ಬೆಂಗಳೂರು: ಕೊರೊನಾ ಹಾವಳಿ ಲಾಕ್ಡೌನ್ ಹಿನ್ನೆಲೆ ಇಂಫ್ಯಾಂಟರಿ ರಸ್ತೆಯಲ್ಲಿರುವ ಗಾರ್ಡಿಯನ್ ಬ್ಯಾಂಕ್ ತನ್ನ ಗ್ರಾಹಕರ ಸಾಲಕ್ಕೆ ಶೇ. 50ರಷ್ಟು ವಿನಾಯಿತಿ ನೀಡಿದೆ.
ಗಾರ್ಡಿಯನ್ ಬ್ಯಾಂಕ್ ಗ್ರಾಹಕರ ಸಾಲದ ಶೇ.50 ರಷ್ಟು ಬಡ್ಡಿ ಮನ್ನಾ ಲಾಕ್ಡೌನ್ ಜಾರಿ ಇರುವ ಹಿನ್ನೆಲೆ ಬ್ಯಾಂಕ್ ನ ಆಡಳಿತ ಮಂಡಳಿ ಚರ್ಚೆ ನಡೆಸಿ ತನ್ನ ಗ್ರಾಹಕರ ಸಾಲದ ಬಡ್ಡಿಯ ದರದಲ್ಲಿ ಶೇ 50 ರಷ್ಟು ವಿನಾಯಿತಿ ನೀಡುವುದಾಗಿ ಘೋಷಣೆ ಮಾಡಿದೆ. ಆದರೆ, ಈ ರಿಯಾಯಿತಿ ಎನ್ಪಿಎ ಹೊಂದಿರುವ ಖಾತೆಗಳಿಗೆ ಲಭ್ಯವಿರುವುದಿಲ್ಲ ಎಂದು ಬ್ಯಾಂಕ್ ಸ್ಪಷ್ಟನೆ ನೀಡಿದೆ.
ಗಾರ್ಡಿಯನ್ ಬ್ಯಾಂಕ್ ನಗರದಲ್ಲಿ 6 ಶಾಖೆಗಳಿದ್ದು, 60 ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ. ಸಿಬ್ಬಂದಿಯ ಯಾವುದೇ ಸಂಬಳ ಕಡಿತ ಮಾಡಲಾಗುವುದಿಲ್ಲ ಹಾಗೂ ಕೆಲಸದಿಂದಲೂ ವಜಾ ಗೊಳಿಸುವುದಿಲ್ಲ ಎಂದು ಬ್ಯಾಂಕ್ ತಿಳಿಸಿದೆ.
ಒಟ್ಟಾರೆಯಾಗಿ 30,000 ಗ್ರಾಹಕರನ್ನು ಹೊಂದಿರುವ ಬ್ಯಾಂಕ್ನಲ್ಲಿ 3000 ಸಾಲಗಾರರಿದ್ದು, ಅವರೆಲ್ಲರ ಬಡ್ಡಿ ವಿನಾಯಿತಿಯಿಂದ ಬ್ಯಾಂಕ್ ₹ 67.87 ಲಕ್ಷ ರೂಪಾಯಿ ಮನ್ನಾ ಮಾಡಲಿದೆ ಎಂದು ತಿಳಿಸಿದೆ.