ಬೆಂಗಳೂರು: ಯಾವುದೇ ಎಮರ್ಜೆನ್ಸಿ ಪರಿಸ್ಥಿತಿಯನ್ನು ನಿಭಾಯಿಸಲು ಬೇಸಿಕ್ ಲೈಫ್ ಸಪೋರ್ಟ್ ಬಗ್ಗೆ ಮಾಹಿತಿ ಹೊಂದಿರುವುದು ಅವಶ್ಯಕ. ನವಜಾತ ಶಿಶು, ಮಕ್ಕಳು, ಹಿರಿಯರಲ್ಲಿ ಉಂಟಾಗಬಹುದಾದ ತುರ್ತು ಪರಿಸ್ಥಿತಿಯನ್ನು ಉತ್ತಮವಾಗಿ ನಿಭಾಯಿಸಲು ಈ ಬೇಸಿಕ್ ಲೈಫ್ ಸಪೋರ್ಟ್ ಟ್ರೈನಿಂಗ್ ಸಹಕಾರಿಯಾಗಿದೆ.
ಬೇಸಿಕ್ ಲೈಫ್ ಸಪೋರ್ಟ್ ಕಾರ್ಯಕ್ರಮ ಇದನ್ನು ಗಮನದಲ್ಲಿಟ್ಟುಕೊಂಡು ಹೆಬ್ಬಾಳದ ಕೊಲಂಬಿಯಾ ಏಷ್ಯಾ ಆಸ್ಪತ್ರೆಯವರು ಐಎಂಎ ಯಲಹಂಕದ ವೈದ್ಯರಿಗೆ ಬೇಸಿಕ್ ಲೈಫ್ ಸಪೋರ್ಟ್ ಟ್ರೈನಿಂಗ್ ಕಾರ್ಯಾಗಾರ ನಡೆಸಿದರು. 15ಕ್ಕೂ ಹೆಚ್ಚು ವೈದ್ಯರು ಇದರಲ್ಲಿ ಪಾಲ್ಗೊಂಡಿದ್ದರು. ಬೇಸಿಕ್ ಲೈಫ್ ಸಪೋರ್ಟ್ ಕಾರ್ಯಕ್ರಮ ಬೇಸಿಕ್ ಲೈಫ್ ಸಪೋರ್ಟ್ ಕಾರ್ಯಕ್ರಮ ಬೇಸಿಕ್ ಲೈಫ್ ಸಪೋರ್ಟ್ ಕಾರ್ಯಕ್ರಮ ಈ ಬಗ್ಗೆ ಮಾಹಿತಿ ನೀಡಿದ ಕೊಲಂಬಿಯಾ ಏಷ್ಯಾ ಆಸ್ಪತ್ರೆಯ ಕನ್ಸಲ್ಟೆಂಟ್ ಮತ್ತು ಮುಖ್ಯಸ್ಥ ಡಾ. ಮಹೇಶ್ ಮೈಲಾರಪ್ಪ, ತುರ್ತು ಪರಿಸ್ಥಿತಿಯನ್ನು ನಿಭಾಯಿಸುವುದು ಕೇವಲ ಫಿಸಿಶಿಯನ್ ಅಥವಾ ಹೃದ್ರೋಗ ತಜ್ಞರ ಕೆಲಸವಲ್ಲ. ಪ್ರತಿಯೊಬ್ಬ ವೈದ್ಯರಿಗೂ ಈ ಚಿಕಿತ್ಸೆಯ ಬಗ್ಗೆ ತಿಳುವಳಿಕೆ ಇರಬೇಕು. ಇದರಿಂದ ಜೀವಗಳನ್ನು ಕಾಪಾಡಬಹುದು. ಹೃದಯದ ಸಮಸ್ಯೆ, ವಿಷಯುಣಿಕೆ, ಫ್ರಾಕ್ಚರ್, ನೀರಿನಲ್ಲಿ ಮುಳುಗುವುದು ಇಂತಹ ಸಂದರ್ಭಗಳಲ್ಲಿ ಬೇಸಿಕ್ ಲೈಫ್ ಸಪೋರ್ಟ್ ವಿಧಾನಗಳು ಸಹಾಯಕ್ಕೆ ಬರುತ್ತವೆ ಎಂದರು. ಟ್ರೈನಿಂಗ್ ಬಳಿಕ ಭಾಗವಹಿಸಿದ ಎಲ್ಲಾ ವೈದ್ಯರಿಗೂ ಸರ್ಟಿಫಿಕೇಟ್ ವಿತರಿಸಲಾಯಿತು. ಬೇಸಿಕ್ ಲೈಫ್ ಸಪೋರ್ಟ್ ಕಾರ್ಯಕ್ರಮ