ಕರ್ನಾಟಕ

karnataka

ETV Bharat / state

ಡಿಕೆಶಿ ಸದ್ಯವೇ ಜೈಲಿಗೆ ಹೋಗಲಿದ್ದಾರೆ : ರಾಜ್ಯ ಬಿಜೆಪಿ ವಕ್ತಾರ ಎಂ. ಜಿ ಮಹೇಶ್ - ಡಿ ಕೆ ಶಿವಕುಮಾರ್ ವಿರುದ್ಧ ಇಡಿ ಚಾರ್ಜ್​ ಶೀಟ್​ ಸಲ್ಲಿಕೆ ಬಗ್ಗೆ ಎಂ ಜಿ ಮಹೇಶ್​ ಹೇಳಿಕೆ

ಕಾಂಗ್ರೆಸ್‍ನ ರಾಷ್ಟ್ರೀಯ ನಾಯಕರು ಮತ್ತು ಕೆಪಿಸಿಸಿ ಅಧ್ಯಕ್ಷರು ಜಾಮೀನಿನಲ್ಲಿದ್ದಾರೆ ಎಂದು ಬಿಜೆಪಿ ಯಾವಾಗಲೂ ಹೇಳುತ್ತಿತ್ತು. ಕೊತ್ವಾಲ್ ರಾಮಚಂದ್ರ ಸ್ಕೂಲ್ ಆಫ್ ಥಾಟ್‍ನಿಂದ ಬಂದ ಡಿ. ಕೆ ಶಿವಕುಮಾರ್ ಅವರ ಒಟ್ಟು ರಾಜಕೀಯ ಯಾತ್ರೆ ನೋಡಿದರೆ ಕ್ರಿಮಿನಲ್ ಚಟುವಟಿಕೆಯ ಆಧಾರದಲ್ಲೇ ಅವರು ರಾಜಕೀಯ ಪ್ರವರ್ಧಮಾನಕ್ಕೆ ಬಂದಿದ್ದರು ಎಂಬುದು ತಿಳಿಯುತ್ತದೆ ಎಂದು ರಾಜ್ಯ ಬಿಜೆಪಿ ಮುಖ್ಯ ವಕ್ತಾರ ಎಂ. ಜಿ ಮಹೇಶ್ ಅವರು ಹೇಳಿದ್ದಾರೆ.

ಎಂ. ಜಿ ಮಹೇಶ್
ಎಂ. ಜಿ ಮಹೇಶ್

By

Published : May 26, 2022, 9:48 PM IST

ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಕ್ರಿಮಿನಲ್ ಚಟುವಟಿಕೆಯ ಕಾರಣಕ್ಕಾಗಿ ಸದ್ಯದಲ್ಲೇ ಜೈಲಿಗೆ ಹೋಗಲಿದ್ದಾರೆ ಎಂದು ರಾಜ್ಯ ಬಿಜೆಪಿ ಮುಖ್ಯ ವಕ್ತಾರ ಎಂ. ಜಿ ಮಹೇಶ್ ಅವರು ತಿಳಿಸಿದರು.

ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ”ದಲ್ಲಿ ಮಾತನಾಡಿದ ಅವರು, ಬಹಳ ಚರ್ಚೆಯಲ್ಲಿದ್ದ ಮನಿ ಲಾಂಡರಿಂಗ್ ಪ್ರಕರಣದ ಸಂಬಂಧ ಕರ್ನಾಟಕ ರಾಜ್ಯ ಕಾಂಗ್ರೆಸ್‍ನ ಅಧ್ಯಕ್ಷ ಡಿ. ಕೆ ಶಿವಕುಮಾರ್ ಹಲವು ದಿನಗಳಿಂದ ಜಾಮೀನಿನಲ್ಲಿದ್ದರು. ಇವತ್ತು ಕೋರ್ಟ್ ಮುಂದೆ ಇ. ಡಿ (ಜಾರಿ ನಿರ್ದೇಶನಾಲಯ) ಚಾರ್ಜ್‍ಶೀಟ್ ಸಲ್ಲಿಸಿದೆ.

ಬಿಜೆಪಿ ಮುಖ್ಯ ವಕ್ತಾರ ಎಂ. ಜಿ ಮಹೇಶ್ ಅವರು ಮಾತನಾಡಿದರು

ಅವರ ಕ್ರಿಮಿನಲ್ ಚಟುವಟಿಕೆ ಹಾಗೂ ಮನಿ ಲಾಂಡರಿಂಗ್ ಚಟುವಟಿಕೆಯಡಿ ಸುಮಾರು 8.90 ಕೋಟಿ ಹಣ ಲಭಿಸಿತ್ತು. ಕಳೆದ 16-17 ತಿಂಗಳುಗಳಿಂದ ಜಾಮೀನಿನಡಿ ಇದ್ದರು. ಇದೀಗ ತನಿಖೆ ಮಾಡಿದ ಇ.ಡಿ. ಕೋರ್ಟ್‍ಗೆ ಚಾರ್ಜ್‍ಶೀಟ್ ಸಲ್ಲಿಸಿದೆ ಎಂದು ವಿವರಿಸಿದರು.

