠಾಣೆಗೆ ದೂರು ನೀಡಲು ಬರುವ ಸಂತ್ರಸ್ತೆಯರು ಕೆಲವೊಮ್ಮೆ ಗಂಟೆಗಟ್ಟಲೇ ಠಾಣೆಯಲ್ಲೇ ಇರಬೇಕಾಗುತ್ತದೆ. ಬಹುತೇಕ ಮಹಿಳೆಯರು ತಮ್ಮ ಮಕ್ಕಳನ್ನು ಠಾಣೆಗೆ ಕರೆತಂದಿರುತ್ತಾರೆ. ಈ ವೇಳೆ ಪೂರ್ವಾಗ್ರಹಪೀಡಿತದಂತೆ ಅಳುಕಿನಿಂದಲೇ ಪೊಲೀಸರ ನೆರಳಲ್ಲಿ ಇರಬೇಕಾದ ಸಂದಿಗ್ದ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಇದರಿಂದ ಮಕ್ಕಳ ಮನಸ್ಸಿನಲ್ಲಿ ಪೊಲೀಸರ ಬಗ್ಗೆ ಇರಬೇಕಾದ ಗೌರವ ಬದಲು ಭಯ ಆವರಿಸುತ್ತದೆ.
ಮಕ್ಕಳ ಮನಸ್ಸಿನಲ್ಲಿ ಪೊಲೀಸರ ಬಗ್ಗೆ ಇರುವ ಭಯವನ್ನು ಶಾಶತ್ವವಾಗಿ ಹೋಗಲಾಡಿಸಲು ಪೊಲೀಸ್ ಠಾಣೆ ಆವರಣದಲ್ಲಿ ಪ್ರತ್ಯೇಕ ಕೊಠಡಿಯಲ್ಲಿ ಚಿಣ್ಣರಿಗಾಗಿ ಆಟಿಕೆ ಸಾಮಾನು, ಜಾರೆಬಂಡೆ, ಉಯ್ಯಾಲೆ ಹಾಕುವ ಮೂಲಕ ಪ್ಲೇ ಹೋಮ್ ಸೃಷ್ಟಿಸಿದ್ದಾರೆ. ಇದರಿಂದ ಪೋಷಕರೊಂದಿಗೆ ಠಾಣೆಗೆ ಬರುವ ಮಕ್ಕಳು ಈ ಕೊಠಡಿಯಲ್ಲಿ ಆಟವಾಡಿ ಕಾಲ ಕಳೆಯಬಹುದಾಗಿದೆ.