ಕರ್ನಾಟಕ

karnataka

ETV Bharat / state

6 ಸಾವಿರ ಲೀ. ಇದ್ದ ಇಂಧನ ಮಾರಾಟ 400 ಲೀ.​ಗೆ: ಪೆಟ್ರೋಲ್​​ ಬಂಕ್​​ಗಳಿಗೆ ಭಾರಿ ನಷ್ಟ - corona news

ಸಾಮಾನ್ಯ ದಿನಗಳಲ್ಲಿ 6,000 ಲೀಟರ್ ಪೆಟ್ರೋಲ್ ಮಾರಾಟ ಮಾಡಲಾಗುತ್ತಿತ್ತು. ಆದರೆ, ಲಾಕ್​ಡೌನ್​ ಹಿನ್ನೆಲೆಯಲ್ಲಿ ಪ್ರತಿನಿತ್ಯ 400 ರಿಂದ 500 ಲೀಟರ್​ ಮಾತ್ರ ಮಾರಾಟ ಆಗುತ್ತಿದೆ ಎಂದು ಪೆಟ್ರೋಲ್​ ಬಂಕ್ ಮಾಲೀಕರ ಸಂಘದ ಅಧ್ಯಕ್ಷ ಬಾಲಾಜಿ ಹೇಳಿದರು.

loss to Petrol bunk from lockdown
ಲಾಕ್​ಡೌನ್​ನಿಂದ ನಷ್ಟ ಅನುಭವಿಸುತ್ತಿರುವ ಪೆಟ್ರೋಲ್ ಬಂಕ್​ಗಳು

By

Published : May 10, 2020, 3:08 PM IST

ಬೆಂಗಳೂರು: ದೇಶದಲ್ಲಿ ಲಾಕ್​ಡೌನ್ ಜಾರಿಯಾದ ದಿನದಿಂದಲೂ ರಸ್ತೆಗಳಲ್ಲಿ ವಾಹನ ಸಂಚಾರ ಸಂಪೂರ್ಣ ಇಳಿಮುಖವಾಗಿದೆ. ರಸ್ತೆಗೆ ವಾಹನಗಳು ಇಳಿಯದ ಕಾರಣ ನಗರದ ಎಲ್ಲಾ ಪೆಟ್ರೋಲ್ ಬಂಕ್​ಗಳು ನಷ್ಟ ಅನುಭವಿಸುತ್ತಿವೆ.

ಮಾರ್ಚ್ 24ರಿಂದ ಅಗತ್ಯ ಸೇವೆ ವಾಹನಗಳಾದ ಆಂಬ್ಯುಲೆನ್ಸ್ , ಪೊಲೀಸ್ ವಾಹನ, ವೈದ್ಯರ ವಾಹನ, ಸ್ವಿಗ್ಗಿ ಜೊಮೊಟೋ ದಂತ ವಾಹನಗಳಿಗೆ ಮಾತ್ರ ಪೆಟ್ರೋಲ್ ಅಥವಾ ಡೀಸೆಲ್ ಪೂರೈಕೆ ಮಾಡಲಾಗುತ್ತಿದೆ ಎಂದು ಬೆಂಗಳೂರು ಪೆಟ್ರೋಲ್ ಬಂಕ್ ಮಾಲೀಕರ ಸಂಘದ ಅಧ್ಯಕ್ಷ ಬಾಲಾಜಿ ಹೇಳಿದರು.

ಲಾಕ್​ಡೌನ್​ನಿಂದ ನಷ್ಟ ಅನುಭವಿಸುತ್ತಿರುವ ಪೆಟ್ರೋಲ್ ಬಂಕ್​ಗಳು

ಸಾಮಾನ್ಯ ದಿನಗಳಲ್ಲಿ 6,000 ಲೀಟರ್ ಪೆಟ್ರೋಲ್ ಮಾರಾಟ ಮಾಡಲಾಗುತ್ತಿತ್ತು. ಆದರೆ, ಲಾಕ್​ಡೌನ್​ ಹಿನ್ನೆಲೆಯಲ್ಲಿ ಪ್ರತಿನಿತ್ಯ 400 ರಿಂದ 500 ಲೀಟರ್​ ಮಾತ್ರ ಮಾರಾಟ ಆಗುತ್ತಿದೆ ಎಂದರು.

ಇನ್ನು ಮೇ 4 ರಿಂದ ಲಾಕ್ ಡೌನ್ ಸಡಿಲಿಕೆ ಮಾಡಿದ ಕಾರಣ ದಿನಕ್ಕೆ 1000 ರಿಂದ 1200 ಲೀಟರ್ ಪ್ರತಿನಿತ್ಯ ಮಾರಾಟ ಮಾಡಲಾಗುತ್ತಿದೆ. ಲಾಕ್ ಡೌನ್ 3 ರ ಹಲವು ನಿರ್ಬಂಧಗಳನ್ನು ಸರ್ಕಾರ ಕಡಿತಗೊಳಿಸಿ, ಸ್ವಲ್ಪ ಆರ್ಥಿಕ ಪುನಶ್ಚೇತನಕ್ಕೆ ಒತ್ತು ನೀಡಿದ ಹಿನ್ನೆಲೆಯಲ್ಲಿ , ಪ್ರತಿನಿತ್ಯ ಬೆಳಗ್ಗೆ 7 ರಿಂದ ಸಂಜೆ 7 ರ ವರೆಗೆ ನಗರದ ಮುಖ್ಯ ರಸ್ತೆಗಳಲ್ಲಿ ವಾಹನ ಸಂಚಾರವನ್ನು ನೋಡಬಹುದು.

ABOUT THE AUTHOR

...view details