ಡಿಕೆಶಿ ವಿರುದ್ಧ ಮಹೇಶ್​ ಆರೋಪಗಳ ಸುರಿಮಳೆ: ಕಾಂಗ್ರೆಸ್‍ನ ರಾಷ್ಟ್ರೀಯ ನಾಯಕರು ಮತ್ತು ಕೆಪಿಸಿಸಿ ಅಧ್ಯಕ್ಷರು ಜಾಮೀನಿನ ಮೇಲೆ ಹೊರಗಡೆ ಇದ್ದಾರೆ ಎಂದು ಬಿಜೆಪಿ ಯಾವಾಗಲೂ ಹೇಳುತ್ತಿತ್ತು. ಕೊತ್ವಾಲ್ ರಾಮಚಂದ್ರ ಸ್ಕೂಲ್ ಆಫ್ ಥಾಟ್‍ನಿಂದ ಬಂದ ಡಿ. ಕೆ ಶಿವಕುಮಾರ್ ಅವರ ಒಟ್ಟು ರಾಜಕೀಯ ಯಾತ್ರೆಯನ್ನು ನೋಡಿದರೆ ಕ್ರಿಮಿನಲ್ ಚಟುವಟಿಕೆಯ ಆಧಾರದಲ್ಲೇ ಅವರು ರಾಜಕೀಯ ಪ್ರವರ್ಧಮಾನಕ್ಕೆ ಬಂದಿದ್ದರು ಎಂಬುದು ತಿಳಿಯುತ್ತದೆ ಎಂದರು.

ಚಾರ್ಜ್‍ಶೀಟ್​ನ ಅಂಶಗಳನ್ನು ಗಮನಿಸಿದರೆ ಕೋರ್ಟ್ ಅವರಿಗೆ ದೊಡ್ಡದಾದ ಶಿಕ್ಷೆ ವಿಧಿಸುವುದು ಸ್ಪಷ್ಟವಾಗುತ್ತದೆ ಎಂದರಲ್ಲದೇ, ನೈತಿಕತೆ ಬಗ್ಗೆ ಸದಾ ಮಾತನಾಡುವ ಕಾಂಗ್ರೆಸ್‍ನವರು ಈ ಚಾರ್ಜ್‍ಶೀಟ್ ಆಧಾರದಲ್ಲಿ ಏನು ಉತ್ತರ ಕೊಡುತ್ತಾರೆ ಎಂದು ಪ್ರಶ್ನಿಸಿದರು. ರಾಜಕೀಯ ಪಕ್ಷದ ರಾಜ್ಯಾಧ್ಯಕ್ಷನ ಮೇಲೆ ಈ ಥರ ಗುರುತರ ಆಪಾದನೆ ಇದ್ದ ಸಂದರ್ಭದಲ್ಲಿ ಸಾರ್ವಜನಿಕ ಬದುಕಿನ ಮೌಲ್ಯ ಉಳಿಸಲು ಅವರು ಏನು ಮಾಡುತ್ತಾರೆ ಎಂದು ಅವರು ಇದೇ ವೇಳೆ ಪ್ರಶ್ನಿಸಿದರು.

ಅಪರಾಧೀಕರಣಕ್ಕೆ ಇತಿಶ್ರೀ ಹಾಡಬೇಕು:ರಾಜಕೀಯದಲ್ಲಿ ಇಂಥ ಕ್ರಿಮಿನಲ್ ಶಕ್ತಿಗಳ ವಿಜೃಂಭಣೆ ಮತ್ತು ಇಂತಹ ರಾಜಕೀಯದ ಅಪರಾಧೀಕರಣಕ್ಕೆ ಇತಿಶ್ರೀ ಹಾಕಬೇಕಿದೆ ಎಂದು ಬಿಜೆಪಿ ಪ್ರತಿಪಾದಿಸುತ್ತಿತ್ತು ಎಂದ ಅವರು, ಶಿವಕುಮಾರ್ ಮತ್ತು ಅವರ ಪಕ್ಷ ಇದಕ್ಕೆ ಏನು ಉತ್ತರ ನೀಡುತ್ತದೆ ಎಂದು ಬಿಜೆಪಿ ಪರವಾಗಿ ಪ್ರಶ್ನೆಯನ್ನು ಮುಂದಿಟ್ಟರು. ಇಂಥ ಅನೇಕ ಪ್ರಕರಣಗಳಲ್ಲಿ ಕಾಂಗ್ರೆಸಿಗರು ಇರುವುದು ಮುಂದಿನ ದಿನಗಳಲ್ಲಿ ಕಂಡು ಬರಲಿದೆ.

ಅರ್ಕಾವತಿ ರೀಡು ಸೇರಿದಂತೆ ಅನೇಕ ಪ್ರಕರಣಗಳ ತನಿಖೆ ನಡೆಯುತ್ತಿದೆ. ಶೀಘ್ರವೇ ಕಾಂಗ್ರೆಸಿಗರು ಅಪರಾಧ ಚಟುವಟಿಕೆಯು ಕರ್ನಾಟಕದ ಜನರಿಗೆ ಜಗಜ್ಜಾಹೀರು ಆಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಇ.ಡಿ. ಚಾರ್ಜ್‍ಶೀಟ್ ಆಧಾರದಲ್ಲಿ ಕಾಂಗ್ರೆಸ್ ಪ್ರತಿಕ್ರಿಯೆ ನೀಡಬೇಕೆಂದು ಅವರು ಒತ್ತಾಯಿಸಿದರು.

