ಬೆಂಗಳೂರು:ರಾಜ್ಯದಲ್ಲಿ ನಾಲ್ಕನೇ ದಿನದ ಲಾಕ್‌ಡೌನ್ ಪ್ರಾರಂಭವಾಗಿದ್ದು, ರಾಜಧಾನಿಯ ಬಹುತೇಕ ರಸ್ತೆಗಳು ಖಾಲಿಯಿರುವುದು ಕಂಡು ಬರುತ್ತಿದೆ.
ಸಾರ್ವಜನಿಕರು ಇನ್ನೂ 11 ದಿನ ಮನೆಯಲ್ಲಿಯೇ ಇರಬೇಕಿದ್ದು, ಖರೀದಿಗೆ ಬೆಳಗ್ಗೆ 10 ಗಂಟೆವರೆಗೆ ಮಾತ್ರ ಕಟ್ಟುನಿಟ್ಟಿನ ಅವಕಾಶ ನೀಡಲಾಗಿದೆ. ಸುಖಾಸುಮ್ಮನೆ ಹೊರ ಬಂದರೆ ಕೇಸ್ ಬೀಳುತ್ತದೆ ಎಂದು ಪೊಲೀಸರು ಎಚ್ಚರಿಕೆ ನೀಡಿದ್ದು, ನಗರದಲ್ಲಿ ಖಾಕಿ ಸರ್ಪಗಾವಲು ಹಾಕಲಾಗಿದೆ.
ಕೊನೆಯ ಕ್ಷಣದಲ್ಲಿ ಖರೀದಿಗೆ ಜನರ ತಾರಾತುರಿ:
10 ಗಂಟೆಯಾದರೂ ಕೆಲ ಬೀದಿಬದಿ ವ್ಯಾಪಾರಸ್ಥರು ಮಾರಾಟ ಮಾಡುತ್ತಿದ್ದು, ಕೊನೆಯ ಕ್ಷಣದಲ್ಲಿ ಖರೀದಿಗೆ ಜನರ ತಾರಾತುರಿ ನೆಡೆದಿದೆ. ಅಗತ್ಯ ವಸ್ತುಗಳನ್ನ ಕೊಳ್ಳುವುದಕ್ಕೆ ರಾಜಧಾನಿಯ ಜನರು ಕೆಲವು ಕಡೆ 10 ಗಂಟೆ ನಂತರವೂ ಕೆಲ ದಿನಸಿ ಅಂಗಡಿ, ಹಣ್ಣಿನ ಅಂಗಡಿಗಳಲ್ಲಿ ಕೊಳ್ಳಲು ಮುಗಿಬಿದ್ದಿರುವುದು ಕಂಡು ಬರುತ್ತಿದೆ.