ಕರ್ನಾಟಕ

karnataka

ಅಲಯನ್ಸ್ ವಿವಿ ಹಣ ಕಬಳಿಕೆ ಆರೋಪ: ಇಡಿ ವಿಚಾರಣೆಗೆ ಮಧುಕರ್ ಹಾಜರು

ಮನಿ ಲಾಂಡರಿಂಗ್ ಮತ್ತು ಅಲಯನ್ಸ್ ವಿಶ್ವವಿದ್ಯಾಲಯದ ಹಣವನ್ನು ಅಕ್ರಮವಾಗಿ ವಿದೇಶಗಳಿಗೆ ವರ್ಗಾವಣೆ ಮಾಡಿರುವ ಆರೋಪಕ್ಕೆ ಸಂಬಂಧಿಸಿದಂತೆ ಮಧುಕರ್ ಅಂಗೂರ್ ಬೆಂಗಳೂರಿನ ಶಾಂತಿನಗರ ಬಳಿ ಇರುವ ಜಾರಿ ನಿರ್ದೇಶನಾಲಯ ಕಚೇರಿಗೆ ಆಗಮಿಸಿ ಇಡಿ ವಿಚಾರಣೆ ಎದುರಿಸುತ್ತಿದಾರೆ.

By

Published : Dec 2, 2020, 2:10 PM IST

Published : Dec 2, 2020, 2:10 PM IST

banglore
ಇಡಿ ವಿಚಾರಣೆಗೆ ಮಧುಕರ್ ಹಾಜರು

ಬೆಂಗಳೂರು: ಮನಿ ಲಾಂಡರಿಂಗ್ ಮತ್ತು ಅಲಯನ್ಸ್ ವಿಶ್ವವಿದ್ಯಾಲಯದ ಹಣವನ್ನು ಅಕ್ರಮವಾಗಿ ವಿದೇಶಗಳಿಗೆ ವರ್ಗಾವಣೆ ಮಾಡಿರುವ ಬಗ್ಗೆ ಮಾಹಿತಿ ಕಲೆ ಹಾಕುತ್ತಿರುವ ಇಡಿ ಸದ್ಯ ಅಲಯನ್ಸ್ ವಿಶ್ವವಿದ್ಯಾಲಯದ ಮಾಜಿ ವೈಸ್​ ಚಾನ್ಸಲರ್​ ಮಧುಕರ್ ಅಂಗೂರ್​ಗೆ ನೋಟಿಸ್ ನೀಡಿತ್ತು. ಹೀಗಾಗಿ ಶಾಂತಿನಗರ ಬಳಿ ಇರುವ ಜಾರಿ ನಿರ್ದೇಶನಾಲಯ ಕಚೇರಿಗೆ ಆಗಮಿಸಿ ಇಡಿ ವಿಚಾರಣೆ ಎದುರಿಸುತ್ತಿದಾರೆ.

ಶಾಂತಿನಗರ ಬಳಿ ಇರುವ ಜಾರಿ ನಿರ್ದೇಶನಾಲಯ ಕಚೇರಿಗೆ ಆಗಮಿಸಿದ ಮಧುಕರ್ ಅಂಗೂರ್

ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ ಉಲ್ಲಂಘನೆ ಆರೋಪ ಇವರ ಮೇಲಿದೆ. ಇವರು 100 ಕೋಟಿ ರೂಪಾಯಿ ಸಾರ್ವಜನಿಕ ಹಣ ದುರುಪಯೋಗ ಮಾಡಿದ ಬಗ್ಗೆ ಇಡಿ ಮಾಹಿತಿ ಕಲೆ ಹಾಕಿದ್ದಾರೆ. ಸದ್ಯ ಮಧುಕರ್ ಅಂಗೂರ್ ಸಾವಿರಾರು ಪುಟಗಳ‌ ದಾಖಲಾತಿಗಳನ್ನು‌ ಇಡಿ ಕಛೇರಿಗೆ ತಂದಿದ್ದು, ಎಲ್ಲಾ ದಾಖಲಾತಿಗಳನ್ನು ಇಡಿ ಅಧಿಕಾರಿಗಳ‌ ಮುಂದೆ ಹಾಜರು ಪಡಿಸಲಿದ್ದಾರೆ.

ಸದ್ಯ ಕಳೆದ ಒಂದು ಗಂಟೆಯಿಂದ‌ ಮಧುಕರ್ ವಿಚಾರಣೆಯನ್ನು ಇಡಿ ಅಧಿಕಾರಿಗಳು ನಡೆಸುತ್ತಿದ್ದು, ಸರಿಯಾದ ದಾಖಲಾತಿ ನೀಡದೆ ಹೋದರೆ ಬಂಧನಕ್ಕೊಳಗಾಗುವ ಸಾಧ್ಯತೆಯಿದೆ. ಹಾಗೆ 100 ಕೋಟಿ ಹಣವನ್ನು ರಾಜಕಾರಣಿಗಳು ಸೇರಿ ಹಲವಾರು ಮಂದಿಗೆ ವರ್ಗಾವಣೆ ಮಾಡಿರುವ ಆರೋಪ ಕೂಡ ಮಧುಕರ್ ಮೇಲಿದ್ದು, ಸದ್ಯ ತನಿಖೆ ಮುಂದುವರೆದಿದೆ.

ABOUT THE AUTHOR

...view details