ಕರ್ನಾಟಕ

karnataka

ETV Bharat / state

ಕಿರುತೆರೆಯಲ್ಲಿ ಕೆಲಸ ಮಾಡುವ ಎಲ್ಲರಿಗೂ ಜೀವ ವಿಮೆ: ಶಿವಕುಮಾರ್​​

ನಮ್ಮ ಸಂಘ ಒಮ್ಮತದ ತೀರ್ಮಾನ ಮಾಡಿದ್ದು, ಮೇ 25ರಿಂದ ಶೂಟಿಂಗ್ ಮಾಡಲು ನಿರ್ಧರಿಸಲಾಗಿದೆ. ಹಾಗಾಗಿ ಇಂದಿನಿಂದ ಧಾರಾವಾಹಿ ಶೂಟಿಂಗ್ ಶುರುವಾಗಿದೆ. ಪ್ರತಿಯೊಬ್ಬರೂ ಮಾಸ್ಕ್, ಸ್ಯಾನಿಟೈಸರ್ ಬಳಸಿ ಮುನ್ನೆಚ್ಚರಿಕೆ ವಹಿಸಿ ಶೂಟಿಂಗ್ ಶುರು ಮಾಡಿದ್ದೇವೆ ಎಂದು ಟೆಲಿವಿಷನ್ ಅಸೋಸಿಯೇಷನ್ ಅಧ್ಯಕ್ಷ ಶಿವಕುಮಾರ್ ಹೇಳಿದರು.

ಶಿವಕುಮಾರ್
ಶಿವಕುಮಾರ್

By

Published : May 25, 2020, 5:11 PM IST

ಬೆಂಗಳೂರು: ಕೊರೊನಾ ಭೀತಿ ಹಿನ್ನೆಲೆ ಕಿರುತೆರೆಯಲ್ಲಿ ಕೆಲಸ ಮಾಡುವ ಕಲಾವಿದರು ಹಾಗೂ ಎಲ್ಲಾ ಕಾರ್ಮಿಕರಿಗೆ ಮೂರು ಲಕ್ಷ ರೂ.ಗಳ ಜೀವ ವಿಮೆ ಮಾಡಿಸಿ, ಶೂಟಿಂಗ್ ಶುರು ಮಾಡಲಾಗಿದೆ ಎಂದು ಟೆಲಿವಿಷನ್ ಅಸೋಸಿಯೇಷನ್ ಅಧ್ಯಕ್ಷ ಶಿವಕುಮಾರ್ ತಿಳಿಸಿದ್ದಾರೆ.

ಈ ಕುರಿತು ಮಾತನಾಡಿದ ಅವರು, ಕಳೆದ ಎರಡು ತಿಂಗಳಿನಿಂದ‌ ಕಿರುತೆರೆಯ ಎಲ್ಲಾ ಕೆಲಸಗಳು ಬಂದ್ ಆಗಿದ್ದವು. ಅಲ್ಲದೆ ಸರ್ಕಾರ ನಮ್ಮ ಮನವಿ ಪುರಸ್ಕರಿಸಿ ಮೇ 5ರಂದು ಕೆಲವೊಂದು ಷರತ್ತು ವಿಧಿಸಿ ಚಿತ್ರೀಕರಣಕ್ಕೆ ಅನುಮತಿ ನೀಡಿತ್ತು. ಆದರೆ ನಮ್ಮ ಸಂಘ ಒಮ್ಮತದ ತೀರ್ಮಾನ ಮಾಡಿದ್ದು, ಮೇ 25ರಿಂದ ಶೂಟಿಂಗ್ ಮಾಡಲು ನಿರ್ಧರಿಸಲಾಗಿದೆ. ಹಾಗಾಗಿ ಇಂದಿನಿಂದ ಧಾರಾವಾಹಿ ಶೂಟಿಂಗ್ ಶುರುವಾಗಿದೆ. ಪ್ರತಿಯೊಬ್ಬರು ಮಾಸ್ಕ್, ಸ್ಯಾನಿಟೈಸರ್ ಬಳಸಿ ಮುನ್ನೆಚ್ಚರಿಕೆ ವಹಿಸಿ ಶೂಟಿಂಗ್ ಶುರು ಮಾಡಿದ್ದೇವೆ ಎಂದರು.

ಈಟಿವಿ ಭಾರತದೊಂದಿಗೆ ಮಾತನಾಡಿದ ಶಿವಕುಮಾರ್

ಒಂದು ವೇಳೆ ಶೂಟಿಂಗ್ ಮಾಡುವಾಗ ಕಾರ್ಮಿಕರಿಗಾಗಲಿ, ಕಲಾವಿದರಿಗಾಗಲಿ ಕೊರೊನಾ ಸೋಂಕು ತಗುಲಿದರೆ ಏನು ಮಾಡಬೇಕು ಎಂಬ ಪ್ರಶ್ನೆ ನಮ್ಮಲ್ಲಿ ಉದ್ಭವಿಸಿತ್ತು. ಇದನ್ನು ಗಂಭೀರವಾಗಿ ಪರಿಗಣಿಸಿದ ನಮ್ಮ ಸಂಘ, ಕಿರುತೆರೆ ನಿರ್ಮಾಪಕರು ಹಾಗೂ ವಾಹಿನಿಗಳ ಜೊತೆ ಚರ್ಚಿಸಿ ಧಾರಾವಾಹಿಯಲ್ಲಿ ಕೆಲಸ ಮಾಡುವ ಎಲ್ಲರಿಗೂ 3 ಲಕ್ಷ ಲೈಫ್ ಇನ್ಸೂರೆನ್ಸ್ ಮಾಡಿಸಲಾಗಿದೆ. ಎಲ್ಲರ ಜೀವ ವಿಮೆ ವೆಚ್ಚವನ್ನು ಧಾರಾವಾಹಿ ನಿರ್ಮಾಪಕರೇ ಭರಿಸಲಿದ್ದಾರೆ. ಮುಂದಿನ ದಿನಗಳಲ್ಲಿ ಆ ಹಣವನ್ನು ಅವರ ಸಂಬಳದಲ್ಲಿ ನಿರ್ಮಾಪಕರು ಕಡಿತ ಮಾಡಿಕೊಳ್ಳಲಿದ್ದಾರೆ. ಇಂದಿನಿಂದ ಸುಮಾರು ಇಪ್ಪತ್ತು ಪ್ರೋಗ್ರಾಮ್​ಗಳ ಶೂಟಿಂಗ್ ಶುರುವಾಗಿದೆ ಎಂದು ಟೆಲಿವಿಷನ್ ಅಸೋಸಿಯೇಷನ್ ಅಧ್ಯಕ್ಷ ಶಿವಕುಮಾರ್ ತಿಳಿಸಿದರು.

ಒಳಾಂಗಣ ಶೂಟಿಂಗ್ ಶುರು ಮಾಡಿದ್ದೇವೆ. ಲಾಕ್​ಡೌನ್ ಮುಗಿದ ನಂತರ ಪರಿಸ್ಥಿತಿ ನೋಡಿಕೊಂಡು ನಮ್ಮ ಎಲ್ಲಾ ಚಟಯವಟಿಕೆಗೆ ಅನುವು ಮಾಡಿಕೊಡುವಂತೆ ಸರ್ಕಾರಕ್ಕೆ ಮನವಿ ಮಾಡುತ್ತೇವೆ ಎಂದು ಶಿವಕುಮಾರ್ ಹೇಳಿದರು.

ABOUT THE AUTHOR

...view details