ರಾಜಕೀಯ ದುರುದ್ದೇಶ ಇಲ್ಲ:ಈ ಪ್ರಕರಣದಲ್ಲಿ ಬಿಜೆಪಿಗೆ ರಾಜಕೀಯ ದುರುದ್ದೇಶ ಇಲ್ಲ. ಕಳೆದ 8 ವರ್ಷಗಳ ಕಾಲ ನರೇಂದ್ರ ಮೋದಿಯವರ ಸರಕಾರ ಮಾಡಿದ ದೊಡ್ಡ ಪ್ರಮಾಣದ ಅಭಿವೃದ್ಧಿ ಕಾರ್ಯದಿಂದ ಬಿಜೆಪಿ ಜನಮನ್ನಣೆ ಪಡೆದಿದೆ. ಯಾವುದೋ ಪ್ರಕರಣದಲ್ಲಿ ಸಿಲುಕಿಸಿ ಅದರಿಂದ ರಾಜಕೀಯ ಲಾಭ ಮಾಡುವ ಅವಶ್ಯಕತೆ ಬಿಜೆಪಿಗೆ ಇಲ್ಲ ಎಂದರು.

ಕಾಂಗ್ರೆಸ್‍ನವರ ಬಣ್ಣ ಬಯಲಾದಾಗ ಅದು ಇ. ಡಿ ಮೇಲೆ ಆರೋಪ ಹೊರಿಸುತ್ತದೆ. ಕೋರ್ಟ್ ಹೇಳಿದರೆ ಅದನ್ನೂ ಪ್ರಶ್ನಿಸುತ್ತದೆ. ಕಾಂಗ್ರೆಸ್ ತನಗೆ ಲಾಭ ಆಗಬೇಕಿದ್ದರೆ ಕೋರ್ಟ್, ಸಂವಿಧಾನ ಮತ್ತು ಡಾ. ಅಂಬೇಡ್ಕರರ ಹೆಸರನ್ನು ಬಳಸಿಕೊಳ್ಳುತ್ತದೆ. ತನಗೆ ಲಾಭ ಆಗದಿದ್ದರೆ ಎಲ್ಲವನ್ನೂ ಕಾಂಗ್ರೆಸ್ ವಿಸರ್ಜಿಸುತ್ತದೆ ಎಂದು ಟೀಕಿಸಿದರು. ಇದು ಕಾಂಗ್ರೆಸ್ ಪಕ್ಷದ ಹವ್ಯಾಸ ಮತ್ತು ಪರಿಪಾಠ ಎಂದು ಇದೇ ವೇಳೆ ಮಹೇಶ್​ ವ್ಯಂಗ್ಯವಾಡಿದರು.

ಸಾರ್ವಜನಿಕ ಬದುಕಿನಲ್ಲಿ ಭ್ರಷ್ಟಾಚಾರ ಮಾಡಿದ ಲಾಲೂ ಪ್ರಸಾದ್ ಯಾದವ್ ಆರಂಭಿಸಿ ಸುಖ್‍ರಾಮ್ ತನಕ, ಓಂಪ್ರಕಾಶ್ ಚೌಟಾಲರಿಂದ ಡಿ.ಕೆ.ಶಿವಕುಮಾರ್ ತನಕ, ಸೋನಿಯಾ ಗಾಂಧಿಯಿಂದ ರಾಹುಲ್ ಗಾಂಧಿ ತನಕ ಎಲ್ಲರ ಮೇಲೂ ತನಿಖೆ ನಡೆಯುತ್ತಿದೆ. ಇದರಲ್ಲಿ ಯಾರೂ ಹೊರತಲ್ಲ. ಚುನಾವಣೆಗಾಗಿ ಕೇಸ್ ಮಾಡುತ್ತಿಲ್ಲ. ಹಾಗೆ ಮಾಡುತ್ತಿದ್ದರೆ ರಾಜಕಾರಣ ಸುಲಭ ಆಗುತ್ತಿತ್ತು. ಚುನಾವಣೆಗಾಗಿ ಇಂಥ ಸಂಗತಿಗಳನ್ನು ಬಳಸುವುದು ಬಿಜೆಪಿಗೆ ಅವಶ್ಯಕತೆ ಇಲ್ಲ ಎಂದರು.

ಓದಿ:ಶಿಕ್ಷಕರ ಮತಕ್ಷೇತ್ರದಿಂದ ಪ್ರಕಾಶ ಹುಕ್ಕೇರಿ ಸ್ಪರ್ಧೆ ಸರಿಯಲ್ಲ: ಸಚಿವ ಉಮೇಶ್ ಕತ್ತಿ

For All Latest Updates

TAGGED:

ABOUT THE AUTHOR

...view details